Wednesday, August 6, 2014

ಬರವಣಿಗೆ

ಯಾವುದೇ ಓದು ಅಥವಾ ಬರವಣಿಗೆ ಆ ಮನುಷ್ಯನನ್ನು ಇನ್ನಷ್ಟು ವಿನಯವಂತನನ್ನಾಗಿಸದಿದ್ದರೆ, ಆತ ಬರೆದದ್ದು / ಓದಿದ್ದು ವ್ಯರ್ಥ.


ಬರವಣಿಗೆಯೋ / ಇನ್ಯಾವುದೋ ಕಲಾಪ್ರಕಾರಗಳು ಮೊದಲು ಅದರ ರಚನಕಾರನಿಗೆ ಖುಷಿ ನೀಡಬೇಕು, ಅವುಗಳಲ್ಲಿ ಪ್ರಾಮಾಣಿಕತೆ ಇರಬೇಕು, ಹೊಗಳುಭಟರೇ ತುಂಬಿರುವ ಈಗಿನ ಕಾಲದಲ್ಲಿ ತನ್ನ ರಚನೆಗಳನ್ನು ತಾನೇ ಪುನರ್ವಿಮರ್ಶೆ ಮಾಡಿಕೊಳ್ಳುವ ಅವಶ್ಯಕತೆ ಬಹಳ ಹೆಚ್ಚು. ಜೊತೆಗೆ ಯಾವುದೇ ಕೃತಿ, ಅದರ ಕೃತಿಕಾರನಿಗೆ ತೃಪ್ತಿ ನೀಡಬಾರದು. 

ತನ್ನ ರಚನೆಗಳನ್ನು ತಲುಪುವವರಿಗೆ ತಲುಪಿಸಿದ ನಂತರ, ನಿರಾಳವಾಗಿಬಿಡಬೇಕು, ಅದಕ್ಕೆ ದೊರೆಯುವ ಎಲ್ಲಾ ರೀತಿಯ ಹೊಗಳಿಕೆ / ತೆಗಳಿಕೆ, ಟೀಕೆ, ಟಿಪ್ಪಣಿಗಳನ್ನು ನಿರ್ಲಿಪ್ತವಾಗಿ ಸ್ವೀಕರಿಸುವ ಮನಸ್ಥಿತಿ ಬೆಳೆಸಿಕೊಳ್ಳಬೇಕು. ಸಾಧ್ಯವಿದ್ದರೆ, ಆ ಟೀಕೆಗಳನ್ನು ಮೀರಿ, ತಪ್ಪುಗಳನ್ನು ಸರಿ ಮಾಡಿಕೊಳ್ಳುವತ್ತ ತನ್ನ ಮುಂದಿನ ಹೆಜ್ಜೆಯನ್ನು ಇಡಬೇಕು.



1 comment:

  1. ಚೆನ್ನಾಗಿ ಬರೆದಿದ್ದೀರಿ. ನಿಮ್ಮ ವಾಲ್ ನಲ್ಲಿ ಬರೆದ ಕಮೆಂಟುಗಳನ್ನು ನಾನೋದಿಲ್ಲ. ಆದರೆ ಇದನ್ನೋದಿದಾಗ ಅರ್ಥ ಮಾಡಿಕೊಂಡೆ. ನಿಮ್ಮ ವಿಶ್ಲೇಷಣೆ ಇಷ್ಟವಾಯಿತು. ಕೊನೆಯ ಪಾರದಲ್ಲಿ ನನ್ನ ಭಾವನೆಗಳನ್ನು ಪ್ರತಿನಿಧಿಸಿದ್ದೀರಿ ಎಂದೂ ಅನಿಸಿತು. ನಮಗೆ ಬೇಕಾದದ್ದು ನಮ್ಮ ಮಕ್ಕಳು ನೆಮ್ಮದಿಯಿಂದ ಬದುಕಲು ಬೇಕಾದ ಸಮಾಜ. ಅದಕ್ಕಾಗಿ ಶ್ರಮಿಸಬೇಕಲ್ಲದೆ ಹೀಗೆ ಏನೇನೋ ಧೋರಣೆಗಳನ್ನಿಟ್ಟುಕೊಂಡು ಜಗಳಾಡಿದರೆ ಏನು ಪ್ರಯೋಜನ.? ಸರಿಯಾಗಿ ಹೇಳಿದ್ದೀರಿ.

    ReplyDelete