ಮೈಕೋ ಬಾಷ್ ನಲ್ಲಿ ೯೦ ರ ದಶಕದಲ್ಲಿ ಕಮರ್ಷಿಯಲ್ ಡಿಪ್ಲೋಮಾ ಕೋರ್ಸ್ ಮಾಡಿದವರನ್ನು ಒಂದು ವರ್ಷದ ಟ್ರೇನಿಂಗ್ ಎಂದು ಸೇರಿಸಿಕೊಳ್ಳುತ್ತಿದ್ದರು. ಆ ಸಮಯದಲ್ಲಿ ಚೆನ್ನಾಗಿ ಕೆಲಸ ಮಾಡಿದವರಿಗೆ ಗ್ರೇಡಿಂಗ್ ಕೊಟ್ಟು, ಅವಕಾಶವಿದ್ದರೆ permanent ಕೆಲಸ ಕೂಡ ಕೊಡುತ್ತಿದ್ದರು. ಸರ್ಕಾರಿ ಸಂಬಳಕ್ಕಿಂತ ಎರಡು ಪಟ್ಟು ಜಾಸ್ತಿ ಸಂಬಳ, ತಿಂಡಿ, ಊಟದ ವ್ಯವಸ್ಥೆ, ಹೋಗಲು ಬರಲು ಬಸ್, ಇನ್ನೇನು ಬೇಕು? ಈ ಟ್ರೇನಿಂಗ್ ಗಾಗಿ ಸೇರುವವರಲ್ಲಿ ಹೆಚ್ಚಿನವರು ತುಂಬಾ ಬಡವರಿರುತ್ತಿದ್ದರು. ಡಿಪ್ಲೋಮಾ ಕೋರ್ಸ್ ಮಾಡಿ, ಟ್ರೇನಿಂಗ್ ಗೆ ಸೇರುವವರಿಗೆ ಹೆಚ್ಚಂದ್ರೆ ೧೮ ವರ್ಷವಷ್ಟೆ ಆಗಿರುತ್ತಿತ್ತು. ಇವರನ್ನೆಲ್ಲಾ ನೋಡಿಕೊಳ್ಳೋಕೆ ಟ್ರೇನಿಂಗ್ ಸೆಂಟರ್ ಇತ್ತು. ಅದರ ಹೆಸರೇ MVC (MICO Vocational Centre)
ಪ್ರತಿ ವರ್ಷ ಸುಮಾರು ೨೦ ಜನರು ಆಯ್ದ ಕಾಲೇಜುಗಳಿಂದ ಮೈಕೋದಲ್ಲಿ ಪರೀಕ್ಷೆ ಬರೆದು ಸೆಲೆಕ್ಟ್ ಆಗಿ ಈ ಟ್ರೇನಿಂಗ್ ಸೆಂಟರ್ ಗೆ ಸೇರುತ್ತಿದ್ದರು. ಇದರ ಪ್ರಯೋಜನ ಪಡೆದು, ಜೀವನದಲ್ಲಿ ಮುಂದೆ ಬಂದವರಲ್ಲಿ ನಾನು ಕೂಡ ಒಬ್ಬಳು. ನಮಗೆಲ್ಲಾ ಪ್ರತಿ ತಿಂಗಳಿಗೊಮ್ಮೆ ಬೇರೆ ಬೇರೆ ಕೆಲಸ ಕಲಿಯಲು , ಬೇರೆ ಬೇರೆ ಡಿಪಾರ್ಟ್ಮೆಂಟ್ ಗೆ shuffle ಮಾಡಿ ಹಾಕುತ್ತಿದ್ದರು. ಅಲ್ಲಿ ಚೆನ್ನಾಗಿ ಕೆಲಸ ಮಾಡಿ, ಆಯಾ Incharge ಗಳ ಬಳಿಯಿಂದ ಒಳ್ಳೆಯ ಗ್ರೇಡಿಂಗ್ ತೊಗೊಳ್ಳೋದು ಸಿಕ್ಕಾಪಟ್ಟೆ ಥ್ರಿಲ್ಲಿಂಗ್ ! ಇವನ್ನೆಲ್ಲಾ ನೋಡಿಕೊಳ್ಳೋಕೆ ಅಂತಾ ನಮಗೆಲ್ಲಾ ಒಬ್ಬರು ಮೆಂಟರ್ ಕೂಡ ಇದ್ದರು. ನಮ್ಮನ್ನು ನೋಡಿಕೊಳ್ಳುವ ಜವಾಬ್ದಾರಿಯ ಜೊತೆಗೆ ಅವರು ಅಲ್ಲಿಯ Technical Libraryಯನ್ನು ಕೂಡ ನೋಡಿಕೊಳ್ಳುತ್ತಿದ್ದರು.
ನಾವು ಯಾವುದೇ ಡಿಪಾರ್ಟ್ಮೆಂಟ್ ನಲ್ಲಿ ಕೆಲಸ ಮಾಡ್ತಿರಲಿ, ಅಲ್ಲಿ ಯಾವುದೇ ಸಮಸ್ಯೆಯಾದರೂ ನಾವು ಅಪ್ರೋಚ್ ಮಾಡ್ತಾ ಇದ್ದದ್ದು ಸತ್ಯನಾರಾಯಣ ಸರ್ (ನಮ್ಮ ಮೆಂಟರ್) ಅವರನ್ನೇ. ಎಲ್ಲರೂ ಅವರನ್ನು ಸತ್ಯ ಸರ್ ಅಂತಾ ಕರೀತಿದ್ದರೂ, ನಾನು ಮಾತ್ರ ಸತ್ಯನಾರಾಯಣ ಸರ್ ಅಂತಾ ಪೂರ್ತಿ ಹೆಸರಿನಿಂದ ಕರೀತಿದ್ದೆ. ಯಾಕಂತಾ ಈಗಲೂ ಗೊತ್ತಿಲ್ಲ. ನನಗೆ ಅವರು ನನ್ನ ಮೆಂಟರ್ ಅನ್ನುವುದಕ್ಕಿಂತ ಅವರು ಟೆಕ್ನಿಕಲ್ ಲೈಬ್ರರಿ ನೋಡಿಕೊಳ್ಳುತ್ತಿದ್ದುದು ಅತ್ಯಂತ ಆಕರ್ಷಕ ವಿಷಯವಾಗಿತ್ತು. ಅಲ್ಲಿದ್ದ ಪುಸ್ತಕಗಳಂತೂ ನನ್ನನ್ನು ಯಾವಾಗಲೂ ಸೆಳೆಯುತ್ತಿತ್ತು.
ನನ್ನ ಓದುವ ಹುಚ್ಚು ತಿಳಿದ ನಂತರ, "ಯಾವಾಗ ಬೇಕಿದ್ದರೂ ಬಾ" ಅಂತಾ ಹೇಳಿದ್ದರು. ನನಗೆ ಕನ್ನಡ ಪುಸ್ತಕಗಳನ್ನು ಓದುವಷ್ಟು ಸಲೀಸಾಗಿ ಇಂಗ್ಲೀಷ್ ಓದೋಕಾಗಲ್ಲ (ಈಗಲೂ ಅಷ್ಟೆ) ಆದರೆ ಅಲ್ಲಿದ್ದದ್ದು ಬರೀ ಇಂಗ್ಲೀಷ್ ಪುಸ್ತಕಗಳೇ. ಇದು ಓದು, ಅದು ಓದು ಅಂತಾ ಅಲ್ಲಿದ್ದ ಅನೇಕ ಸೈಕಾಲಜಿ ಸ್ಟಡೀಸ್ ಪುಸ್ತಕಗಳನ್ನು ಓದಲು ಕೊಡುತ್ತಿದ್ದರು. ನನಗೆ Autobiography ಪುಸ್ತಕಗಳ ಹುಚ್ಚು ಹಿಡಿಸಿದವರಂತೂ ಅವರೇ. ನಾವಿಬ್ಬರೂ ಗಂಟೆಗಟ್ಟಲೆ ಎಷ್ಟೋ ಜನರ autobiography ಬಗ್ಗೆ ಚರ್ಚೆ ನಡೆಸಿದ್ದೇವೆ. ಮನುಷ್ಯ ಸ್ವಭಾವದ ಬಗ್ಗೆ, ಈ ಮೈಂಡ್ ಗೇಮ್ ಬಗ್ಗೆ, ಯಾವ ಸಂದರ್ಭಗಳಲ್ಲಿ ಮನುಷ್ಯರು ಹೇಗೆ ನಡೆದುಕೊಳ್ಳುತ್ತಾರೆ ಎಂಬ ಬಗ್ಗೆ ಎಲ್ಲಾ ತುಂಬಾ ಹೊತ್ತು ಮಾತಾಡುತ್ತಿದ್ದೆವು.
ಒಂದು ದಿವಸ ಬೆಳಿಗ್ಗೆ ಅಲ್ಲಿ ಕುಳಿತಿದ್ದಾಗ,ಟ್ರೈನಿಯೊಬ್ಬಳು ಯಾವುದೋ ಕೆಲಸಕ್ಕೆ ಒಳಗೆ ಬಂದಳು. ಇವರು "ಹೇ, ಇವತ್ತು ತುಂಬಾ ಚಂದ ಕಾಣ್ತಿದ್ದೀಯಾ" ಅಂತಾ ಹೇಳಿದ್ರು. ಅವಳು ತುಂಬಾ ಖುಷಿಯಾಗಿ ವಾಪಾಸ್ಸು ಹೋದಳು. ನಾನು "ಅವಳು ಇವತ್ತು ಅಷ್ಟೇನೂ ಚೆನ್ನಾಗಿ ಕಾಣ್ತಿರಲಿಲ್ಲ, ಸುಮ್ನೆ ಹತ್ತಿಸಿದ್ದು ಯಾಕೆ?" ಅಂತಾ ಕೇಳಿದ್ದಕ್ಕೆ ಅವರು ಹೇಳಿದ ಮಾತುಗಳು ಇವತ್ತಿಗೂ ನೆನಪಿನಲ್ಲಿದೆ. "ನೋಡು ರೂಪ್ಸ್, ಅಲ್ಲಿ ಅವಳು ಚಂದ ಕಾಣಿಸ್ತಿದ್ದಳೋ, ಇಲ್ವೋ ಅದಲ್ಲ ಮುಖ್ಯ, ನನ್ನ ಒಂದು ಮಾತಿನಿಂದ ಇವತ್ತೆಲ್ಲಾ ಅವಳು ಖುಷಿಯಾಗಿರ್ತಾಳೆ, ಆ ಖುಷಿ ಅವಳ ಮುಖದಲ್ಲಿ ಪ್ರತಿಫಲಿಸುತ್ತದೆ, ಅದು ಕೆಲಸದಲ್ಲಿ ಕೂಡ ಕಾಣಿಸುತ್ತದೆ. ಅದು " ಚಂದ" ಅಲ್ವಾ? ಅದೇ ನೀನು ಯಾರಿಗಾದರೂ ಚೆನ್ನಾಗಿರುವವರಿಗೆ "ಯಾಕೆ ಹೀಗಿದ್ದೀರಿ? ಹುಷಾರಿಲ್ವಾ? ಅಂತಾ ಕೇಳಿ ನೋಡು. ಸಂಜೆ ಆಗುವ ಹೊತ್ತಿಗೆ ಆತನಿಗೆ ಜ್ವರ ನಿಜವಾಗಿಯೂ ಬಂದಿಲ್ಲ ಅಂದ್ರೆ ಆಮೇಲೆ ಮಾತಾಡು" ಅಂದಿದ್ರು. ಹೌದಲ್ವಾ? ಅನ್ನಿಸಿತ್ತು.
ಈ ತರಹದ ಎಷ್ಟೋ ಸಣ್ಣ ಸಣ್ಣ ಪಾಸಿಟಿವ್ ವಿಷಯಗಳನ್ನು ಅಂದ್ರೆ ಎಷ್ಟೇ ಕಷ್ಟವಿದ್ದರೂ ನಗ್ತಾ ನಗ್ತಾ ಇರೋದು, ಪಾಸಿಟಿವ್ ಆಗಿ ಯೋಚಿಸೋದು, ಹೀಗೆ..... ನನ್ನ ಜೀವನದಲ್ಲಿ ಅಳವಡಿಸಿಕೊಂಡದ್ದು ನಾನು ಅವರಿಂದಾಗಿಯೇ. ಮೊನ್ನೆ ನಾನು ಫೇಸ್ಬುಕ್ ನಲ್ಲಿ ಡಿಪಿ ಬದಲಾಯಿಸಿದಾಗ, ಯಾರೋ ಫೇಸ್ಬುಕ್ ಫ್ರೆಂಡ್ ಒಬ್ಬರೂ ಹೇಳಿದ್ರು. "ನೀವು ಎಲ್ಲಾ ಫೋಟೋಗಳಲ್ಲಿ ನಗ್ತಾನೇ ಇರ್ತೀರಾ, ನಿಮ್ಮ ಜೊತೆಯಲ್ಲಿದ್ದೋರು ಸೀರಿಯಸ್ ಆಗಿದ್ರೂ ಕೂಡ" ಅಂತಾ. ನಗು ಮುಖ ಅಂದ್ರೆ ನಂಗಿಷ್ಟ. ಯಾರಿಗೆ ಆಗಲಿ ನಾನು ವಿಷ್ ಮಾಡೋದು ಕೂಡ "ಸದಾ ಖುಷಿಯಿಂದಿರಿ" ಅಂತಾನೇ ಎಂದು ಉತ್ತರಿಸಿದ್ದೆ. ಅದು ಕೂಡ ಸತ್ಯನಾರಾಯಣ ಸರ್ ಮತ್ತು ನನ್ನ ಕಾಲೇಜಿನ ರವೀಂದ್ರ ಸರ್ ಹೇಳಿಕೊಟ್ಟ ಪಾಠವೇ ಅದು.
ಮೈಕೋ ಬಿಟ್ಟೆ, ಜೀವನದ ಹಾದಿಯೇ ಬದಲಾಯಿತು, ನಾಲ್ಕೈದು ವರ್ಷಗಳ ಹಿಂದೆ ಸತ್ಯನಾರಾಯಣ ಸರ್ ನ ಯಾರದೋ ಮದುವೆಯಲ್ಲಿ ಭೇಟಿಯಾಗಿದ್ದೆ. ನಾನು ಮನೆ ಕಟ್ಟಿರುವ ಕಥೆ ಕೇಳಿ ಸಂತೋಷಪಟ್ಟಿದ್ದರು. ನಮ್ಮ ಮನೆಗೆ ನೀವು ಬರಲೇಬೇಕು ಅಂತಾ ಫೋರ್ಸ್ ಮಾಡಿದ್ದೆ. ಹು ಅಂದಿದ್ರು. ನನ್ನ ಈ ಅಭ್ಯುದಯಕ್ಕೆ ನೀವು ಕೂಡ ಬಹು ಮುಖ್ಯ ಪಾತ್ರ ವಹಿಸಿದ್ದೀರಿ ಅಂದಾಗ ಅವರ ಕಣ್ಣಲ್ಲಿ ಕಂಡ ಮಿಂಚು ನನಗಿನ್ನೂ ನೆನಪಿನಲ್ಲಿದೆ. ಆದರೆ ಅವರ ಫೋನ್ ನಂಬರ್ ಕಳೆದುಹೋಯಿತು. ಮತ್ತೆ ನಾನು ಭೇಟಿಯಾಗಲೂ ಇಲ್ಲಾ. ಇವತ್ತು ಅವರು ಹೃದಯಾಘಾತದಿಂದ ತೀರಿಕೊಂಡರಂತೆ! ಅವರಿದ್ದಾಗಲೇ ನಾನಿದನ್ನೆಲ್ಲಾ ಬರೀಬೇಕಿತ್ತು! :( ಯಾಕೋ ಗೊತ್ತಿಲ್ಲ, ಬರೆಯಲಿಲ್ಲ! ಇವತ್ತು ಈ ಕ್ಷಣ ಅವರಿಗೆ ಈ ಮೂಲಕ ಶ್ರದ್ಧಾಂಜಲಿ ಸಲ್ಲಿಸಬೇಕಂತ ಅನ್ನಿಸಿತು.
ಟೆಕ್ನಾಲಜಿ ಎಷ್ಟು ಮುಂದುವರೆದಿದೆ ಅಂದರೆ ನಾನು ಹೋಗಿ ನೋಡೋಕಾಗಲ್ಲ ಅಂತಾ ಗೆಳೆಯನೊಬ್ಬ ವಿಡಿಯೋ ಕಾಲ್ ಮಾಡಿ, ಅವರ ಮುಖ ತೋರಿಸಿದ! ಅವರು ಬದುಕಿದ್ದಾಗ ಹೋಗಿ ಬರಬೇಕಿತ್ತು! ತುಂಬಾ ಮಾತಾಡಬೇಕಿತ್ತು ಅನ್ನೋ ಕೊರಗು ಶಾಶ್ವತವಾಗಿ ಉಳಿದುಬಿಡ್ತು! :(

No comments:
Post a Comment