Tuesday, December 30, 2014

ಪ್ರೀತಿಯ ತತ್ವ

ಪ್ರೀತಿಯ ತತ್ವ

ಬೆಟ್ಟಗಳು ನದಿಯಲ್ಲಿ ಮಿಂದೇಳಬಹುದು,
ನದಿಗಳು ಸಮುದ್ರದೊಟ್ಟಿಗೆ;
ಸುರಸುಂದರ ಗಾಳಿಯು ಸಿಹಿ ಭಾವನೆಗಳ
ಜೊತೆಯಲ್ಲಿ ಲೀನವಾಗಬಹುದು
ಈ ಜಗತ್ತಿನಲ್ಲಿ ಒಬ್ಬಂಟಿ ಯಾರೂ ಕೂಡ ಅಲ್ಲ
ದೈವಿಚ್ಛೆಯಲಿ ಒಬ್ಬರು ಮತ್ತೊಬ್ಬರ ಆಸರೆ
ಪಡೆದಿರುವಾಗ, ನಾನ್ಯಾಕೆ ನಿನ್ನೊಟ್ಟಿಗೆ
ಬೆರೆಯಬಾರದು?

ನೋಡಲ್ಲಿ, ಪರ್ವತಗಳು ಸ್ವರ್ಗಕ್ಕೆ ಮುತ್ತನೀಯುತ್ತಿವೆ
ಅಲೆಗಳು ಒಂದನ್ನೊಂದು ತಬ್ಬಿ ಹಿಡಿಯುತ್ತಿವೆ,
ಒಡಹುಟ್ಟಿದ ಹೂಗಳು ತನ್ನ ಸಂಬಂಧಿ ಹೂಗಳನ್ನು
ಅಲಕ್ಷಿಸುವುದು ಅಕ್ಷಮ್ಯ ಅಪರಾಧ;
ಸೂರ್ಯನ ಕಿರಣಗಳು ಭೂಮಿಯನ್ನು ಬಳಸಿವೆ,
ಚಂದಿರನ ತಂಬೆಳಕು ಸಮುದ್ರವನ್ನು ಚುಂಬಿಸುತ್ತಿದೆ;
ನೀ ನನ್ನನ್ನು ಅಪ್ಪಿ ಮುದ್ದಿಸದಿದ್ದರೆ, ಪ್ರಕೃತಿಯ
ಈ ಚುಂಬಕ ಶಕ್ತಿಗಳಿಗೆ ಬೆಲೆಯಾದರೂ ಇದೆಯೇ?

Love's Philosophy

The fountains mingle with the river,
And the rivers with the ocean;
The winds of heaven mix forever
With a sweet emotion;
Nothing in the world is single;
All things by a law divine
In another's being mingle--
Why not I with thine?

See, the mountains kiss high heaven,
And the waves clasp one another;
No sister flower could be forgiven
If it disdained its brother;
And the sunlight clasps the earth,
And the moonbeams kiss the sea;--
What are all these kissings worth,
If thou kiss not me?

‎Percy Bysshe Shelley‬

http://www.poemhunter.com/percy-bysshe-shelley/

ಒಂದು ವೇಳೆ

ಒಂದು ವೇಳೆ

ಎಲ್ಲರೂ ನಿನ್ನನ್ನು ದೋಷಿಯನ್ನಾಗಿಸಿ ತಮ್ಮ ತಪ್ಪಿಗೆ ನಿನ್ನನ್ನೇ
ಆರೋಪಿಸುತ್ತಿದ್ದಾಗ, ನೀ ತಲೆ ಎತ್ತಿ ಓಡಾಡುವೆಯಾದರೆ;
ಮನುಷ್ಯರೆಲ್ಲರೂ ನಿನ್ನನ್ನು ಅನುಮಾನಿಸುತ್ತಿದ್ದು, ನೀನದಕ್ಕೆ
ಅವಕಾಶ ಕೊಡುತ್ತಾ, ನಿನ್ನನ್ನು ನೀನು ಹೆಚ್ಚು ನಂಬುವೆಯಾದರೆ
ಸಹನೆಯಿಂದ ಕಾಯುತ್ತಾ, ಕಾಯುವಿಕೆಗೆ ಅಸಹನೆ ಪಡದಿದ್ದರೆ
ನಿನ್ನ ಬಗ್ಗೆ ಸುಳ್ಳು ಕೇಳಿಸಿಕೊಳ್ಳುತ್ತಾ, ಸುಳ್ಳುಗಳ ಕಂತೆ ಕಟ್ಟದಿದ್ದರೆ
ನಿನ್ನ ಬಗ್ಗೆ ದ್ವೇಷ ಸಹಿಸುತ್ತಾ, ನೀ ದ್ವೇಷಕ್ಕೆ ಎಡೆ ಮಾಡಿಕೊಡದಿದ್ದರೆ,
ಇಷ್ಟೆಲ್ಲಾ ಆದರೂ ನೀ ಬುದ್ಧಿವಂತ ಮತ್ತು ಒಳ್ಳೆಯ ವ್ಯಕ್ತಿಯಾಗಿ ಕಾಣದಿದ್ದರೆ;

ಕನಸುಗಳ ಕಟ್ಟಿ, ಅದೇ ಕನಸುಗಳಿಗೆ ಅಡಿಯಾಳಾಗದಿದ್ದರೆ,
ಆಲೋಚಿಸಿ, ಆ ಆಲೋಚನೆಗಳೆಲ್ಲವನ್ನೂ ಗುರಿಯಾಗಿಸದಿದ್ದರೆ
ಯಶಸ್ಸು ಮತ್ತು ಗಂಡಾಂತರಗಳನ್ನು ಒಂದೇ ತೆರದಲ್ಲಿ
ಎದುರಿಸಿ; ಅವೆರಡರ ಕುಟಿಲತೆಗೆ ಮನಸೋಲದಿದ್ದರೆ,
ಮೂರ್ಖರನ್ನು ಬಲಿ ಹಾಕಲೆಂದೇ, ನೀನಾಡಿದ ಮಾತುಗಳನ್ನು
ಹೇಡಿಗಳು ತಿರುಚಿದರೂ, ಅದರ ಸತ್ಯದ ತೀಕ್ಷ್ಣತೆಗೆ ನೀ ಸೋಲದಿದ್ದರೆ
ನಿನ್ನ ಜೀವ ತೆತ್ತು ಉಳಿಸಿಕೊಂಡವು ಹಾಳಾಗುತ್ತಿರುವುದ ಕಂಡು
ತಿರುತಿರುಗಿ ಹಾಳಾದ ಸಲಕರಣೆಗಳಿಂದ ಸರಿ ಮಾಡುವೆಯಾದರೆ;

ನಿನ್ನಿಡೀ ಜೀವನದ ಯಶಸ್ಸನ್ನು ಮತ್ತೊಮ್ಮೆ ಪಣಕ್ಕಿಡುವೆಯಾದರೆ, ಅದರಲ್ಲಿ ಸೋತು ಮತ್ತೊಮ್ಮೆ ಬದುಕು ಆರಂಭಿಸುವೆಯಾದರೆ, ಸೋತದ್ದರ ಕುರಿತು ಒಂದಿಷ್ಚೂ ಚಿಂತಿಸದಿದ್ದರೆ,
ನಿನ್ನ ಬಳಿ ಆತ್ಮವಿಶ್ವಾಸದ ಹೊರತು ಬೇರೆನೂ ಇಲ್ಲದಿದ್ದರೂ
ನಿನ್ನ ನರನಾಡಿಗಳೆಲ್ಲವನ್ನೂ ಪ್ರಚೋದಿಸಿ, ಮನಸ್ಸಿನಾಳದಿಂದ
ಕಳೆದು ಹೋದದನ್ನು ಗಳಿಸುವ ಪ್ರಯತ್ನಕ್ಕೆ ತೊಡಗಿದರೆ,

ಜನಸಾಮಾನ್ಯರೋ, ರಾಜಮಹಾರಾಜರೋ, ಇವರೀರ್ವರ
ಒಡನಾಟದಲ್ಲಿದ್ದೂ, ನಿನ್ನ ಸ್ವಂತಿಕೆ ಉಳಿಸಿಕೊಂಡರೆ,
ಮಿತ್ರ-ಶತ್ರುಗಳಿಬ್ಬರಿಗೂ ನಿನ್ನ ಮನ ನೋಯಿಸಲಾಗದಿದ್ದರೆ,
ಎಲ್ಲರೊಡನೆ ಗುರುತಿಸಿಕೊಂಡೂ, ನಿನ್ನದೇ ಪ್ರತ್ಯೇಕ ಛಾಪಿದ್ದರೆ,
ಕಳೆದ ನಿಮಿಷದ ಗತಿಯನ್ನು ಸೆಕೆಂಡುಗಳ ವೇಗದಲ್ಲಿ
ತುಂಬಿಸಬಲ್ಲೆಯಾದರೆ,
ಈ ಜಗತ್ತು ನಿನ್ನದೇ ಹಾಗೂ ಇದರೊಳಗಿನ ಎಲ್ಲವೂ ನಿನ್ನದೇ
ಎಲ್ಲಕಿಂತ ಹೆಚ್ಚಾಗಿ ನೀನೀಗ ನಿಜವಾದ ಮನುಷ್ಯ,
ನನ್ನ ಮುದ್ದು ಕಂದ

If

If you can keep your head when all about you
Are losing theirs and blaming it on you;
If you can trust yourself when all men doubt you,
But make allowance for their doubting too:
If you can wait and not be tired by waiting,
Or, being lied about, don't deal in lies,
Or being hated don't give way to hating,
And yet don't look too good, nor talk too wise;

If you can dream---and not make dreams your master;
If you can think---and not make thoughts your aim,
If you can meet with Triumph and Disaster
And treat those two impostors just the same:.
If you can bear to hear the truth you've spoken
Twisted by knaves to make a trap for fools,
Or watch the things you gave your life to, broken,
And stoop and build'em up with worn-out tools;

If you can make one heap of all your winnings
And risk it on one turn of pitch-and-toss,
And lose, and start again at your beginnings,
And never breathe a word about your loss:
If you can force your heart and nerve and sinew
To serve your turn long after they are gone,
And so hold on when there is nothing in you
Except the Will which says to them: "Hold on!"

If you can talk with crowds and keep your virtue,
Or walk with Kings---nor lose the common touch,
If neither foes nor loving friends can hurt you,
If all men count with you, but none too much:
If you can fill the unforgiving minute
With sixty seconds' worth of distance run,
Yours is the Earth and everything that's in it,
And---which is more---you'll be a Man, my son!

‪‎Rudyard Kipling‬

http://www.poemhunter.com/rudyard-kipling/

ಜೀವನ ಪಾಠ

ಜೀವನ ಪಾಠ

ಹೇ ಪುಟ್ಟ ಹುಡುಗಿ; ಅಳಬೇಡಾ
ನಿನ್ನ ಗೊಂಬೆಯನ್ನವರು ಮುರಿದಿದ್ದಾರೆ
ನೀನಾಡುತ್ತಿದ್ದ ಪುಟ್ಟ ಪಾತ್ರೆಗಳನ್ನೂ,
ಜೊತೆಗೆ ನಿನ್ನ ಆಟದ ಮನೆಯನ್ನು
ಅವೆಲ್ಲವೂ ಹಳೆಯದಾಗಿದ್ದವು
ಈ ಮಕ್ಕಳಾಟ ಬೇಗ ಮುಗಿದುಬಿಡುತ್ತದೆ
ಹೇ ಮುದ್ದು ಹುಡುಗಿ; ಕೊರಗಬೇಡಾ.

ಹೇ ಪುಟ್ಟ ಹುಡುಗಿ ಅಳಬೇಡಾ!
ನಿನ್ನ ಬಳಪನ್ನವರು ಮುರಿದಿದ್ದಾರೆ
ಓದಿನ ಸಂತೋಷದ ದಿನಗಳನ್ನೂ
ಜೊತೆಗೆ ನಿನ್ನೊಂದಿಷ್ಟು ತುಂಟತನವನ್ನು
ಈ ಖುಷಿಯ ಕ್ಷಣಗಳು ಎಂದೋ ಕಳೆದಿತ್ತು
ಜೀವನ ಪ್ರೀತಿ ನಿನಗಾಗಿ ಬೇಗ ಸಿಗುತ್ತದೆ
ಹೇ ಮುದ್ದು ಹುಡುಗಿ ಅಳಬೇಡಾ!

ಹೇ ಪುಟ್ಟ ಹುಡುಗಿ ಅಳಬೇಡಾ!
ನಿನ್ನ ಹೃದಯವನ್ನವರು ಘಾಸಿಗೊಳಿಸಿದಿದ್ದಾರೆ
ಕಾಮನ ಬಿಲ್ಲ ಕಣ್ಗಳ ಕಾಂತಿಯನ್ನೂ
ಒಂದಿಷ್ಟು ಯೌವನದ ಕನಸುಗಳನ್ನು
ಇವೆಲ್ಲವೂ ಅಳಿಸಿಹೋಗಿ ಬಹುಕಾಲವಾಗಿತ್ತು
ನಿನ್ನ ನಿಟ್ಟುಸಿರ ಮರೆಸಲು ಸ್ವರ್ಗವೇ ಧರೆಗಿಳಿಯುತ್ತದೆ
ಹೇ ಮುದ್ದು ಹುಡುಗಿ; ಅಳಬೇಡಾ

There! little girl; don't cry!
They have broken your doll, I know;
And your tea-set blue,
And your play-house, too,
Are things of the long ago;
But childish troubles will soon pass by. --
There! little girl; don't cry!

There! little girl; don't cry!
They have broken your slate, I know;
And the glad, wild ways
Of your schoolgirl days
Are things of the long ago;
But life and love will soon come by. --
There! little girl; don't cry!

There! little girl; don't cry!
They have broken your heart I know;
And the rainbow gleams
Of your youthful dreams
Are things of the long ago;
But Heaven holds all for which you sigh. --
There! little girl; don't cry!

‪James Whitcomb Riley‬

http://www.poemhunter.com/james-whitcomb-riley/

ನಿನಗಾಗಿಯೇ ಕಾದಿರುವೆ

ನಿನಗಾಗಿಯೇ ಕಾದಿರುವೆ
ಹವಳದ ತುಟಿಗಳು ನುಡಿದಿವೆ

ಅಸಂಖ್ಯಾತ ನೋವುಗಳಿಂದ ತುಂಬಿದ
ನನ್ನ ಈ ಏಕಾಂತದ ಜಗತ್ತಿನಲ್ಲಿ
ಒಬ್ಬೊಂಟಿ ಪ್ರಾಣಿ ನಾನು

ವಸಂತ ಓಡಿದ ವೇಗಕ್ಕೆ ಪರಿತಪಿಸಿದೆ
ಬಾಲ್ಕನಿಯಲ್ಲಿ ಒಬ್ಬಳೇ ಗೋಡೆಗೆ ಆತು
ಸುರಿದ ಮುಸಲಧಾರೆಯ ಕಂಡು ಕೊರಗಿದೆ.
ಖಿನ್ನತೆಯಲಿ ಬಳಲಿ ಬೆಂಡಾದೆ

ಎಲ್ಲಿರುವನೋ ನನ್ನ ಪ್ರಿಯಕರ?

ನಿನಗಾಗಿ ಹಂಬಲಿಸುತ್ತಿರುವ ನಾನು
ಕಣ್ಣು ಚಾಚಿದಷ್ಟು ದೂರಕ್ಕೂ ಕಾಣುವುದಿಷ್ಟೇ
ಕಾದಿರುವ ಒಣರಸ್ತೆ, ದಾರಿಯುದ್ದಕ್ಕೂ
ನರೆತ ಕೂದಲಂತಾಗಿರುವ ಹುಲ್ಲುಗಾವಲು

To the tune of "Red Lips"

Lonely in my secluded chamber,
A thousand sorrows fill every inch
of my sensitive being.

Regretting that spring has so soon passed,
That rain drops have hastened the falling followers,
I lean over the balustrade,
Weary and depressed.

Where is my beloved?

Only the fading grassland
stretches endlessly toward the horizon;
Anxiously I watch the road for your return.

Li Ching Chao

http://www.poemhunter.com/li-ching-chao/

ಅಂಜುಬುರುಕ ಭರವಸೆ

ಅಂಜುಬುರುಕ ಭರವಸೆ

ಭರವಸೆ ನನ್ನ ಅಂಜುಬುರುಕ ಗೆಳೆಯ
ಬದುಕಿನ ಗತಿ ಹೇಗೆ ಬದಲಾಗಬಹುದೆಂದು
ಕಾಯುತ್ತಾ ಕುಳಿತಿರುವ ಕ್ರೂರ ಸ್ವಾರ್ಥಿ ಗೆಳೆಯ

ಅದೊಂದು ದಿನ, ಬೇಸರದಲ್ಲಿ ಸಿಲುಕಿದ್ದೆ
ಬಿಡುಗಡೆಗಾಗಿ ಭರವಸೆಯತ್ತ ನೋಡಿದೆ
ಆದರೆ ಮುಖ ತಿರುವಿ ಹೋದ ಅವನ
ಭಯದಲ್ಲೂ ಕರಾಳತೆಯ ರೂಪ ಕಂಡೆ

ಸುಳ್ಳು ಕಾವಲುಗಾರನವ, ಪೊಳ್ಳು ಮಾತಿನವ
ನಾನಳುವಾಗ ಸಮಾಧಾನದ ಹಾಡು ಹೇಳುವ
ಕೇಳಲನುವಾದಾಗ ಹಾಡುವುದನ್ನೇ ನಿಲ್ಲಿಸುವವ
ಶಾಂತಿಮಂತ್ರ ಸಾರುತ್ತಾ ಕಾಯುವವನಂತೆ
ನಟಿಸುವವ,

ಅಳಿದುಳಿದ ಖುಷಿಯು ಕೊನೆಗಾಣುತ್ತಿದ್ದಾಗ
ದುಃಖವು ಇದ ಕಂಡು ಮರುಗುತ್ತಿದ್ದಾಗ
ನಿಷ್ಕಾರುಣ್ಯದ ಪ್ರತಿಮೂರ್ತಿಯಾಗಿದ್ದ ಭರವಸೆ
ಆನಂದದ ಅವನತಿ ನೋಡುತ್ತಾ ನಿಂತಿದ್ದ

ನನ್ನ ನೋವುಗಳಿಗೆ ಒಂದಿಷ್ಟು ಮುಲಾಮು ಹಚ್ವಿ
ಸಮಾಧಾನವ ಪಿಸುಗುಡಬಹುದಿತ್ತು
ಆದರೆ ನರಕದ ಬಾಗಿಲ ತೆರೆದು, ರೆಕ್ಕೆ ಬಿಚ್ವಿ
ಇನ್ನೆಂದೂ ಹಿಂತಿರುಗದಂತೆ ಹಾರಿಯೇ ಹೋದ
ನನ್ನ ಭರವಸೆ ಅಂಜುಬುರುಕ ಗೆಳೆಯ

Hope was but a timid friend;
She sat without the grated den,
Watching how my fate would tend,
Even as selfish-hearted men.

She was cruel in her fear;
Through the bars, one dreary day,
I looked out to see her there,
And she turned her face away!

Like a false guard, false watch keeping,
Still, in strife, she whispered peace;
She would sing while I was weeping;
If I listened, she would cease.

False she was, and unrelenting;
When my last joys strewed the ground,
Even Sorrow saw, repenting,
Those sad relics scattered round;

Hope, whose whisper would have given
Balm to all my frenzied pain,
Stretched her wings, and soared to heaven,
Went, and ne'er returned again

Emily Brontë

http://www.poemhunter.com/emily-jane-bront/

ನಾಳೆ ನಾ ಮುದುಕಿಯಾದಾಗ

ನಾಳೆ ನಾ ಮುದುಕಿಯಾದಾಗ ನೇರಳೆ ಬಣ್ಣದ ಸ್ಕರ್ಟ್
ಜೊತೆಗೆ ಅದಕ್ಕೊಪ್ಪದ ಕೆಂಪು ಬಣ್ಣದ ಟೋಪಿ ಹಾಕುವೆ
ಹೋಲಿಕೆ, ಹೊಂದಾಣಿಕೆಯ ಅವಶ್ಯಕತೆ ನನಗಿಲ್ಲ

ನನ್ನಲ್ಲಿರುವ ನಿವೃತ್ತಿಯ ಹಣವನ್ನೆಲ್ಲಾ ವೈನ್ ಕುಡಿಯಲು
ಮೋಜು ಮಾಡಲು ಬಳಸುವೆ. ಹೊಟ್ಟೆಗೆ ಹಿಟ್ಟಿನ ಹಂಗಿಲ್ಲ
ಸುಸ್ತಾದಾಗ ರಸ್ತೆಯ ಬದಿಯೇ ಕುಳಿತು ಸುಧಾರಿಸಿಕೊಳ್ಳುವೆ
ಅಂಗಡಿಗಳಲ್ಲಿ ರುಚಿ ನೋಡಲು ನೀಡುವ ತಿಂಡಿಗಳಲ್ಲೇ
ತೃಪ್ತಿ ಪಡುವೆ

ಕೋಲು ಹಿಡಿದಾದರೂ ಸರಿ, ಮಳೆಯಲ್ಲಿಯೇ ನೆನೆಯುತ್ತಾ
ಊರೆಲ್ಲಾ ಸುತ್ತಾಡುವೆ
ಬೇರೆಯವರ ತೋಟದ ಹೂಗಳ ಕದ್ದು ಕಿತ್ತು ತರುವೆ
ಯೌವನದಲ್ಲಿ ಹಿಡಿದಿಟ್ಟಿದ್ದ ಹುಚ್ಚುತನಗಳ ಖಾಲಿ ಮಾಡುವೆ.

ಬೆಳೆದ ಬೊಜ್ಜು ಮೈಗೆ ಚಿತ್ರವಿಚಿತ್ರ ಅಂಗಿಗಳ ಧರಿಸುವೆ
ಸಿಕ್ಕಾಗ ಬಕಾಸುರನಂತೆ ಊಟವ ಮಾಡಿ, ಸಿಗದಿದ್ದಾಗ
ರೊಟ್ಟಿ ಮತ್ತು ಉಪ್ಪಿನಕಾಯಿಯಲ್ಲಿಯೇ ವಾರ ಕಳೆವೆ
ಪೆನ್ನು, ಪೆನ್ಸಿಲು, ಬಿಯರ್ ಮ್ಯಾಟ್ಗಳು, ಬೇಕಾದ್ದು,
ಬೇಡವಾದದನ್ನೆಲ್ಲಾ ಸಂಗ್ರಹಿಸಿ ಇಡುವೆ

ಆದರೆ ನಮಗೀಗ ಬೇಕಿರುವುದು ಧರಿಸಲು ಶುಭ್ರ ಬಟ್ಟೆಗಳು
ಮನೆ ಬಾಡಿಗೆ ಕೊಡುವ ತಾಕತ್ತು,  ಬೇಡದ ರಸ್ತೆ ಬದಿ ಬದುಕು
ಮಕ್ಕಳ ಮುಂದಿನ ಮಾದರಿ ಜೀವನ, ನೆಂಟರಿಷ್ಟರನ್ನು
ಮನೆಗೆ ಕರೆದು ನೀಡುವ ಔತಣ

ಆದರೆ ಈಗಿನಿಂದಲೇ ನಾನು ಬಹುಶಃ ನನ್ನ ಮುಂದಿನ
ಜೀವನದ ತಯಾರಿ ನಡೆಸಬೇಕೇನೋ?
ನನ್ನ ಬಗ್ಗೆ ತಿಳಿದ ಮಂದಿಗೆ ನನ್ನಲ್ಲಿನ ಬದಲಾವಣೆ
ಗಾಬರಿಯಾಗಬಹುದೇನೋ?
ದಿಢೀರನೊಬ್ಬಳು ಮುದುಕಿ, ನೇರಳೆಸ್ಕರ್ಟ್ ಧರಿಸಿ
ನಿಂತಾಗ ಆಶ್ಚರ್ಯವಾಗುವುದೇನೋ?

Warning

When I am an old woman I shall wear purple
With a red hat which doesn't go, and doesn't suit me.
And I shall spend my pension on brandy and summer gloves
And satin sandals, and say we've no money for butter.
I shall sit down on the pavement when I'm tired
And gobble up samples in shops and press alarm bells
And run my stick along the public railings
And make up for the sobriety of my youth.
I shall go out in my slippers in the rain
And pick flowers in other people's gardens
And learn to spit.

You can wear terrible shirts and grow more fat
And eat three pounds of sausages at a go
Or only bread and pickle for a week
And hoard pens and pencils and beermats and things in boxes.

But now we must have clothes that keep us dry
And pay our rent and not swear in the street
And set a good example for the children.
We must have friends to dinner and read the papers.

But maybe I ought to practice a little now?
So people who know me are not too shocked and surprised
When suddenly I am old, and start to wear purple.

Jenny Joseph

http://www.poemhunter.com/jenny-joseph/

ಕನಸುಗಳು ಬೀಳುತ್ತಿವೆ

ಕನಸುಗಳು ಬೀಳುತ್ತಿವೆ

ಬಂದೂಕಿನ ನಳಿಗೆಗಳಲ್ಲೂ
ಸೈನಿಕರ ಹೃದಯಗಳಲ್ಲೂ
ರಕ್ತದೋಕುಳಿ ಚೆಲ್ಲುತ್ತಿದೆ.
ದೀರ್ಘ ಹೋರಾಟದ
ಕನಸುಗಳು ಬೀಳುತ್ತಿವೆ

ಚರ್ಮದ ಜೀನುಗಳಲ್ಲೂ
ಸೈನಿಕರ ಶಿರಗಳೂ
ಪತನಗೊಂಡ ಕುರುಹಿದೆ
ಹೋರಾಟದ ಕೆಚ್ಚಿದೆ
ಕನಸುಗಳೂ ಬೀಳುತ್ತಿವೆ

ಫಿರಂಗಿಯ ಬಾಯಿಗಳಲ್ಲೂ
ಸೈನಿಕರ ಕರಗಳಲ್ಲೂ
ಹೊತ್ತು ತಂದ ಹೆಂಗಸರ ಮಾಂಸದ ಮುದ್ದೆಗಳಲ್ಲೂ
ನಿಮ್ಮೆಲ್ಲರ ಹೃದಯದ ಆಕ್ರಂದನ ಕೇಳುತ್ತಿದೆ
ಮೆದುಳಿನಲ್ಲಿ ರಕ್ತದ ಪ್ರವಾಹ ಹರಿದಿದೆ
ಬಂದೂಕಿನ ನಳಿಗೆಗಳೂ, ಚರ್ಮದ ಜೀನುಗಳೂ
ಫಿರಂಗಿಯ ಬಾಯಿಗಳೂ ಭೋರಿಟ್ಟು ಅಳುತ್ತಿವೆ

ಕನಸುಗಳೂ,
ಕನಸುಗಳು ಬೀಳುತ್ತಲೇ ಇವೆ
ಹೆಣಗಳ ರಾಶಿಯ ಮೇಲೆ,
ಇನ್ನೆಂದಿಗೂ ಉಪಯೋಗಕ್ಕೆ ಬರದ
ಕನಸುಗಳು, ಮುರಿದು ಬೀಳುತ್ತಿವೆ
ಕನಸುಗಳು ಕೊನೆಗೊಳ್ಳುತ್ತಲಿವೆ.

Among the red guns,
In the hearts of soldiers
Running free blood
In the long, long campaign:
Dreams go on.

Among the leather saddles,
In the heads of soldiers
Heavy in the wracks and kills
Of all straight fighting:
Dreams go on.

Among the hot muzzles,
In the hands of soldiers
Brought from flesh-folds of women--
Soft amid the blood and crying--
In all your hearts and heads
Among the guns and saddles and muzzles:

Dreams,
Dreams go on,
Out of the dead on their backs,
Broken and no use any more:
Dreams of the way and the end go on.

Carl Sandburg

http://www.poemhunter.com/carl-sandburg/

ಎಲ್ಲೆಲ್ಲೂ ಸಾವು, ಎಲ್ಲಕ್ಕೂ ಸಾವು

ಎಲ್ಲೆಲ್ಲೂ ಸಾವು, ಎಲ್ಲಕ್ಕೂ ಸಾವು

ಅಲ್ಲೂ, ಇಲ್ಲೂ, ಎಲ್ಲೆಲ್ಲೂ ಮೃತ್ಯು
ಜಗತ್ತಿನ ಮೂಲೆಮೂಲೆಗಳಲ್ಲೂ
ತಾಂಡವವಾಡುತ್ತಿದೆ ಮೃತ್ಯು
ಆಗಿದ್ದೇವೆ ನಮಗೆ ನಾವೇ ಮೃತ್ಯು

ನಮ್ಮ ಹೆದರಿಕೆಗಳ ಮೇಲೆ,
ನಮ್ಮ ಜ್ಞಾನದ ಮೇಲೆ,
ನಮ್ಮ ಭಾವನೆಗಳ ಮೇಲೆ
ನಮ್ಮೆಲ್ಲರ ಮೇಲೆ,
ಸಾವು ತನ್ನ ಮೊಹರೊತ್ತಿದೆ

ಮೊದಲಿಗೆ ನಮ್ಮ ಭೋಗಗಳಿಗೆ ಅಂತ್ಯ
ತದನಂತರ ನಮ್ಮ ಭರವಸೆಗಳಿಗೆ ಅಂತ್ಯ
ಕೊನೆಗೊಮ್ಮೆ ನಮ್ಮ ತಲ್ಲಣಗಳಿಗೆ ಅಂತ್ಯ
ಇವುಗಳೆಲ್ಲವೂ ಅಂತ್ಯ ಕಂಡ ಮೇಲೆ
ಉಳಿಯುವುದಾದರೂ ಏನು? ಬರೀ ಮಣ್ಣು
ನಿರೀಕ್ಷಿತ ಮರಣವಷ್ಟೆ ಕೊನೆಗೆ.

ನಾವು ಸಾಯಲೇಬೇಕು. ಹಾಗೆಯೇ
ನಾವು ಪ್ರೇಮಿಸಿದವು ಕೂಡ.
ಇಂತಹ ನಿಷ್ಟುರ ನಶ್ವರ ಬದುಕಿದು
ಪ್ರೀತಿ ಕೂಡ ಹಾಗೆಯೇ ಅಶಾಶ್ವತ

I.
Death is here and death is there,
Death is busy everywhere,
All around, within, beneath,
Above is death—and we are death.

II.
Death has set his mark and seal
On all we are and all we feel,
On all we know and all we fear,

...

III.
First our pleasures die—and then
Our hopes, and then our fears—and when
These are dead, the debt is due,
Dust claims dust—and we die too.

IV.
All things that we love and cherish,
Like ourselves must fade and perish;
Such is our rude mortal lot--
Love itself would, did they not

Percy Bysshe Shelley


http://www.poemhunter.com/percy-bysshe-shelley/



ಎಂದೂ ಮರೆಯದ ನಗು

ಎಂದೂ ಮರೆಯದ ನಗು

ಕಿಟಕಿಯ ಬಳಿ ಇಳಿಬಿದ್ದ ಪರದೆಗಳ ಹತ್ತಿರದ
ಮೇಜಿನ ಮೇಲೊಂದು ಗಾಜಿನ ಬೋಗುಣಿ,
ಈಜಾಡುತ್ತಿದ್ದವು ಬಣ್ಣದ ಮೀನುಗಳು
ನಗುಮುಖದ ನನ್ನಮ್ಮ, ಯಾವಾಗಲೂ
ನಮ್ಮನ್ನು ಆನಂದದಿಂದಿರುವಂತೆ
ಹೇಳುತ್ತಿದ್ದಳು "ಖುಷಿಯಾಗಿರೋ ಕಂದ!"
ಆಕೆ ಹೇಳುವುದು ಸರಿಯೇ ಇತ್ತು,
ಸಾಧ್ಯವಾದರೆ ಖುಷಿಯಾಗಿರುವುದೇ ಒಳ್ಳೆಯದು

ನನ್ನಪ್ಪ ಯಾವಾಗಲೂ ಅವಳಿಗೆ ಹೊಡೆಯುತ್ತಿದ್ದ
ಹಾಗೂ ಕೆಲವೊಮ್ಮೆ ನನಗೆ!
ಆತನ ಆರಡಿ ದೇಹದೊಳಗಿನ ರೋಷ
ಅವನಿಗರಿವಾಗದಂತೆ ಹೀಗಾಡಿಸುತ್ತಿತ್ತೇನೋ?

ಪಾಪದ ಮೀನಂತವಳು ನನ್ನಮ್ಮ
ವಾರವೆಲ್ಲಾ ಏಟು ತಿಂದರೂ
ಖುಷಿಯಾಗಿರಲು ಬಯಸುತ್ತಿದ್ದಳು.
ನನಗೂ ಖುಷಿಯಾಗಿರುವಂತೆ ಹೇಳುತ್ತಿದ್ದಳು
'ಮಗು, ನಗು! ನಗಲೇನು ಕಷ್ಟ ನಿನಗೆ?'
ನಗುವುದನ್ನು ತೋರಿಸಿಕೊಡುತ್ತಿದ್ದಳು!
ಆ ನಗು, ನಾ ನೋಡಿದ ಅತ್ಯಂತ ನೋವಿನ
ನಗೆಯಾಗಿರುತ್ತಿತ್ತು.

ಒಮ್ಮೆ, ಬಣ್ಣದ ಮೀನುಗಳೂ ಸತ್ತು ಹೋದವು
ತೆರೆದೇ ಇದ್ದ ಕಣ್ಣುಗಳು, ನೀರಿನ ಮೇಲೆ
ತೇಲುತ್ತಿದ್ದವು ದೇಹಗಳು.
ಮನೆಗೆ ಬಂದ ಅಪ್ಪ, ಬೆಕ್ಕಿಗೆ ಆಹಾರವಾಗಿ,
ಅವುಗಳನ್ನು ಅಡುಗೆ ಮನೆಯಲ್ಲಿ ಎಸೆದನು.
ನಾವೆಲ್ಲರೂ ನಮ್ಮಮ್ಮ ನಗುವುದ ಕಂಡೆವು.

We had goldfish and they circled around and around
in the bowl on the table near the heavy drapes
covering the picture window and
my mother, always smiling, wanting us all
to be happy, told me, 'be happy Henry!'
and she was right: it's better to be happy if you
can
but my father continued to beat her and me several times a week while
raging inside his 6-foot-two frame because he couldn't
understand what was attacking him from within.

my mother, poor fish,
wanting to be happy, beaten two or three times a
week, telling me to be happy: 'Henry, smile!
why don't you ever smile?'

and then she would smile, to show me how, and it was the
saddest smile I ever saw

one day the goldfish died, all five of them,
they floated on the water, on their sides, their
eyes still open,
and when my father got home he threw them to the cat
there on the kitchen floor and we watched as my mother
smiled

Charles Bukowski


http://www.poemhunter.com/charles-bukowski/

ವಾದ

ವಾದ

ಇಬ್ಬರ ನಡುವೆ ಬಿರುಕು ಮೂಡಿದ ಮೇಲೆ
ದಿನಗಳು ಕಳೆದಂತೆ ಅಂತರ ಹೆಚ್ಚೇ ಆಗುವುದು
ಮಿತಿಯಿಲ್ಲದಾ, ವಾದಕ್ಕಾಗಿ ವಾದ, ನನ್ನೊಂದಿಗೆ
ಎಷ್ಟೇ ನಡೆಸಿದರೂ, ಏನನ್ನೂ ಕೂಡ ಸಾಧಿಸಲಾರೆ.

ಅಂತರ ಬೆಳೆಯುವುದು ಹೀಗೆ!
ಮರಳಿನಲ್ಲಿ ಹುದುಗಿರುವ ಸಮುದ್ರ ತೀರ;
ಅಲ್ಲಿಯ ಸಮತಟ್ಟಾದ ಭೂಮಿ,
ಸುಖಾಸುಮ್ಮನೆ ಬೆಳೆಯುವ ಹಾಗೆಯೇ
ನಾ ಕೊಡುವ ಕಾರಣಗಳೂ ಕೂಡ
ಉದ್ದುದ್ದ ಬೆಳೆಯಬಹುದೇನೋ?

ಕಾಲ : ಅರ್ಥೈಸಿಕೋ!
ಉಪಯೋಗಕ್ಕಿಲ್ಲದೆ ಅಲ್ಲಲ್ಲಿ ಬಿದ್ದಿರುವ
ವಸ್ತುಗಳು, ತಮ್ಮ ಅನುಭವಗಳ ಮುಂದೆ
ಉಳಿದವರ ಅನುಭವ ನಗಣ್ಯ ಎಂದಂತೆ!
ಉರುಳಿಹೋಗಲೇಬೇಕಾದ ಕೆಟ್ಟ ಕಾಲ,
ತನ್ನನ್ನು  ತಾನೇ ಪ್ರಶಂಸಿಸಿಕೊಂಡು
ತಾನಿಲ್ಲೀ ಶಾಶ್ವತ ಎಂದು  ಭ್ರಮಿಸಿದಂತೆ!

ಆ ಭಯ ಹುಟ್ಟಿಸುವ ಶಬ್ಧಗಳನ್ನು
ನಮ್ಮಷ್ಟಕ್ಕೇ ನಾವೇ ಒಬ್ಬಂಟಿಯಾಗಿ
ಕಂಡುಕೊಳ್ಳಬೇಕು. ಅಡಗಿಸಲುಬೇಕು.
ಅಡ್ಡಾದಿಡ್ಡಿಯಾದದೆಲ್ಲವೂ ಕಾಲಾಂತರದಲ್ಲಿ
ನಶಿಸಿಹೋಗುತ್ತವೆ ಎಂಬುದಷ್ಟೇ ಸತ್ಯ.

Days that cannot bring you near
or will not,
Distance trying to appear
something more obstinate,
argue argue argue with me
endlessly
neither proving you less wanted nor less dear.

Distance: Remember all that land
beneath the plane;
that coastline
of dim beaches deep in sand
stretching indistinguishably
all the way,
all the way to where my reasons end?

Days: And think
of all those cluttered instruments,
one to a fact,
canceling each other's experience;
how they were
like some hideous calendar
"Compliments of Never & Forever, Inc."

The intimidating sound
of these voices
we must separately find
can and shall be vanquished:
Days and Distance disarrayed again
and gone...

Elizabeth Bishop

http://www.poemhunter.com/elizabeth-bishop/

ನನ್ನನ್ನೇನು ಕೇಳದಿರು

ನನ್ನನ್ನೇನು ಕೇಳದಿರು

ಖುಷಿಯಿಂದಿರಬೇಕಾದಾಗಲೂ ಎಂತದೋ ತೊಳಲಾಟ?
ಮನಸ್ಸಿನಲ್ಲಿ ಕೋಲಾಹಲ, ಚಿಂತಾಜನಕ ಸ್ಥಿತಿ
ಬದುಕು ಇಷ್ಟವಾಗುತ್ತಿಲ್ಲ.  ನನ್ನದೇನಿದು ಆಟ?
ಆದರೂ ನನ್ನನ್ನೇನು ಕೇಳದಿರು.

ಆಗೆಂದೋ ಪ್ರೀತಿಸಿದ್ದ ಪ್ರೀತಿಯ ಮಾಧುರ್ಯ ಹಳಸಿದೆ
ಇನ್ನೆಂದೂ ಆ ಪ್ರೀತಿ ಯಾರೊಂದಿಗೂ ಮರುಕಳಿಸದು.
ಪ್ರೀತಿಯ ಜೊತೆಗೂ! ಆನಂದದ ಸೌಧ ಕುಸಿದಿದೆ.
ಆದರೂ ನನ್ನನ್ನೇನೂ ಕೇಳದಿರು.

ಸುಖದ ಪರಾಕಾಷ್ಠೆ ತಲುಪಿದ ಮೇಲೆ ಹೀನ ಬದುಕು
ತಾರುಣ್ಯದ ರಸ ಘಳಿಗೆ ಮತ್ತೊಮ್ಮೆ ಸಿಗದು
ಆ ಕ್ಷಣದ ಖುಷಿಯಷ್ಟೇ ನನ್ನ ಪಾಲಿಗೆ
ಬೇಸರ, ನಿಟ್ಟುಸಿರು, ಕೊರಗಷ್ಟೇ ಬದುಕಿಗೆ

Don't ask me why

Don’t ask me why, alone in dismal thought,
In times of mirth, I’m often filled with strife,
And why my weary stare is so distraught,
And why I don’t enjoy the dream of life;

Don’t ask me why my happiness has perished,
Why I don’t love the love that pleased me then,
No longer can I call someone my cherished--
Who once felt love will never love again;

Who once felt bliss, no more will feel its essence,
A moment’s happiness is all that we receive:
From youth, prosperity and joyful pleasantry,
All that is left is apathy and grief...

Alexander Sergeyevich Pushkin

http://www.poemhunter.com/alexander-sergeyevich-pushkin/

ಹಾಡಿನ ಅಂಗಿ

ಹಾಡಿನ ಅಂಗಿ

ನಾನೊಂದು ದಿನ ನನ್ನ ಹಾಡನ್ನು
ಅಂಗಿಯಾಗಿಸಿದೆ
ಪಾದಗಳಿಂದ ಕುತ್ತಿಗೆಯವರೆಗೂ ಮುಚ್ವುವಂತೆ
ಪುರಾಣದ ಕಥೆಗಳಿಂದ ಕಸೂತಿಯನ್ನೂ
ಹಾಕಿಸಿದೆ
ಮೂರ್ಖರು ಅದನ್ನು ಕದ್ದರು.
ಜಗತ್ತಿನ ಮುಂದೆ ತೊಟ್ಟು
ತಾವೇ ನೇಯ್ದಂತೆ ಬೀಗಿದರು.
ಅದನ್ನವರೇ ಧರಿಸಲಿ ಬಿಡಿ
ಬೆತ್ತಲೆ ನಡೆಯುವಾಗಿನ ಸುಖ
ಅವರಿಗೇನು ಗೊತ್ತು?

A Coat

I MADE my song a coat 
Covered with embroideries 
Out of old mythologies 
From heel to throat; 
But the fools caught it, 
Wore it in the world's eyes 
As though they'd wrought it. 
Song, let them take it, 
For there's more enterprise 
In walking naked.

‪#‎WilliamButlerYeats‬

http://www.poemhunter.com/william-butler-yeats/

ಎಲ್ಲಾ ವಿಷಯಗಳಿಗೂ ನಮ್ಮದು Over reaction!


ಎಲ್ಲಾ ವಿಷಯಗಳಿಗೂ ನಮ್ಮದು Over reaction! :( ಮೊನ್ನೆ BM ನಲ್ಲಿ "Racism against NE youth again!" ಅಂತಿತ್ತು. ಪೂರ್ತಿ ಓದಿ ನೋಡಿದಾಗ, ಬೈಕ್ ನ ಪೆಟ್ರೋಲ್ ಕಳ್ಳತನಕ್ಕೆ ಬಂದವರು, ಮನೆಯವರ ಮತ್ತು ಆ ಕಳ್ಳರ ನಡುವೆ ಜಗಳವಾಗಿ, ಮನೆಯಲ್ಲಿದ್ದವರು ಹೊರ ರಾಜ್ಯದವರೆಂದು ತಿಳಿದು ನಂತರ ಅಟ್ಯಾಕ್ ಮಾಡಿದ್ದಾರೆ. ಇಲ್ಲಿ ನಡೆದ ಘಟನೆಯ ಮೂಲ ಉದ್ಧೇಶ ಹೊರ ರಾಜ್ಯದವರ ಮೇಲಿನ ಅಟಾಕ್ ಆಗಿರಲಿಲ್ಲವಲ್ಲ! ಆದರೂ ಮಾಧ್ಯಮಗಳು ಹೀಗೆ! 

ಕರ್ನಾಟಕದಲ್ಲಿರುವ ಶಾಲೆಗಳನೆಲ್ಲಾ ಲೆಕ್ಕಕ್ಕೆ ತೆಗೆದುಕೊಂಡರೆ, ಈಗ ಈ ರೇಪ್ ಅಥವಾ ಲೈಂಗಿಕ ದೌರ್ಜನ್ಯಗಳು ಶಾಲೆಯಲ್ಲಿ ನಡೆಯುವಂತದ್ದು ಬಹಳ ಕಡಿಮೆ. ಇದು ಆಗಲೂ ಇತ್ತು. ಈಗಲೂ ಇದೆ. ಹೌದು. ಮಕ್ಕಳ ಮೇಲಿನ ದೌರ್ಜನ್ಯ ಅಕ್ಷಮ್ಯ ಅಪರಾಧವೇ. ಆದರೆ ಮೇಲಿಂದ ಮೇಲೆ ನಾವು ಇಂತಹ ದೌರ್ಜನ್ಯಗಳನ್ನು ಪ್ರಕಟಿಸಿ, ಮಕ್ಕಳ ಸ್ವಾತಂತ್ರ್ಯ ಕಿತ್ತುಕೊಳ್ಳುತ್ತಿಲ್ಲವೇ? ಬೇಕಾಗಿರುವ, ಬೇಡದಿರುವ ಎಲ್ಲಾ ರೂಲ್ಸ್ ಗಳನ್ನು ಶಾಲೆಗಳ ಮೇಲೆ ಹಾಕಿ, ಒಂದಷ್ಟು ಲಂಚ ಕಿತ್ತು, ಪರ್ಮಿಷನ್ ಕೊಟ್ಟರೆ, ಶಾಲೆಗಳ ಫೀಸ್ ಹೆಚ್ವಾಗಿಯೇ ಆಗುತ್ತದೆ. ಬಡವರ ಮಕ್ಕಳು ಓದುವುದು ಬೇಡವೇ? 

ನಂದಿತಾ ಪ್ರಕರಣ - ಯಾವುದೇ ಸಣ್ಣ ಆಸ್ಪತ್ರೆಗಳವರಿಗೂ ಅರ್ಥವಾಗುವ ವಿಷಯವಾಗಿತ್ತು. ಬೆಳಿಗ್ಗೆ ಆ ಹುಡುಗರು ಆಕೆಗೆ ಪಾಯಿಸನ್ / ಫೆನಾಯಿಲ್ ಕುಡಿಸಿ, ಆಕೆಗೆ ಏನೂ ಆಗದೆ, ಸಂಜೆ ತಂಗಿಯೊಟ್ಟಿಗೆ ಆಟವಾಡಿ, ನಂತರ ಮಲಗಿದವಳಿಗೆ ರಿಯಾಕ್ಷನ್ ಆದದ್ದು ಹೇಗೆ? ಏಕೆ? ಯಾವುದೇ ಆಸ್ಪತ್ರೆಯಲ್ಲಿ ಇಂತಹ ಪ್ರಕರಣಗಳು ಬಂದರೆ ಚಿಕಿತ್ಸೆ ಫಲಕಾರಿಯಾಗುತ್ತದೆ ಎಂದಾಗ, ಸಾಮಾನ್ಯವಾಗಿ ಕೇಸು ದಾಖಲಿಸುವುದಿಲ್ಲ. ಸೀರಿಯಸ್ ಆದಾಗ ಮಾತ್ರ ದಾಖಲಿಸುತ್ತಾರೆ. ಇದೊಂದು ಪೋಲೀಸ್, ಅಸ್ಪತ್ರೆ ಮತ್ತು ವಿಕ್ಟಿಮ್ ಮಧ್ಯೆ ಅಲಿಖಿತ ನಿಯಮವಾಗಿರುತ್ತದೆ. ಅಂದರೆ "ಪಾಪ! ಹುಷಾರಾಗ್ತಾಳೆ, ಯಾಕೆ ಸುಮ್ಮನೆ ಪೋಲೀಸ್ ಕೇಸ್?" ಎನ್ನುವ ಉದ್ದೇಶವಷ್ಟೇ! ಅಂತದರಲ್ಲಿ ಅವಳು ಸೀರಿಯಸ್ ಆದ ಕೂಡಲೇ ಆ ರಂಜಿತಾಳ ಅಪ್ಪ, ಕ್ಷಣಕೊಂದು ಮಾತಾಡಿದ್ದಂತೂ ದೊಡ್ಡ ಅಪರಾಧ. ಈಗ ಸಿಬಿಐ ರಿಪೋರ್ಟ್ ಬಂದಿದೆ. ಆತನ ಮೇಲೆ, ಈ ಘಟನೆಯನ್ನು ರಾಜಕೀಯವಾಗಿಸಿದ ಪ್ರತಿಯೊಬ್ಬರ ಮೇಲೂ ಸಮಾಜದ ಸ್ವಾಸ್ಥ್ಯ ಕೆಡಿಸಿದ ಆರೋಪದ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕಲ್ಲವೇ? 

ಇನ್ನೂ ಈಗಿನ ಊಬರ್ ಪ್ರಕರಣ - ನಾನು ಇತ್ತೀಚೆಗೆ ಬಹಳ ದಿವಸಗಳಿಂದ ಓಲಾ ಉಪಯೋಗಿಸುತ್ತಿದ್ದೇನೆ. ನಿಜವಾಗಿಯೂ ಆಟೋದವರ ಆಟಾಟೋಪಗಳಿಗೆ ಕಡಿವಾಣ ಇವರಿಂದಾಗುತ್ತಿದೆ. ಹತ್ತಿದ ಕೂಡಲೇ ಜಿಪಿಎಸ್ ಹಾಕುತ್ತಾರೆ. ಅವರೆಲ್ಲಿ ಹೋಗುತ್ತಿದ್ದಾರೆ ಎಂಬುದನ್ನು ನಾವು ಟ್ರಾಕ್ ಮಾಡಬಹುದು. ಅವರ ಪ್ರತಿಯೊಂದು ಡಿಟೇಲ್ಸ್ ನಮ್ಮ ಮೊಬೈಲಿಗೆ ಮತ್ತು ನಮ್ಮ ಮೇಲ್ ಬಾಕ್ಸ್ಗೆ ಬಂದು ಬೀಳುತ್ತದೆ. ಅದನ್ನು ಉಪಯೋಗಿಸಿಕೊಳ್ಳುವುದು ಹೇಗೆ? ಎಂಬುದು ನನ್ನ ಆಯ್ಕೆಯಷ್ಟೆ. ಇವರು ಆಟೋದವರ ಹಾಗೇ ಎಲ್ಲೆಂದರಲ್ಲಿ ಸುತ್ತುವುದಿಲ್ಲ. ಈಗ ಬ್ಯಾನ್ ಅಥವಾ ಮತ್ತೇನೋ ರೂಲ್ಸ್ ಬಂದು, ಲೈಸೆನ್ಸ್ ಮುಂತಾದ ದರಗಳನ್ನು ಹೆಚ್ಚಿಸಿ, ಅದನ್ನು ಮತ್ತೆ ಕನ್ಸುಮರ್ ಕೊಡಬೇಕಾಗುತ್ತದೆ. ಒಬ್ಬಳಿಗಾದ ತೊಂದರೆಗೆ ಇಡೀ ಸಿಸ್ಟಮ್ ಅನ್ನೇ ಬ್ಯಾನ್ ಮಾಡುವುದು! ಸರಿಯೇ? ಇಡೀ ಈ ಪ್ರಕರಣದಲ್ಲಿ ಆಕೆಯ ಪಾತ್ರವಿಲ್ಲವೇ? ಆಕೆಗೆ ಆಪ್ ಉಪಯೋಗಿಸಿ ಕ್ಯಾಬ್ ಬುಕ್ ಮಾಡಲಾಗುತ್ತದೆ, ಆದರೆ ಜಿಪಿಎಸ್ ನೋಡಲಾಗುತ್ತಿರಲಿಲ್ಲವೇ? ಏಕೆ ಜಿಪಿಎಸ್ ಇಲ್ಲಾ ಎಂದು ಕೇಳಬಹುದಿತ್ತಲ್ಲವೇ? ಆ ಕೂಡಲೇ ಊಬರ್ ಗೆ ಫೋನ್ ಮಾಡಿ ನನಗೆ ಈ ಗಾಡಿ ಬೇಡ ಎಂದು ಹೇಳಿ ಮತ್ತೊಂದರಲ್ಲಿ ಹೋಗಬಹುದಿತ್ತಲ್ಲವೇ? ಫ್ರೆಂಡ್ ಗೆ ಮೆಸೇಜ್ ಕಳಿಸುವ ಬದಲು, ಮತ್ತೊಮ್ಮೆ ಆತನಿಗೆ ಮೆಸೇಜ್ ಕಳಿಸಿದಳಂತೆ! ಅದು ಹೇಗೆ? ಆ ಸಹೋದರಿಯರ ಪ್ರಕರಣದಂತೆ ಇದು ಕೂಡ ಉಲ್ಟಾ ಹೊಡೆಯಬಾರದು ಎಂದೆಣಿಸಿದ ಮರುಕ್ಷಣವೇ ಥೂ! ಆಕೆಯ ಮೇಲೆ ದೌರ್ಜನ್ಯವಾಗಿರಬೇಕೆಂದು ಬಯಸುತ್ತೀಯಾ? ಅನಿಸಿಬಿಡುತ್ತದೆ. ಪ್ರತಿಯೊಬ್ಬರೂ ಒಂಟಿಯಾಗಿದ್ದಾಗ ಇಂತಹ ಸಂದರ್ಭಗಳನ್ನೆದುರಿಸಲೇಬೇಕು. ಮನೆಯಲ್ಲಿಯೇ ನಾವೀಗ ಸೇಫ್ ಅಲ್ಲಾ. ಹಾಗಿದ್ದಾಗ ಇನ್ನೆಲ್ಲಿ ಸುರಕ್ಷಿತವಾಗಿರುತ್ತೇವೆ ನಾವು? ನಮ್ಮ ಜಾಗರೂಕತೆಯಲ್ಲಿ ನಾವಿರಬೇಕು. ಗಾಡಿ ಹತ್ತಿದ ಕೂಡಲೆ ಆಕೆ ಕೂಡ ಒಂದಷ್ಟು ಸುರಕ್ಷಾ ಕ್ರಮಗಳನ್ನು ಕೈಗೊಳ್ಳಬೇಕೆತ್ತಿಲ್ಲವೇ? ಇಡೀ ಪ್ರಕರಣದಲ್ಲಿ ತಾನು ಭಯಂಕರ ಇನೊಸೆಂಟ್ ಎಂಬ ನಾಟಕವೇಕೆ? (ಮಾಧ್ಯಮಗಳು ಪ್ರಕಟಿಸಿದ ಆಧಾರದ ಮೇಲೆ)

ತಲೆಕೆಟ್ಟ ನಾಲ್ಕು ಜನರು ನೈತಿಕ ಪೋಲಿಸ್ ಗಿರಿ ಮಾಡುತ್ತಾರೆ. ಅದಕೊಂದಿಷ್ಟು ಮತ್ತದೇ ತಲೆ ಕೆಟ್ಟ ಜನ ಕಿಸ್ ಟು ಲವ್ ಅಂತ ವಿರೋಧಿಸುತ್ತಾರೆ. ಬಲಿಪಶುಗಳಾಗುತ್ತಿರುವುದು ಮಾತ್ರ ನಮ್ಮಂಥವರು.

ಮಾಧ್ಯಮದವರು ಯಾವುದನ್ನು ಹೇಗೆ ಪ್ರಕಟಿಸಬೇಕೆಂಬ ಸೂಕ್ಷತೆ ಕಳೆದುಕೊಂಡುಬಿಟ್ಟಿದ್ದಾರೆ. ನಾವು ಅವುಗಳಿಗೆ ಹೇಗೆ ರಿಯಾಕ್ಟ್ ಮಾಡಬೇಕೆಂಬುದನ್ನು? ಎಲ್ಲಾ ಸೂಕ್ಷ್ಮ ವಿಷಯಗಳು ಕೇವಲ ಟಿಆರ್ ಪಿ ಗಿಟ್ಟಿಸುವ ಸಲುವಾಗಿ ನಡೆಯುತ್ತಿರುವುದು, ನಾವೆಲ್ಲರೂ, ನಮ್ಮ ಮಕ್ಕಳೆಲ್ಲರೂ ಅತ್ಯಾಚಾರಿಗಳಾಗುವ ದಾರಿಯಲ್ಲಿದ್ದೇವೆ ಅನಿಸುವುದಿಲ್ಲವೇ?

ಸಾಮಾಜಿಕ ಜಾಲತಾಣಗಳಲ್ಲೂ ಮಾಧ್ಯಮದವರ ಕೈವಾಡ

ಸಮಾಜದ ಲೋಪ ದೋಷಗಳನ್ನು ಮುಲಾಜಿಲ್ಲದೆ ಎತ್ತಿ ತೋರಿಸುವುದಕ್ಕಾಗಿಯೇ ಮಾಧ್ಯಮಗಳು ಇರುವುದು. ಹಾಗಾಗಿಯೇ ಜನಸಾಮಾನ್ಯರು ಪತ್ರಕರ್ತರಿಗೆ ಅಷ್ಟೊಂದು ಮರ್ಯಾದೆ ಕೊಡುವುದು. ಯಾವಾಗ ಮಾಧ್ಯಮಗಳು / ಪತ್ರಕರ್ತರು ತಮ್ಮ ಈ ಸಿದ್ಧಾಂತಗಳಲ್ಲಿ ರಾಜಿಯಾಗತೊಡಗಿದರೋ, ಅವರ ಮೇಲೆ ಜನರಿಗೆ ಬೇಸರ ಶುರುವಾಯಿತು. ಅಂತಹ ಜನರಿಗೆ ಈ ಸಾಮಾಜಿಕ ಜಾಲತಾಣಗಳು ವರವಾಗಿ ಕಂಡುಬಂದವು. ಒಂದೊಂದೇ ಮುಖವಾಡಗಳು ಕಳಚಿಬೀಳತೊಡಗಿದವು. ಹಿಡನ್ ಅಜೆಂಡಾ ಇರುವಂತಹ ಮಾಧ್ಯಮಗಳಿಗೆ ಮರ್ಯಾದೆ ಕಡಿಮೆಯಾಗತೊಡಗಿತು. ಇನ್ನೇನು ಎಲ್ಲವೂ ಸರಿಯಾಗಿ, ಸ್ವಸ್ಥ ಸಮಾಜ ನಿರ್ಮಾಣವಾಗಿಯೇ ಬಿಡುವುದೆಂಬ ಹುಮ್ಮಸ್ಸು ಕೂಡ ಮೂಡಿತು. ಆದರೆ ಅದಕ್ಕೆ ಅವಕಾಶ ಮಾಡಿಕೊಟ್ಟರೆ, ತಮ್ಮ ಬೇಳೆ ಬೇಯಿಸಿಕೊಳ್ಳುವುದು ಹೇಗೆ? ಇಷ್ಟು ದಿವಸಗಳು ಸಮಾಜದ ಲೋಪದೋಷಗಳಿಂದಾಗಿಯೇ ಬದುಕಿರುವ ಮಂದಿ, ಬದುಕುವುದು ಹೇಗೆ? ಹಾಗಾಗಿ ಇವರೆಲ್ಲರೂ ಈ ಸಾಮಾಜಿಕ ತಾಣಗಳನ್ನು ಕೂಡ ತಮ್ಮ ಹೋಲ್ಡ ನಲ್ಲಿಡಲು ಪ್ರಯತ್ನ ಪಡುತ್ತಿದ್ದಾರೆ. ಚರ್ಚೆಯ ಹಾದಿ ತಪ್ಪಿಸಿ, ಅಸಭ್ಯ ಶಬ್ಧಗಳಿಂದ ವಿರುದ್ಧ ಮಾತಾಡುವವರನ್ನು ನಿಂದಿಸಿ, ಇನ್ ಬಾಕ್ಸಿಗೆ ಅಶ್ಲೀಲವಾದ ಮೆಸೇಜಸ್ ಕಳಿಸಿ, ವಾತಾವರಣವನ್ನೇ ಹಾಳು ಮಾಡುತ್ತಿದ್ದಾರೆ. ಇವರ ಬೆದರಿಕೆಗೋ, ಇವರಾಡುವ ಆಟಗಳಿಗೆ ಅಸಹ್ಯ ಪಟ್ಟೋ, ಸುದ್ಧಿಯೇ ಬೇಡ ಎನ್ನುವ, ನಮ್ಮ ಪಾಡಿಗೆ ನಾವು ದೂರವಿರೋಣ ಎನ್ನುವವರೇ ಹೆಚ್ಚಾಗಿದ್ದಾರೆ. ಹಾಗಾಗಿಯೇ ವಾಟ್ಸ್ ಆಪ್ ನಂತವುಗಳು ಚುರುಕಾಗಿವೆ. ಫೇಸ್ ಬುಕ್ ನಂತವು ಮಂಕಾಗುತ್ತಿವೆ. ದುರ್ಬಲರು ಇನ್ನಷ್ಟು ದುರ್ಬಲರಾಗುತ್ತಿದ್ದಾರೆ. ಇಂತಹ ಮಂದಿ ಇನ್ನಷ್ಟು ಕೊಬ್ಬುತ್ತಿದ್ದಾರೆ. ಇವರಿಗೆ ಕಡಿವಾಣ ಹಾಕುವುದು ಹೇಗೆ?

ಅಷ್ಟೇ ಅಲ್ಲಾ. ಸಾಮಾಜಿಕ ತಾಣಗಳಲ್ಲಿ ಏಕಾಂಗಿಯಾಗಿ ಹೋರಾಡುತ್ತಿದ್ದವರು ಯಾವುದಾದರೂ ಗುಂಪಿಗೆ ಸೇರಲೇಬೇಕಾದ ಅನಿವಾರ್ಯತೆ ಸೃಷ್ಠಿಯಾಗುತ್ತಿದೆ. ಇಲ್ಲವಾದರೆ ಹಣಿಯಲೆಂದೇ ಗುಂಪು ಮಾಡಿಕೊಂಡು ಬಂದವರನ್ನುನೆದುರಿಸುವುದು ಹೇಗೆ? ಇದು ದೊಡ್ಡ ಸಮಸ್ಯೆ.

ಎಂದೂ ನಡೆಯದ ಹಾದಿ

ಎಂದೂ ನಡೆಯದ ಹಾದಿ

ಶಿಶಿರ ಕಾಲದಲ್ಲಿ ನನ್ನ ಸುದೀರ್ಘ ಪಯಣ.
ಎದುರಿದ್ದ ಕಾಡಿನ ರಸ್ತೆ ಕವಲೊಡೆದಿತ್ತು.
ಎರಡು ದಾರಿಗಳೂ ಕಣ್ಣು ಹಾಯಿಸಿದಷ್ಟುದ್ದಕ್ಕೂ
ಚಾಚಿದ್ದವು. ಒಂದನ್ನೇ ಆರಿಸಬೇಕಾದ 
ಸಂಕಷ್ಟಕ್ಕೆ ಸಿಲುಕಿದ್ದೆನೀಗ.

ಎರಡು ರಸ್ತೆಗಳನ್ನು ಹೋಲಿಸುತ್ತಾ,
ಚಂದವೆನಿಸಿದನ್ನು ಆರಿಸಿಕೊಳ್ಳುತ್ತಾ,
ಕಡಿಮೆ ಸವೆದ, ಹೆಚ್ವು ಹುಲ್ಲಿರುವ
ರಸ್ತೆಯಲ್ಲಿ ಮುನ್ನಡೆದೆ. ಆದರೆ 
ಎರಡೂ ಕೂಡ ಅವಳಿ ರಸ್ತೆಗಳ 
ಹಾಗೆಯೇ ಭಾಸವಾಗುತ್ತಿತ್ತು.

ಮುಂಜಾನೆಯೇ, ಎರಡೂ ರಸ್ತೆಗಳಲ್ಲಿ 
ಸಮಾನವಾಗಿ ಹಣ್ಣೆಲೆಗಳು ಉದುರಿದ್ದವು.
ಯಾರೂ ನಡೆದ ಕುರುಹುಗಳಿಲ್ಲದ ಆ
ದಾರಿಯಲ್ಲಿ ಅಂದು ನಾನೇ ಮೊದಲಿಗ!
ತಿರುಗಿ ಬರಬೇಕಾದೀತೋ? ಎನ್ನುವ
ಸಂಶಯದಲ್ಲಿಯೇ ಮುನ್ನಡೆದೆ.

ಕಾಲಾನುಕಾಲಕ್ಕೂ ನಿಟ್ಟುಸಿರಿನಿಂದಲೇ,
ಕಾಡಿನಲ್ಲಿ ಕವಲೊಡೆದ ದಾರಿಗಳ ಬಗ್ಗೆ
ಹೇಳುತ್ತ ಕೂಡುವೆನೇನೋ?
ಕಡಿಮೆ ಸವೆದ ರಸ್ತೆಯಲ್ಲಿ ನಡೆದ ಕಥೆ,
ಬದುಕಿನಲ್ಲಾದ ಬದಲಾವಣೆ.

Two roads diverged in a yellow wood, 
And sorry I could not travel both 
And be one traveler, long I stood 
And looked down one as far as I could 
To where it bent in the undergrowth; 

Then took the other, as just as fair, 
And having perhaps the better claim 
Because it was grassy and wanted wear, 
Though as for that the passing there 
Had worn them really about the same, 

And both that morning equally lay 
In leaves no step had trodden black. 
Oh, I kept the first for another day! 
Yet knowing how way leads on to way 
I doubted if I should ever come back. 

I shall be telling this with a sigh 
Somewhere ages and ages hence: 
Two roads diverged in a wood, and I, 
I took the one less traveled by, 
And that has made all the difference.

‪‎Robert Frost‬

http://www.poemhunter.com/robert-frost/

Sunday, December 21, 2014

ಆಕ್ರೋಶದ ಫಲ

ಆಕ್ರೋಶದ ಫಲ

ಒಮ್ಮೆ ನನ್ನ ಗೆಳೆಯನೊಂದಿಗೆ ಸಿಟ್ಟಾದೆ,
ಕೋಪದೊಂದಿಗೆ ಮಾತನಾಡಿ, ಕ್ಷಮಿಸಿದೆ.
ಹೀಗೆ ನನ್ನ ಶತ್ರುವಿನೊಂದಿಗೆ ಸಿಟ್ಟಾದೆ,
ಮಾತನಾಡದೇ ಆಕ್ರೋಶದ ಬೀಜ ಬಿತ್ತಿದೆ.

ಭಯದಿಂದ ಅದಕ್ಕೊಂದಿಷ್ಟು ನೀರುಣಿಸಿದೆ
ಹಗಲಿರುಳು ಕಣ್ಣೀರಿನಲ್ಲಿ ಕಾಪಾಡಿದೆ.
ಬೆಳಕಿನಲ್ಲಿ ನಗುವಿನ ಮುಖವಾಡ ಹಾಕಿದೆ.
ಕಪಟತನದಲಿ ಕುಯುಕ್ತಿಯಿಂದ ಮರೆಮಾಚಿದೆ.

ಹಗಲಿರುಳು ಬೆಳೆದುದು ಹೆಮ್ಮರವಾಯಿತು.
ಅದರಲ್ಲೊಂದು ಫಲ ದೊಡ್ಡದಾಯಿತು
ನನ್ನ ಶತ್ರುವಿಗೂ ಅದರ ಸುಳಿವು ಸಿಕ್ಕಿತು
ನನ್ನದೇ ಆಕ್ರೋಶವೆಂಬ ಅರಿವಾಯಿತು

ಆ ರಾತ್ರಿ ಮೋಡದ ತೆರೆ ಚಂದ್ರನ ಆವರಿಸಿತು
ತೋಟದಲ್ಲಿ ನಾನೆಣಿಸದ ವಸ್ತು ಕಳವಾಗಿತ್ತು
ಆನಂದದ ಬೆಳಗಿನಲ್ಲಿ ನಾನತ್ತ ನೋಡಿದೆ
ಫಲಕ್ಕೆ ಕೈಚಾಚಿದ ಶತ್ರು ಮರಗಟ್ಟಿದ್ದ ಕಂಡೆ

I was angry with my friend:
I told my wrath, my wrath did end.
I was angry with my foe:
I told it not, my wrath did grow.

And I watered it in fears,
Night and morning with my tears;
And I sunned it with smiles,
And with soft deceitful wiles.

And it grew both day and night,
Till it bore an apple bright.
And my foe beheld it shine.
And he knew that it was mine,

And into my garden stole
When the night had veiled the pole;
In the morning glad I see
My foe outstretched beneath the tree.

William Blake

http://m.poemhunter.com/william-blake/

ನನ್ನ ಸಮಾಧಿಯ ಮುಂದೆ ರೋಧಿಸದಿರು

ನನ್ನ ಸಮಾಧಿಯ ಮುಂದೆ ರೋಧಿಸದಿರು

ನನ್ನ ಸಮಾಧಿಯ ಮುಂದೆ ರೋಧಿಸದಿರು
ನಾನಲ್ಲಿ ಮಲಗಿರುವೆನೆಂದು ಭ್ರಮಿಸದಿರು
ಸೊಂಪಿನ ತಂಪಿನ ತಂಗಾಳಿ ನಾನು
ಮಂಜಿನ ವಜ್ರದ ಹೊಳಪಾದೆ ನಾನು
ಹೊಯ್ದಾಡುವ ತುಂಬಿದ ತೆನೆಯ ಮೇಲಿನ ಭಾನು
ಶರದೃತುವಿನ ಮೋಹಕ ಮಳೆಬಿಲ್ಲ 'ತಾನು'
ಬೆಳಗಿನ ನೀರವತೆಯಿಂದ ಎದ್ದರೆ ನೋಡು
ನಭದಲಿ ಹಾರಾಡುತ್ತಿರುವ ಹಕ್ಕಿಗಳ ಹಿಂಡು
ಅವುಗಳ ಕೇಕೆಯಲಿ ನಾ ನಗುವೆನು
ತಾರೆಗಳ ಮಿಂಚಿನಲಿ ನಾನಿರುವೆನು
ನನ್ನ ಸಮಾಧಿಯ ಮುಂದೆ ರೋಧಿಸದಿರು
ನಾನು ಸತ್ತಿರುವೆನೆಂದು ಭ್ರಮಿಸದಿರು

Do not stand at my grave and weep
I am not there. I do not sleep.
I am a thousand winds that blow.
I am the diamond glints on snow.
I am the sunlight on ripened grain.
I am the gentle autumn rain.
When you awaken in the morning's hush
I am the swift uplifting rush
Of quiet birds in circled flight.
I am the soft stars that shine at night.
Do not stand at my grave and cry;
I am not there. I did not die.

Mary Elizabeth Frye

http://m.poemhunter.com/mary-elizabeth-frye/

ಕನಸು

ಕನಸು

ಕನಸುಗಳ ಗಟ್ಟಿ ಬಿಗಿದಿಡು
ಸಾವಿಗೀಡಾದರೆ ಕನಸುಗಳು
ಬದುಕು, ರೆಕ್ಕೆ ಮುರಿದ
ಪಕ್ಷಿಯಂತಾದೀತು

ಕನಸುಗಳ ಅಪ್ಪಿ ಕಟ್ಟಿಡು
ಹಾರಿಹೋದರೆ ಕನಸುಗಳು
ಬದುಕು, ಹೆಪ್ಪು ಕಟ್ಟಿದ ಮಂಜಿನ
ಮರುಭೂಮಿಯಂತಾದೀತು

Hold fast to dreams
For if dreams die
Life is a broken-winged bird
That cannot fly.

Hold fast to dreams
For when dreams go
Life is a barren field
Frozen with snow.

LangstonHughes

http://m.poemhunter.com/langston-hughes/

Thursday, December 18, 2014

ಸಾನೆಟ್ ನ 'ರೂಪಾ'ಂತರ! :)

ಸಾನೆಟ್ ನ 'ರೂಪಾ'ಂತರ! :)

ನೀ ನನ್ನನ್ನು ಪ್ರೀತಿಸುವೆಯಾದರೆ

ನೀ ನನ್ನನ್ನು ಪ್ರೀತಿಸುವೆಯಾದರೆ, ಸುಮ್ಮನೆ ಪ್ರೀತಿಸು
ಪ್ರೀತಿಗಾಗಿಯೇ ಪ್ರೀತಿಸು. ಅವಳ ನಗುವಿಗಾಗಿಯೋ
ಕಣ್ಣೋಟಕ್ಕಾಗಿಯೋ, ಅವಳ ಮೃದು ಮಾತುಗಳಿಗಾಗಿಯೋ
ಪ್ರೀತಿಸುವೆನೆಂದುಕೊಳ್ಳುತ್ತಾ ಪ್ರೀತಿಸದಿರು.
ಈ ಗುಣಗಳಿಗಾಗಿ ಪ್ರೀತಿಸುವ ನಿನಗೆ ಕ್ಷಣಿಕ ಆನಂದ
ಸಿಗಬಹುದು. ಮುಂದೊಂದು ದಿನ,
ನನ್ನೊಳಗಿದ್ದ ನೀನಂದುಕೊಂಡಿದ್ದ ಪ್ರೀತಿಯ ರೂಪ
ನೀನಂದುಕೊಳ್ಳದೆಯೂ, ನಾನರಿಯದೆಯೂ
ಬದಲಾಗಬಹುದು, ಮಾಯವಾಗಬಹುದು.
ಪ್ರೀತಿ ರೂಪಿತಗೊಂಡದ್ದಾಗಿರಬಾರದು
ರೂಪವಿಲ್ಲದ ಪ್ರೀತಿಯಾಗಿರಬೇಕು.
ಕರುಣೆಯಿಂದಲೂ ಪ್ರೀತಿಸಬೇಡ, ಕೆನ್ನೆಯ ಮೇಲಿನ
ಕಣ್ಣೀರ ಒರೆಸಲೂ ಪ್ರೀತಿಸಬೇಡ.
ಈ ಜೀವ ಅಳುವುದನ್ನೇ ಮರೆತುಬಿಡಬಹುದು, ನನ್ನಿನಿಯನೇ
ನಿನಗಾಗ ನನ್ನ ಸಮಾಧಾನಿಸುವ ತೃಪ್ತಿಯೇ ಮರೆಯಾಗಬಹುದು
ಹಾಗಾಗಿ ಪ್ರೀತಿಸುವುದಾದರೆ, ಪ್ರೀತಿಗಾಗಿ ಸುಮ್ಮನೆ ಪ್ರೀತಿಸು,
ಎಷ್ಟೇ ಪ್ರೀತಿಸು, ಪ್ರೀತಿಯ ಅನಂತತೆಯಲ್ಲಿ ಬದುಕುವಂತೆ ಪ್ರೀತಿಸು.

XIV

If thou must love me, let it be for nought
Except for love's sake only. Do not say
'I love her for her smile—her look—her way
Of speaking gently,—for a trick of thought
That falls in well with mine, and certes brought
A sense of pleasant ease on such a day'—
For these things in themselves, Beloved, may
Be changed, or change for thee,—and love, so wrought,
May be unwrought so. Neither love me for
Thine own dear pity's wiping my cheeks dry,—
A creature might forget to weep, who bore
Thy comfort long, and lose thy love thereby!
But love me for love's sake, that evermore
Thou mayst love on, through love's eternity.

Elizabeth Barrett Browning

(http://m.poemhunter.com/elizabeth-barrett-browning/)

ನೀ ನನ್ನನ್ನು ಮರೆತಿದ್ದೇ ಆದರೆ

ನೀ ನನ್ನನ್ನು ಮರೆತಿದ್ದೇ ಆದರೆ!

ನಿನಗೊಂದು ವಿಷಯ ತಿಳಿಸಬೇಕಿತ್ತು.

ನಿನಗಿದು ಗೊತ್ತಾ?

ಶರತ್ಕಾಲದ ರಾತ್ರಿ, ಸ್ಫಟಿಕ ಚಂದ್ರನ ಬೆಳಕು;
ಕಿಟಕಿಯ ಬಳಿ ಕುಳಿತು ನೋಡುತ್ತಿದ್ದರೆ,
ಕೆಂಪಾಗಿ ಕಾಣುತ್ತಿರುವ ಮರದ ಟೊಂಗೆಗಳು,
ಚಳಿ ಕಾಯಿಸುತ್ತಿದ್ದ ಒರಟು ದಿಮ್ಮಿಗಳು,
ಬೆಂಕಿಯ ಕಾವಿಗೆ ಸ್ಪರ್ಷಕ್ಕೆ ಸಿಗದ ಬೂದಿ,
ಎಲ್ಲವೂ ನನ್ನನ್ನು ನಿನ್ನ ಬಳಿಗೆ ಸೆಳೆಯುತ್ತವೆ.
ಆ ಪರಿಮಳ, ಕಾಂತೀಯ ಬೆಳಕು ಎಲ್ಲವೂ
ಪುಟ್ಟ, ಪುಟ್ಟ ದೋಣಿಗಳಾಗಿ ನನ್ನನ್ನೇ ಕಾಯುತ್ತಿರುವ
ನಿನ್ನ ದ್ವೀಪಕ್ಕೆ ಕರೆದೊಯ್ಯುವಂತೆ ಕಾಣುತ್ತವೆ.

ಹ್ಮ್, ಈಗ....
ನಿಧಾನವಾಗಿ ನನ್ನನ್ನು ಪ್ರೀತಿಸುವುದನ್ನು ನೀ
ನಿಲ್ಲಿಸುವೆಯಾದರೆ, ನಾನು ಅದನ್ನನುಸರಿಸುತ್ತೇನೆ.

ಅಕಸ್ಮಾತ್ ನೀ ನನ್ನ ಮರೆತೆಯಾದರೆ,
ಮರುಕ್ಷಣವೇ ನನ್ನನ್ನು ಹುಡುಕಬೇಡ,
ನಾನಾಗಲೇ ನಿನ್ನನ್ನು ಮರೆತುಬಿಟ್ಟಿರುತ್ತೇನೆ.

ನನ್ನ ಬದುಕಿನಲ್ಲಿ ಈಗಾಗಲೇ ಭದ್ರವಾಗಿ
ನೆಲೆಸಿರುವ ನಿನ್ನ ಆತ್ಮದ
ಬೇರುಗಳನ್ನು ಕಿತ್ತು
ಹೊರಡುವ ಹುಚ್ಚು ಆಲೋಚನೆ ನಿನ್ನಲ್ಲಿ
ಮೂಡಿದ್ದೇ ಆದರೆ,
ನೆನಪಿರಲಿ ಆ ದಿನ, ಆ ಕ್ಷಣ
ಈ ನನ್ನ ತೋಳುಗಳಿಂದಲೇ
ನನ್ನ ಹೃದಯಂತರಾಳದ
ಬೇರುಗಳನ್ನು ಮತ್ತೊಂದೆಡೆ
ಊರುತ್ತೇನೆ.

ಆದರೆ ಪ್ರತಿ ನಿತ್ಯ, ಪ್ರತಿ ಗಳಿಗೆ,
ನನಗಾಗಿಯೇ ನೀನಿರುವೆ ಎಂಬ ಸಿಹಿ ಸತ್ಯ
ನಿನಗರಿವಾದಾಗ,
ದಿನ ನಿತ್ಯವೂ ಕುಸುಮವೊಂದು
ನನ್ನನ್ನರಸಿ ನಿನ್ನ ತುಟಿಗಳ ಬಳಿ ಬಂದಾಗ
ಓಹ್! ನನ್ನೊಲವೇ, ನನ್ನವಳೇ,
ನನ್ನೊಳಗಿನ, ನಾ ಮರೆತಂತಿರುವ,
ಪ್ರೇಮಾಗ್ನಿ ಮತ್ತೊಮ್ಮೆ ಭುಗಿಲೇಳುವುದು
ನನ್ನೊಲವು ನಿನ್ನ ಪ್ರೀತಿಯ ಅನುಕರಿಸುತ್ತದೆ.
ಎಲ್ಲಿಯವರೆಗೆ, ನಿನ್ನ ಜೀವ ಪ್ರೇಮವನ್ನುಸಿರಾಡುತ್ತದೆಯೋ,
ಅಂದಿನವರೆಗೂ ನಿನ್ನ ಬಂಧನದಲ್ಲಿ ನನ್ನ ಬದುಕು
ಬಂಧಿತವಾಗಿರುತ್ತದೆ.

 I want you to know one thing.

You know how this is:
if I look
at the crystal moon, at the red branch
of the slow autumn at my window,
if I touch
near the fire
the impalpable ash
or the wrinkled body of the log,
everything carries me to you,
as if everything that exists,
aromas, light, metals,
were little boats
that sail
toward those isles of yours that wait for me.

Well, now,
if little by little you stop loving me
I shall stop loving you little by little.

If suddenly
you forget me
do not look for me,
for I shall already have forgotten you.

If you think it long and mad,
the wind of banners
that passes through my life,
and you decide
to leave me at the shore
of the heart where I have roots,
remember
that on that day,
at that hour,
I shall lift my arms
and my roots will set off
to seek another land.

But
if each day,
each hour,
you feel that you are destined for me
with implacable sweetness,
if each day a flower
climbs up to your lips to seek me,
ah my love, ah my own,
in me all that fire is repeated,
in me nothing is extinguished or forgotten,
my love feeds on your love, beloved,
and as long as you live it will be in your arms
without leaving mine.

#PabloNeruda

(http://m.poemhunter.com/pablo-neruda/)

ಸುಕೋಮಲೆ ಯುಲಾಲೈ

ನಾನು ನನ್ನದೇ ನರಳಾಟದಲ್ಲಿದ್ದೆ.
ನನ್ನ ಆತ್ಮವೋ ನಿಂತ ನೀರಾಗಿತ್ತು.
ಮೋಹಕ, ಮೃದು ಸ್ವಭಾವದ ಯುಲಾಲೈ 
ನನ್ನೊಡತಿಯಾಗುವವರೆಗೂ,
ಚಿನ್ನದ ಕೂದಲಿನ, ಚಂದದ ನಗುವಿನ 
ಸುಕೋಮಲೆ ಯುಲಾಲೈ 
ನನ್ನ ಸೆಳೆಯುವವರೆಗೂ!

ಆಹ್! ಅವಳ ಕಣ್ಗಳ ಕಾಂತಿಯೋ!
ರಾತ್ರಿಯ ನಕ್ಷತ್ರಗಳೂ ಮಂಕು, ಮಂಕು 
ಹೊಳೆಯುವ ನಯನ ತಾರೆ ಯುಲಾಲೈ;
ಸ್ವಚ್ಛಂದವಾಗಿ ಹಾರಾಡುತ್ತಿರುವ ಮುಂಗುರುಳು,
ಮಂಜುವಿನಿಂದ ಮುಸುಕಿರುವ ನೀಲಾಕಾಶದ
ಮುತ್ತಾದ ಚಂದ್ರನನ್ನು ಅಸೂಯೆಗೆ ನೂಕಿದೆ. 

ನನಗೀಗ ಅನುಮಾನ - ಈ ನೋವು
ಹಿಂದೆ ಬಾರದು
ಆಕೆಯ ಜೀವಂತಿಕೆ ನನ್ನೊಳಗಿನ
ನಿಟ್ಟುಸಿರ ಹೊರ ಹಾಕಿದೆ
ಬದುಕೀಗ ದೇವತೆಯ ದೇದಿಪ್ಯ
ನೋಟದಿಂದ ಬೆಳಗಿದೆ
ಆಗೀಗ ಪ್ರೌಢತೆಯಿಂದ ಮೆರಗುವ 
ಯುಲಾಲೈಯ ಕಣ್ಗಳಂತೆ, 
ತೇಲ್ಗಣ್ಣಿನಂತೆ; ನೀಲ್ಗಣ್ಣಿನಂತೆ !

I dwelt alone
In a world of moan,
And my soul was a stagnant tide,
Till the fair and gentle Eulalie became my blushing bride-
Till the yellow-haired young Eulalie became my smiling bride.

Ah, less- less bright
The stars of the night
Than the eyes of the radiant girl!
That the vapor can make
With the moon-tints of purple and pearl,
Can vie with the modest Eulalie's most unregarded curl-
Can compare with the bright-eyed Eulalie's most humble and careless
curl.

Now Doubt- now Pain
Come never again,
For her soul gives me sigh for sigh,
And all day long
Shines, bright and strong,
Astarte within the sky,
While ever to her dear Eulalie upturns her matron eye-
While ever to her young Eulalie upturns her violet eye.

Edgar Allan Poe

(http://m.poemhunter.com/edgar-allan-poe/)


Thursday, November 27, 2014

ಹಾಗೆ ಸುಮ್ಮನೆ - ಎರಡು ಕಾರ್ಯಕ್ರಮಗಳ ಬಗ್ಗೆ

ಒಂದು ಆಡಿಯೋ ಪುಸ್ತಕ ಬಿಡುಗಡೆ, ಮತ್ತೊಂದು ಹೊಸ ಸಿನೆಮಾ ಪ್ರೀಮಿಯರ್ ಶೋ. ಒಂದು ಸಮಾಜ ಸೇವೆಗಾಗಿ, ಮತ್ತೊಂದು ಪ್ಯಾಷನ್ ಗಾಗಿ. ಎರಡರಲ್ಲೂ ಹೊಸ ಮುಖಗಳೇ ಹೆಚ್ಚು. ಎರಡೂ ತಂಡಗಳ ನಿರ್ದೇಶಕರು ಹೊಸಬರು. ಎರಡೂ ಕಾರ್ಯಕ್ರಮಗಳು ಹೇಗಿದ್ದವು?

ಮೊದಲ ಕಾರ್ಯಕ್ರಮದಲ್ಲಿ ಪ್ರಾಜೆಕ್ಟ್ ನ ಸಾರಥ್ಯ ವಹಿಸಿದ ವ್ಯಕ್ತಿಯೇ ಎಲ್ಲೆಲ್ಲೂ ಕಾಣುತ್ತಿದ್ದರೆ, ಎರಡನೇ ಕಾರ್ಯಕ್ರಮದಲ್ಲಿ ನಿರ್ದೇಶಕ  ಚಿತ್ರತಂಡವನ್ನು ಮುಂದಿಟ್ಟು ವಿನಯದಿಂದ ಹಿಂದೆ ನಿಂತಿದ್ದರು. ಮೊದಲನೆಯದರಲ್ಲಿ ಆ ಕ್ಷಣಕ್ಕೆ  ತಮಗೆ ಮುಖ್ಯವಾದವರನಷ್ಟೇ (ಪ್ರಾಜೆಕ್ಟ್ ಗಲ್ಲಾ) ಆಗಾಗ ನೆನಪಿಸಿಕೊಳ್ಳುತ್ತಿದ್ದರೇ, ಎರಡನೆಯ ಕಾರ್ಯಕ್ರಮದ ಕೊನೆಯಲ್ಲಿ ಮಾತಾಡಿದ ನಿರ್ದೇಶಕ, ತನ್ನಿಡೀ ಜೀವನದಲ್ಲಿ, ಕನಸಿನಲ್ಲಿ ಸಹಕರಿಸಿದವರನ್ನು, ಜೊತೆಯಲ್ಲಿದ್ದವರನ್ನು ಸ್ಮರಿಸಿ 'ಎಂದರೋ ಮಹಾನುಭಾವಲು' ಎಂದು ಎಲ್ಲರಿಗೂ ವಂದಿಸಿದರು.

ಮೊದಲನೆಯ ಕಾರ್ಯಕ್ರಮದಲ್ಲಿ ಕೊನೆಯವರೆಗೂ ತಂಡದವರ್ಯಾರು ಒಟ್ಟಿಗೆ ಫೋಟೋ ತೆಗೆಸಿಕೊಳ್ಳುವುದು ಅಥವಾ ಸ್ಟೇಜ್ ಹತ್ತುವುದಿರಲಿ, ಅವರ ಹೆಸರುಗಳು ಕೂಡ ಬಂದವರಾರಿಗೂ ತಿಳಿಯಲಿಲ್ಲ.  ಎರಡನೆಯ ಕಾರ್ಯಕ್ರಮದಲ್ಲಿ ತಂಡದ ಪ್ರತಿಯೊಬ್ಬರೂ ಬಂದಿದ್ದ ಮೀಡಿಯಾಗಳೊಟ್ಟಿಗೆ ತಮ್ಮ ಅನುಭವ ಹಂಚಿಕೊಳ್ಳುತ್ತಾ, ಆನಂದ ಅನುಭವಿಸುತ್ತಿದ್ದರು. ಮೊದಲ ಕಾರ್ಯಕ್ರಮದ ಸಾರಥ್ಯ ವಹಿಸಿದ ವ್ಯಕ್ತಿಯ ಹೆಸರು ಮಾಡುವ ಹಪಾಹಪಿಯನ್ನು ನೋಡಿ ಕಿರಿಕಿರಿಯಾದರೆ, ಮತ್ತೊಂದರ ಕಾರ್ಯಕ್ರಮದ ಸಾರಥ್ಯ ವಹಿಸಿದ ವ್ಯಕ್ತಿ ಮೌನವಾಗಿ ತನ್ನ ಕನಸು ಈಡೇರಿದ ಧನ್ಯತೆ ಅನುಭವಿಸುತ್ತಿದ್ದನ್ನು ನೋಡಿ ಖುಷಿಯಾಯಿತು.

ಎರಡನೆಯ ಪ್ರಾಜೆಕ್ಟ್ ನಲ್ಲಿ ಕೆಲಸ ಮಾಡಿದವರಿಗೆ, ಅವರ ಸಮಯಕ್ಕೆ ಸಂಭಾವನೆ ನೀಡಿದೆಯೋ ಇಲ್ಲವೋ? ತಿಳಿದಿಲ್ಲ. ಆದರೆ ಅವರು ಮಾಡಿರುವ ಕೆಲಸದ ಬಗ್ಗೆ ಹೆಮ್ಮೆಯಂತೂ ನಿರ್ದೇಶಕನ ಮುಖದಲ್ಲಿ ಕಾಣುತ್ತಿತ್ತು. ಮೊದಲನೆಯ ಪ್ರಾಜೆಕ್ಟ್ ಸಮಾಜಸೇವೆಯ ಉದ್ಧೇಶದಿಂದ ಕೂಡಿದ್ದರಿಂದ, ಅದಕ್ಕಾಗಿ ಕೆಲಸ ಮಾಡಿದ ಪ್ರತಿಯೊಬ್ಬರೂ ಹಣ ತೆಗೆದುಕೊಳ್ಳದೇ ಮಾಡಿದ್ದರು. ಹಾಗಾಗಿ ಅವರಿಗೆ ಕೃತಜ್ಞತೆ ಸಲ್ಲಿಸಲೇಬೇಕಾಗಿದ್ದುದು ತಂಡದ ನಿರ್ದೇಶಕನ ಕರ್ತವ್ಯವಾಗಿತ್ತು. ಆದರೆ ಆ ಕೆಲಸವಾಗಲೇ ಇಲ್ಲ. ತಂಡದ ಪ್ರತಿಯೊಬ್ಬರೂ ತಮ್ಮ ಅತ್ಯಮೂಲ್ಯ ಸಮಯವನ್ನು ಇದಕ್ಕಾಗಿ ನೀಡಿದ್ದಾರೆ ಎಂಬ ಅರಿವೇ ಇಲ್ಲದಂತಾಡುತ್ತಿದ್ದದ್ದು ಬೇಸರದ ಸಂಗತಿ. ಹೊಳೆ ದಾಟಿದ ಮೇಲೆ ಅಂಬಿಗನ ಹಂಗ್ಯಾಕೆ ಅಲ್ಲವೇ? 

ಇವೆರಡನ್ನೂ ದಾಖಲಿಸದೇ ಸುಮ್ಮನಿರಬಹುದಿತ್ತು. ಆದರೆ ಮುಖವಾಡಗಳನ್ನು ಕಳಚುವುದು ಹೇಗೆ?

Thursday, November 6, 2014

ಪ್ರೇಮವು ಆತ್ಮದಾ ‘ಹರಿವು’, ಇರುವಿಗೆ ಅರಿವಿನ ಮರೆವು - ಹರಿವು ಕನ್ನಡ ಚಲನಚಿತ್ರ.

ತಾಯಿಯ ಮಡಿಲಲ್ಲಿ, ತಾಯಿಯೇ ನನ್ನ ದೇವರು, ಹೀಗೆ ಅಮ್ಮ ಮಕ್ಕಳ ಸೆಂಟಿಮೆಂಟ್ಸ್ ನಲ್ಲಿ ಬಂದಷ್ಟು ಚಿತ್ರಗಳು, ಅಪ್ಪ ಮಗನದು ಬಂದಿರುವುದು ಬಹಳ ಕಡಿಮೆ. ನಮ್ಮ ಚಿತ್ರಗಳಲ್ಲಿಯೂ, ಮನೆಗಳಲ್ಲಿಯೂ  ‘ಅಪ್ಪ’ ‘ಯಜಮಾನ’ನಾಗಿರುವುದೇ ಹೆಚ್ಚು.  ಹಿಂದೆ ಭಾವನಾತ್ಮಕವಾಗಿ ಚಿತ್ರಿಸಲೋ ಅಥವಾ ಹೆಂಗಳೆಯರನ್ನು ಸೆಳೆಯಲೋ ರಚಿತವಾಗುತ್ತಿದ್ದ ಕಣ್ಣೀರಿನ ಅಮ್ಮ ಈಗೀಗ ಕಾಣೆಯಾಗುತ್ತಿದ್ದಾಳೆ. ಕುಟುಂಬಗಳು ಸಣ್ಣದಾಗುತ್ತಿರುವುದರಿಂದಲೋ ಅಥವಾ ಅಮ್ಮ ಕೂಡ ಹೊರಗೆ ದುಡಿಯುವ ಕಾರಣದಿಂದಲೋ, ಇತ್ತೀಚಿನ ದಿನಗಳಲ್ಲಿ 'ಅಪ್ಪ' ಕೂಡ ಸಮಾಜದ ಭಾವನಾತ್ಮಕ ಕೇಂದ್ರವಾಗುತ್ತಿದ್ದಾನೆ.  ‘ಅಪ್ಪ’ನನ್ನು ಒರಟು ಮನುಷ್ಯನಂತೆಯೋ, ಶಿಸ್ತಿಯ ಸಿಪಾಯಿಯಂತೆಯೋ ಅಥವಾ ಕುಡುಕನಾಗಿ ಮನೆ ಮಕ್ಕಳನ್ನು ಬೀದಿಗೆ ಬೀಳುವಂತೆ ಮಾಡುವ ವ್ಯಕ್ತಿಯಾಗಿಯೋ ಚಿತ್ರಿಸದಂತೆ, ‘ಅಪ್ಪ’ ನೇ ಮಕ್ಕಳ ‘ಅಮ್ಮ’ ಕೂಡ ಆಗಿ ಸಲಹುವಂತಹ ಚಿತ್ರಗಳು ನಿರ್ಮಾಣಗೊಳ್ಳುತ್ತಿವೆ. ‘ಏಕಾಂಗಿ’ ಯಲ್ಲಿ, ಯಾರ ಹಂಗೂ ಇಲ್ಲದಂತೆ ಒಂಟಿಯಾಗಿಯೇ, ಸಮಾಜದ ಸಂಪರ್ಕವೇ ಇಲ್ಲದಂತೆ, ಶಿಸ್ತಿನಿಂದ ಬೆಳೆಯುವಂತೆ ಪ್ರೇರೇಪಿಸುವ ‘ಅಪ್ಪ’ನಿದ್ದರೆ, ‘ಪರಮಾತ್ಮ’ ದಲ್ಲಿ ‘ಅಪ್ಪ’ ತಾನೇ ‘ಅಮ್ಮ’ ಕೂಡ ಆಗಿ ಮಗನನ್ನು ಬೆಳೆಸುತ್ತಾನೆ.  ನಂತರ ಆ ಮಗ ಕೂಡ ತಾನು  ‘ಅಪ್ಪ’ನಾದಾಗ ತನ್ನ ಮಗನಿಗೆ ‘ಅಮ್ಮ’ ಕೂಡ ಆಗಬೇಕಾಗುತ್ತದೆ.  ಹೀಗೆ ಏಕಾಂಗಿಯಾಗಿ ‘ಅಪ್ಪ’ ನೇ ‘ಅಮ್ಮ’ ನ ಪಾತ್ರವನ್ನು ನಿರ್ವಹಿಸುತ್ತಿದ್ದಾನೆ.  



ಈ ನಿಟ್ಟಿನಲ್ಲಿ ಬಂದಂತ ಮತ್ತೊಂದು ಚಿತ್ರ ‘ಹರಿವು’. ಮಾತಾಡುವ ಮಗ-ಅಪ್ಪ ಹಾಗೂ ಮೌನದ ಅಪ್ಪ-ಮಗ ಈ ಎರಡು ಕಥೆಗಳನ್ನು ಹೊತ್ತು ಸಾಗುವ ಹರಿವು. ಮಾತಾಡುವ ಮಗ-ಅಪ್ಪನ ಜೋಡಿಗಿಂತ ಮಾತಾಡದೇ ಇರುವ, ಫ್ರೀಜ್ ಆಗಿಬಿಡುವ, ಆಗಾಗ ಸ್ಟಾಚ್ಯು ಆಗುವ ಅಪ್ಪ-ಮಗನ ಸಂಬಂಧ ವೀಕ್ಷಕರ ಮನಸ್ಸನ್ನು ಕಲಕಿಬಿಡುತ್ತದೆ. ಹಿಂದೆಲ್ಲಾ ಮನುಷ್ಯ ಸಂಬಂಧಗಳು ಶ್ರೀಮಂತ ವರ್ಗದಲ್ಲಿ ಮಾತ್ರ ತೆಳುವಾಗಿದ್ದದ್ದು, ಈಗೀಗ ಮಧ್ಯಮ ವರ್ಗಗಳಲ್ಲೂ ಹದಗೆಡುತ್ತಿರುವುದು, ಸಮಯದ ಅರಿವಿಲ್ಲದೆ, ನಾವೇನನ್ನೂ ಕಳೆದುಕೊಳ್ಳುತ್ತಿದ್ದೇವೆ ಎಂಬ ಪರಿವೆಯೇ ಇಲ್ಲದೆ ಹಣಕ್ಕಾಗಿ, ಎಡಬಿಡದೆ ದುಡಿಯುವುದಕ್ಕಾಗಿ ನಾಗಲೋಟದಿಂದ ಓಡುತ್ತಿರುವ ಮಧ್ಯಮ ವರ್ಗದ ಜನರ ಹತಾಶೆ, ಕಿರಿಕಿರಿ, ಅಸಹಾಯಕತೆಯನ್ನು ಮಾತಾಡುವ ಮಗ-ಅಪ್ಪನ ಮೂಲಕ ‘ಹರಿವು’ ಮಾತಾಡುತ್ತದೆಯಾದರೂ, ಮೌನದ ಅಪ್ಪ-ಮಗನ ಜೋಡಿ ಮಾಡುವ ಮೋಡಿಯ ಮುಂದೆ ಪೇಲವ ಅನಿಸಿಬಿಡುವುದು ಸುಳ್ಳಲ್ಲ. ಅಂತೆಯೇ ಮೌನಕ್ಕಿರುವ ತಾಕತ್ತನ್ನು ಎತ್ತಿ ತೋರಿಸುತ್ತದೆ. ಕನ್ನಡ ಚಲನಚಿತ್ರಗಳು ಮಾತುಗಳಲ್ಲಿಯೇ ಗೆಲ್ಲಬೇಕಾದ ಅವಶ್ಯಕತೆಯಿಲ್ಲ, ಮೌನದಲ್ಲೂ ಗೆಲ್ಲಬಹುದು ಎಂಬ ಭರವಸೆಯನ್ನು ಮೂಡಿಸುವಂತಹ ಚಿತ್ರ ‘ಹರಿವು’.

ಚಿತ್ರದ ಮತ್ತೊಂದು ಎಳೆ, ಮೌನವಾಗಿರುವ ಅಪ್ಪ-ಮಗನ ಜೋಡಿಯ ಕಥೆ. ಪ್ರಜಾವಾಣಿಯಲ್ಲಿ ವೈದ್ಯರೊಬ್ಬರು ತಮ್ಮ ಅಂಕಣದಲ್ಲಿ ವರದಿ ರೂಪದಲ್ಲಿ ಬರೆದಿದ್ದ ನೈಜ ಕಥೆಯಾಧಾರಿತವಾದದ್ದು. ಎಂದೂ ಬೆಂಗಳೂರು ನೋಡದೆ ಇದ್ದ ಉತ್ತರ ಕರ್ನಾಟಕದ ಹಳ್ಳಿಯ ಬಡರೈತನೊಬ್ಬ, ತನ್ನ ಏಕೈಕ ಮಗನ ಚಿಕಿತ್ಸೆಗಾಗಿ, ಅವನನ್ನು ಉಳಿಸಿಕೊಳ್ಳುವ ಸಲುವಾಗಿ ಬರುವ ಕಥೆ.  ನಗರಗಳಲ್ಲಿ ಈಗೀಗ ಮಧ್ಯಮ ವರ್ಗದವರಲ್ಲಿ ಆರೋಗ್ಯ ಕಾಳಜಿಯಿಂದಾಗಿ, ಆರೋಗ್ಯದಲ್ಲಿ ಒಂದಿಷ್ಟು ಹೆಚ್ಚುಕಮ್ಮಿಯಾದರೂ ಕೈಗೊಬ್ಬ, ಕಾಲಿಗೊಬ್ಬ ವೈದ್ಯರು ಸಿಗುವಾಗ, ಜೊತೆಗೆ ಆರೋಗ್ಯ ವಿಮೆ ಯಂತಹ ಸೌಲಭ್ಯಗಳ ಅರಿವು, ಜೊತೆಗೆ ಮನೆಯ ಪ್ರತಿಯೊಬ್ಬರೂ ಎಡಬಿಡದೆ ದುಡಿಯುವುದರಿಂದ ಇಂತಹ ಕಾಯಿಲೆಗಳು ಬಂದಾಗ ತಮ್ಮ ಕೈಗೆಟಕುವ ದರದಲ್ಲಿ ಸಿಗುವ ವೈದ್ಯಕೀಯ ಚಿಕಿತ್ಸೆಗಳಿಂದ ನಮ್ಮವರನ್ನು ಕಾಪಾಡಿಕೊಳ್ಳಲುಬಹುದು ಎಂಬ ಆಶಾದಾಯಕ ವಾತಾವರಣವಿರುತ್ತದೆ. ಆದರೆ ಯಾವ ಸೌಲಭ್ಯವೂ ಇರದ, ಹಳ್ಳಿಯ ಅವಿದ್ಯಾವಂತ ಕಡುಬಡವರಿಗೆ ಯಾವುದಾದರೂ ಕಾಯಿಲೆ ಬಂದರೆ? ಹೊಟ್ಟೆಬಟ್ಟೆಗೆ ದುಡ್ಡಿಲ್ಲದ ಬಡ ರೈತ ಹೇಗೆ ಬಾಳಿಯಾನು?  ಅದೂ ಕೂಡ ಚಿಕಿತ್ಸೆಗಾಗಿ ನಗರಕ್ಕೆ ಹೋಗಬೇಕಾದ ಪರಿಸ್ಥಿತಿ ಬಂದಾಗ, ಅಲ್ಲಿಯೇ ತಿಂಗಳಾನುಗಟ್ಟಲೆ ಇರಬೇಕಾದ ಪರಿಸ್ಥಿತಿ ಉಂಟಾದರೆ?  ಹೇಗಿದ್ದಾನು?  ತಾನಾಯಿತು, ತನ್ನ ಸಂಸಾರವಾಯಿತು ಎಂಬಂತಿದ್ದ ರೈತನ ಬಾಳು, ಆತನ ಮಗನ ಕಾಯಿಲೆಯಿಂದ ಹೇಗೆ ಮೂರಾಬಟ್ಟೆಯಾಗುತ್ತದೆ? ಎಂಬುದನ್ನು ಅತಿ ಕಡಿಮೆ ಮಾತುಗಳಲ್ಲಿ, ದೃಶ್ಯಗಳಲ್ಲಿ ಕಥೆ ಹೇಳುತ್ತಾ ಹೋಗುತ್ತಾರೆ ನಿರ್ದೇಶಕ ಮಂಸೋರೆ.

ಪ್ರಕೃತಿ ಸಹಜವಾಗಿಯೇ, ಹೊಸ ಚಿಗುರಿಗಿರುವ ಪ್ರಾಮುಖ್ಯತೆ, ಜೀವಂತಿಕೆ, ಹಣ್ಣೆಲೆಗಳಿಗಿರುವುದಿಲ್ಲ. ತನ್ನ ಜೀವನವನ್ನು ಭದ್ರಪಡಿಸಿಕೊಳ್ಳುವಲ್ಲಿ ನಿರತನಾಗಿರುವ ಮಗನಿಗೆ, ಅಪ್ಪನ ಕಾಯಿಲೆ ಅಂತಹ ಗಾಬರಿಯನ್ನುಂಟು ಮಾಡದಿರುವುದು ಆಶ್ಚರ್ಯವೇನಲ್ಲ. ಅಂತೆಯೇ ತನ್ನ ಪೀಳಿಗೆಯನ್ನು ಮುಂದುವರೆಸಬೇಕಾದ ಮಗನಿಗೆ ಮಾರಣಾಂತಿಕ ಕಾಯಿಲೆಯಾದರೆ, ಅಪ್ಪ, ಅಮ್ಮನಿಗೆ ಬದುಕೇ ಇಲ್ಲದಂತಾಗಿಬಿಡುವುದು ಕೂಡ ಸಹಜ ಪ್ರಕ್ರಿಯೆಯೇ ಹೌದು. ಬದುಕೇ ಹಾಗೇ.  ಮಕ್ಕಳಂತೆಯೇ ವಯಸ್ಸಾದವರು ಕೂಡ ನಿಸ್ಸಹಾಯಕರು ಎಂಬ ಸತ್ಯದ ಅರಿವಿದ್ದರೂ ಕೂಡ, ಯೌವ್ವನದಲ್ಲಿ ತಮ್ಮ  ಬದುಕೇ ಮುಖ್ಯವಾಗಿಬಿಡುವುದು,  ವಯಸ್ಸಾದವರ ನಡವಳಿಕೆಗಳಿಂದ ಕಿರಿಕಿರಿ ಅನುಭವಿಸುವುದು ಜೀವನದ ಮತ್ತೊಂದು ಮಜಲಷ್ಟೇ.  ನಾವು ಕೂಡ ಮುಂದೇ ವಯಸ್ಸಾದವರ ಪಟ್ಟಕ್ಕೇರಿದಾಗ ನಮ್ಮ ಮಕ್ಕಳಿಂದ ಆಗುವ ನೋವಿನ ಅನುಭವ, ಜೊತೆಗೆ  ಪೋಷಕರು ಮಕ್ಕಳಿಗಾಗಿ ತಮ್ಮ ಬದುಕನ್ನೇ ತೆರಲು ತಯಾರಾಗುವ ಪರಿ, ಎರಡೂ ಕೂಡ ಮನೋಜ್ಞವಾಗಿ ‘ಹರಿವು’ ನಲ್ಲಿ ಚಿತ್ರಿತಗೊಂಡಿದೆ.

ಇವೆರಡೂ ಎಳೆಗಳ ನಡುವೆ ಕಂಡು ಬರುವುದು ನಮ್ಮ ಸರ್ಕಾರಿ ಆಸ್ಪತ್ರೆಗಳ ಚಿತ್ರಣ.  ದಿನವೂ ಸಾವಿರಾರು ರೋಗಿಗಳಿಂದ ಅದ್ರಲ್ಲೂ ಬಡ ರೋಗಿಗಳಿಂದ ತುಂಬಿ ತುಳುಕುವ ನಮ್ಮ ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುವವರ ಧೋರಣೆ ಅತ್ಯಂತ ನೈಜವಾಗಿ ಬಿಂಬಿತಗೊಂಡಿದೆ.  ದಿನಾ ಸಾಯೋರಿಗೆ ಅಳೋರ್ಯಾರು?  ಎಂಬಂತೆ, ಅವರಿಗೆ ರೋಗಿಗಳ, ರೋಗಿಗಳ ಸಂಬಂಧಿಕರ ಕಷ್ಟಕಾರ್ಪಣ್ಯಗಳು, ನೋವು ಸಂಕಟಗಳು ನಗಣ್ಯ.  ನಗರಗಳಲ್ಲಿ, (ಬಹುಶಃ ಈಗೀಗ ಹಳ್ಳಿಗಳಲ್ಲೂ ಕೂಡ) ಮಾನವೀಯ ಸಂಬಂಧಗಳು ಮೌಲ್ಯ ಕಳೆದುಕೊಳ್ಳುವುದನ್ನು ತೋರಿಸುತ್ತಾ ಹೋಗುತ್ತಾರೆ.  ರೋಗಿಗಳ ನೋವಿನಲ್ಲೂ, ಸಾವಿನಲ್ಲೂ ವಾರ್ಡ್ ಬಾಯ್ ಮುಂತಾದವರು ತಮ್ಮ ಬದುಕನ್ನು ಕಂಡುಕೊಳ್ಳುವುದನ್ನು ನೋಡಿದಾಗ ಸಂವೇದನೆಯುಳ್ಳವರಿಗೆ ಸಂಕಟವಾಗದಿರದು. ಹಾಗೆಯೇ ಪ್ರಾಕ್ಟಿಕಲ್ ಆಗಿ ಯೋಚಿಸಿದಾಗ, ಅವರಿಗೆ ಬರುವ ಸಂಬಳ, ಸವಲತ್ತುಗಳಿಗೆ, ನಗರದಲ್ಲಿ ವಾಸಿಸುವವರಿಗೆ ಎಷ್ಟೇ ಹಣವಿದ್ದರೂ ಸಾಲದು ಎಂಬ ಸತ್ಯ ಕಣ್ಣಿಗೆ, ಮನಸ್ಸಿಗೆ ರಾಚುತ್ತದೆ.  ಹಣವೇ ಸಂಬಂಧವಾಗಿಬಿಡುವುದು ನಗರವಾಸಿಗಳ ಕರ್ಮಕಾಂಡವಾದರೆ, ಹಣವಿಲ್ಲದಿರುವುದೇ ಹಳ್ಳಿಗರ ನೋವಿಗೆ ಕಾರಣವಾಗಿಬಿಡುವುದು ಬದುಕಿನ ದುರಂತ.  ಸಂಬಂಧ ಮುಖ್ಯವೇ? ಹಣ ಮುಖ್ಯವೇ? ಎಂಬ ತಾಕಲಾಟ ಉಂಟು ಮಾಡಿಬಿಡುತ್ತದೆ ‘ಹರಿವು’.

ಸಾಮಾನ್ಯವಾಗಿ ನಮ್ಮ ಕನ್ನಡ ಚಿತ್ರಗಳಲ್ಲಿ ಸರ್ಕಾರಿ ವೈದ್ಯರನ್ನು ಅಪರಾಧಿಗಳಂತೆ, ಹಣಕ್ಕಾಗಿ ಏನೂ ಬೇಕಾದರೂ ಮಾಡುವವರಂತೆ ಚಿತ್ರಿಸುತ್ತಾರೆ.  ಆದರೆ ‘ಹರಿವು’ ಚಿತ್ರದಲ್ಲಿ ವೈದ್ಯರನ್ನು ಮಾನವೀಯತೆಯುಳ್ಳ, ಹಳ್ಳಿಗರ ಬಗ್ಗೆ ಕನಿಕರವುಳ್ಳವರಂತೆ ಚಿತ್ರಿಸಿರುವುದು ವಿಶೇಷ.  ರೈತನ ಬಳಿ ಹಣವಿಲ್ಲದಿದ್ದರೂ, ದಾಬಾದವ ಆತನಿಗೆ ನೀಡುವ ತಿಂಡಿ, ಚಹಾ ಮತ್ತು ಆತನನ್ನು ಊರಿಗೆ ಕರೆದೊಯ್ಯುವಂತೆ ಪ್ರೇರೇಪಿಸುವುದು ಎಲ್ಲವನ್ನೂ ನೋಡಿದಾಗ ಬಹುಶಃ ಬೆಂಗಳೂರಿನಲ್ಲಿ ನೆಲೆಸಿರುವವರಲ್ಲಿ ಮುಕ್ಕಾಲು ಭಾಗ ಜನ ವಲಸಿಗರಾದ್ದರಿಂದ, ತಮ್ಮ ಹುಟ್ಟೂರಿನ ಬಗ್ಗೆ ಮೋಹವಿರುವುದು, ಹಳ್ಳಿಯೆಂದರೆ ಪ್ರೀತಿಯಿರುವುದು ಎದ್ದು ಕಾಣುತ್ತದೆ.  

ಭಾವನಾತ್ಮಕ / ಕಲಾತ್ಮಕ ಚಿತ್ರಗಳಲ್ಲಿ ಹೆಚ್ಚಾಗಿ ಚಿತ್ರದ ಅಂತ್ಯವನ್ನು ವಿಷಾದದಿಂದಲೇ ಕೊನೆಗಾಣಿಸುವುದು, ನಿರಾಸೆ, ನೋವನ್ನೇ ಎತ್ತಿ ಹಿಡಿಯುವುದು, ಆ ಮೂಲಕ ಪ್ರೇಕ್ಷಕರ ಭಾವನೆಗಳನ್ನು ಹೊಡೆದೆಬ್ಬಿಸುವುದು ನಡೆಯುತ್ತಲೇ ಇರುತ್ತದೆ.  ‘ಹರಿವು’ ನ ವಿಶೇಷವೆಂದರೆ ಚಿತ್ರದಲ್ಲಿನ ಒಂದು ಪಾತ್ರದ ಅಂತ್ಯ, ನೋವನ್ನುಂಟು ಮಾಡುತ್ತದೆಯಾದರೂ, ಅನೇಕರ ಬದುಕನ್ನು ಸರಿಪಡಿಸಿಬಿಡುತ್ತದೆ. ಮತ್ತೂ ಒಂದು ಗಮನಿಸಬೇಕಾದ ವಿಷಯವೆಂದರೆ - ಹಳ್ಳಿಯಿಂದ ಮಗನ ಚಿಕಿತ್ಸೆಗಾಗಿ ಹೊರಡುವ ‘ಅಪ್ಪ’, ನಗರದಲ್ಲಿ ಅಡುಗೆ ಮಾಡಲು ಬೇಕಾದ ಪಾತ್ರೆಪಗಡೆಗಳನ್ನು ಕೊಂಡೊಯ್ದಿರುತ್ತಾನೆ.  ವಾಪಾಸ್ಸು ಬರುವಾಗ, ತನ್ನ ಅತ್ಯಂತ ನೋವಿನ ಕ್ಷಣಗಳಲ್ಲೂ ಆ ಪಾತ್ರೆಪಗಡೆಗಳನ್ನು ಮರೆಯದೇ, ತನ್ನ ಹಳ್ಳಿಗೆ ವಾಪಾಸ್ಸು ತರುವುದು, ಆತನಿಗೂ ಕೂಡ ಆ ನೋವಿನ ಗಳಿಗೆ ಕ್ಷಣ ಕಾಲದ್ದೇ?!  ಬದುಕೇ ಇಲ್ಲವೆಂಬಂತೆ ಆ ಕ್ಷಣ ಭಾಸವಾದರೂ, ತನ್ನ ಮುಂದಿನ ಬದುಕಿಗೆ ಆತ ಅಣಿಯಾಗುತ್ತಿದ್ದಾನೆ ಎಂಬುದನ್ನು ಹೇಳುತ್ತದೆಯೇ? ಎಂಬುದು ಕ್ಷಣಕ್ಷಣಕ್ಕೂ ಕಾಡಿದ್ದಂತೂ ಸುಳ್ಳಲ್ಲ.  ‘ಹರಿವು’ ಚಿತ್ರದ ಟ್ಯಾಗ್ ಲೈನ್ ‘ನಿನ್ನೆಗಳಿರದ ನಾಳೆಗಳೆಡೆಗೆ’ ಕೂಡ ಬದುಕಿನೆಡೆಗಿನ ಪ್ರೀತಿಯನ್ನೇ, ಮನುಷ್ಯ ಎಷ್ಟೇ ನಿರಾಸೆಯಿಂದ ಬಳಲಿದರೂ, ಬದುಕನ್ನು ಪ್ರೀತಿಸುವುದನ್ನೇ ಒತ್ತಿ ಹೇಳುತ್ತದೆ. ಬದುಕಿಗೆ ಹಣವೋ, ಸಂಬಂಧವೋ? ಎಂಬ ಪ್ರಶ್ನೆಗಳಿಗಿಂತ ಬದುಕನ್ನು ಪ್ರೀತಿಯಿಂದ ಬದುಕುವುದಷ್ಟೇ ಮುಖ್ಯ ಎಂಬ ಭಾವನೆ ಉಂಟು ಮಾಡಿಬಿಡುತ್ತದೆ.  

ವಸುಧೇಂದ್ರ ಅವರು ಎಂದೋ ಹೇಳಿದ ಮಾತು, ಕನ್ನಡ ಚಿತ್ರಗಳನ್ನು ನೋಡುವಾಗಲೆಲ್ಲಾ ನೆನಪಾಗುತ್ತಲೇ ಇರುತ್ತದೆ.  "ನಮ್ಮ ಚಿತ್ರಗಳಲ್ಲಿ ಮಾತುಗಳನ್ನು ಕೇಳಿಸಿಕೊಂಡು ಸಾಕಾಗಿದೆ, ಒಂದಿಷ್ಟು ಮೌನ ಬೇಕು.  ಆ ಮೌನ ಉಂಟು ಮಾಡುವ ಅನುಭವವನ್ನು, ಮೌನದಿಂದ ಆಸ್ವಾದಿಸಿದಾಗಲಷ್ಟೇ ವೀಕ್ಷಕ ತೃಪ್ತಿಯಾಗುತ್ತಾನೆ" ಎಂದಿದ್ದರು. ಅಂತಹ ಕ್ಷಣಗಳು ಹೇರಳವಾಗಿ ‘ಹರಿವು’ ನಲ್ಲಿ ತುಂಬಿವೆ.  ಬಹುಶಃ ನಿರ್ದೇಶಕ ಮಂಸೋರೆ, ಕಲಾಶಾಲೆಯಿಂದ ಕಲಿತು ಬಂದದಕ್ಕೋ ಏನೋ? ಕಥೆ ಏನನ್ನೋ ಹೇಳುತ್ತಿದ್ದರೂ ಕೂಡ, ಸಣ್ಣ, ಸಣ್ಣ ದೃಶ್ಯಗಳು, ಶಾಟ್ಸ್ ಗಳು ಮತ್ತೇನನ್ನೋ ಹೇಳುತ್ತಿರುತ್ತವೆ. ನೋಡುವ ಸೂಕ್ಷ್ಮತೆ ವೀಕ್ಷಕನಿಗಿರಬೇಕಷ್ಟೇ!  ಅದ್ಭುತ ಛಾಯಾಗ್ರಹಣ, ಅದ್ರಲ್ಲೂ ಚಿತ್ರದುರ್ಗದ ಗಾಳಿಯಂತ್ರಗಳು, ಹೊಸಪೇಟೆಯತ್ತ ತಿರುಗುವ ದಾರಿ, ವೈದ್ಯರ ಮುಖ ‘ಅಪ್ಪ’ನ ಮುಖಕ್ಕೆ ಬದಲಾಗುವುದು, ಪುಸ್ತಕ ಓದುವಾಗ ಅದ್ರಲ್ಲಿ ಬದಲಾಗುವ ಚಿತ್ರಗಳು, ಕತ್ತಲಿನಲ್ಲಿ ಕಣ್ಮರೆಯಾಗುವ ವ್ಯಾನಿನ ಲೈಟ್, ಬೆಳದಿಂಗಳಾಗುವ ಪರಿ, ಗುಡಿಸಲಿನಲ್ಲಿ ಕತ್ತಲು ಬೆಳಕಿನ ಮಿಶ್ರಣ ಹೀಗೆ...  ಬಹಳಷ್ಟು ದೃಶ್ಯಗಳು ಮನಸ್ಸನ್ನು ಹಿಡಿದಿಟ್ಟುಕೊಳ್ಳುತ್ತವೆ.

ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಸಂಚಾರಿ’ ವಿಜಯ್ ನಟನೆಯಂತೂ ಅತ್ಯದ್ಭುತ.   ಪಾತ್ರವೇ ತಾನಾಗಿಬಿಡುವುದು ಅವರಿಗೆ ಸಿದ್ಧಿಸಿದೆ. ಹೆಂಡತಿಯ ಪಾತ್ರಧಾರಿ, ಚಿತ್ರದ ಕ್ಲೈಮಾಕ್ಸ್ ನಲ್ಲಿ ನಟನೆಯಲ್ಲಿ ವಿಜಯ್ ಅವರನ್ನು ಮೀರಿಸಿಬಿಡುತ್ತಾರೆ. ಬಾಲಕನ ಪಾತ್ರಧಾರಿ ನೈಜವಾಗಿ ನಟಿಸಿ, ಎಲ್ಲರ ಮನಸೂರೆಗೊಳ್ಳುತ್ತಾನೆ.  ಚಿತ್ರದ ಕೊನೆಯಲ್ಲಿ ಬರುವ ಹಾಡಂತೂ ಇಡೀ ಚಿತ್ರದ ಕಥೆಯನ್ನು ಕ್ಷಣ ಮಾತ್ರದಲ್ಲಿ ಹೇಳಿಬಿಡುತ್ತದೆ.  ಅದ್ಭುತ ಸಾಲುಗಳು, ಅದಕ್ಕೆ ಸರಿಯಾಗಿ ಹೊಂದುವ ದೃಶ್ಯಗಳು, ಸಂಗೀತ ಮತ್ತು ಅದನ್ನು ಹಾಡಿರುವ ಪರಿ ಒಂದೊಳ್ಳೆ ಭಾವಚಿತ್ರವನ್ನು ಮೂಡಿಸಿಬಿಡುತ್ತದೆ.  

ಕೊನೆ ಮಾತು - ಅದದೇ ನಿರ್ದೇಶಕರ ಹೆಸರುಗಳನ್ನು ಪ್ರಶಸ್ತಿಯ ಪಟ್ಟಿಯಲ್ಲಿ ನೋಡಿರುವ ಕನ್ನಡ ವೀಕ್ಷಕರಿಗೆ, ಇನ್ನು ಮುಂದೆಯಾದರೂ ಹೊಸ ಹೆಸರುಗಳು ಕಾಣಿಸಬಹುದು ಎಂಬ ಆಶಾಭಾವನೆಯನ್ನು ಹುಟ್ಟುಹಾಕುವಲ್ಲಿ ಯಶಸ್ವಿಯಾಗಿದೆ ‘ಹರಿವು’.

Wednesday, August 6, 2014

ಹೀಗೊಂದು Disclaimer!

ಹೀಗೊಂದು Disclaimer

ಒಂದಷ್ಟು ತಿಂಗಳುಗಳ ಹಿಂದೆ ಯಾವುದೋ ತರಬೇತಿ ಕಾರ್ಯಕ್ರಮಕ್ಕೆ ಹೋಗಿ ಬಂದಾಗ, ಮುಖತಃ ಪರಿಚಯವಾದ ಒಂದಷ್ಟು ವ್ಯಕ್ತಿಗಳು, ಅವರವರೇ ಪುಸ್ತಕ ರಿಲೀಸ್ ಮಾಡುವುದರಿಂದ ಹಿಡಿದು ದೂರದರ್ಶನ ಅಥವಾ ಇನ್ನಿತರ ಖಾಸಗಿ ಚಾನೆಲ್ ಗಳಲ್ಲಿ ಕಾರ್ಯಕ್ರಮ ನೀಡುತ್ತಿದ್ದದ್ದು, ಒಬ್ಬರನ್ನೊಬ್ಬರು ‘ಪ್ರೊಮೋಟ್’ ಮಾಡಿಕೊಳ್ಳುತ್ತಿದ್ದರಿಂದ ಬೇಸತ್ತು, ಯಾರನ್ನೂ ಟ್ಯಾಗ್ ಮಾಡದೇ ಸ್ಟೇಟಸ್ ಒಂದನ್ನು ಹಾಕಿಕೊಂಡಿದ್ದೆ.  ನನ್ನ ಆ ಸ್ಟೇಟಸ್ ನಿಂದ ನೊಂದ ಅವರೆಲ್ಲರೂ ತಮ್ಮ, ತಮ್ಮ ವಾಲ್ ಗಳಲ್ಲಿ ಅನಾವಶ್ಯಕ ನನ್ನನ್ನು ‘ಟ್ಯಾಗ್’ ಮಾಡಿ, ಬೈದುಕೊಂಡಿದ್ದರು. ಮಾಧ್ಯಮಗಳು ಮತ್ತು ಫೇಸ್ ಬುಕ್ಕಿನಲ್ಲಿ ಈಗಾಗಲೇ ಚಿರಪರಿಚಿತರಾಗಿದ್ದುದರಿಂದ, ಅವರ ಒಂದಷ್ಟು ಬೆಂಬಲಿಗರು (ಈ ಲಿಸ್ಟಿನಲ್ಲಿ ಖ್ಯಾತ ಲೇಖಕ, ಲೇಖಕಿಯರ ಜೊತೆಗೆ ನನ್ನಂಥ ಒಂದಷ್ಟು ಅನಾಮಧೇಯರು ಇದ್ದರು)  ಬಾಯಿಗೆ ಬಂದದ್ದು ಮಾತನಾಡಿದಾಗಲೇ, ‘ಓಹೋ! ನಾನೊಂದು ದೊಡ್ಡ ಹುತ್ತಕ್ಕೆ ಕೈ ಹಾಕಿದ್ದೇನೆ!’ ಎಂಬುದು ತಿಳಿದದ್ದು!

ಆದರೆ ನನ್ನಲ್ಲಿ ಪ್ರಾಮಾಣಿಕತೆ ಇದ್ದುದರಿಂದಲೋ ಅಥವಾ ಯಾವುದೇ ಹಿಡನ್ ಅಜೆಂಡಾ ಇಲ್ಲದಿದುದರಿಂದಲೋ ಅಥವಾ ಅವರ ಇನ್ಯಾವುದಾದರೂ ‘ಹುನ್ನಾರ’ವೋ ಅಥವಾ ನಾನೊಂದು ಯಕಶ್ಚಿತ್ ‘ಸಾಮಾನ್ಯ’ಳು ಎನ್ನಿಸಿದುದರಿಂದಲೋ ಅಥವಾ ನನ್ನ ವಾದ ವೈಖರಿಯಿಂದಲೋ! ನನ್ನನ್ನು ಬ್ಲಾಕ್ ಮಾಡಲಾಯಿತು. ಮತ್ಯಾರೋ ಬೇಕೆಂದೇ ನನ್ನನ್ನು ‘ಅನ್ ಫ್ರೆಂಡ್’ ಮಾಡಿ, ನಾನೇ ‘ಅವರನ್ನು’ ಅನ್ಫ್ರೆಂಡ್ ಮಾಡಿದೆ’ ಎಂದು ಹಬ್ಬಿಸಿದರು.  ನನ್ನನ್ನು ‘ಬ್ಲಾಕ್’ ಮಾಡಿದ ಮೇಲೂ, ನನ್ನ ಮೇಲಿನ ವೈಯಕ್ತಿಕ ಪ್ರಹಾರಗಳು ನಡೆದೇ ಇದ್ದವು. ಆದರೆ ಉತ್ತರಿಸಲು ‘ಬ್ಲಾಕ್’ ಆಗಿದ್ದೆಯಾದ್ದರಿಂದ ಸಾಧ್ಯವಾಗಿರಲಿಲ್ಲ.  ಇದು ಕೂಡ ದೌರ್ಜನ್ಯವೇ ಅಲ್ಲವೇ? ಇರಲಿ.

ರಾತ್ರೋರಾತ್ರಿ ನನ್ನ ಈ ಒಂದು ಸ್ಟೇಟಸ್, ಜೊತೆಗೆ ಒಂದಷ್ಟು ಕಮೆಂಟ್ಸ್ ಬಹಳಷ್ಟು ಗೆಳೆಯರನ್ನು (ಕಂಡರಿಯದ/ಕೇಳರಿಯದ) ಗಿಟ್ಟಿಸಿತು. ಇನ್ ಬಾಕ್ಸಿನಲ್ಲಿ ಅನುಕಂಪದ ಮಾತುಗಳು ಬಂದು ಮುಟ್ಟಿದವು.  ನಾವಿದ್ದೇವೆ, ನಿನ್ನ ಜಗಳವನ್ನು ಮುಂದುವರೆಸೆಂದು ಹುರಿದುಂಬಿಸುವ ಮಾತುಗಳು ಬಂದವು.  ಆದರೆ ನನ್ನ ಸ್ಟೇಟಸ್ ‘ಗುಂಪುಗಾರಿಕೆ’ಯ ವಿರುದ್ಧವಾಗಿತ್ತು. ಹಾಗಾಗಿ ನನ್ನನ್ನು ಯಾವುದೇ ‘ಗುಂಪಿಗೆ’ ಸೇರಿಸಿಕೊಳ್ಳುವ ಅವರ ಪ್ರಯತ್ನ ಸಫಲವಾಗಲಿಲ್ಲ.  ನನ್ನಲ್ಲಿ ಪ್ರಾಮಾಣಿಕತೆ ಇತ್ತು, ಕಳಕಳಿ ಇತ್ತು ಹಾಗೂ ನನ್ನ ಸ್ಟೇಟಸ್ ಯಾವುದೇ ವ್ಯಕ್ತಿಗತ ದ್ವೇಷವಾಗಿರಲಿಲ್ಲ. ಆದರೂ ಕೂಡ ಸಿಕ್ಕಿದವರೆಲ್ಲರಿಗೂ, ಕೇಳಿದವರೆಲ್ಲರಿಗೂ ‘ಜಸ್ಟಿಫೈ’ ಮಾಡುವಂತ ಪರಿಸ್ಥಿತಿ ಬಂದೊದಗಿತು.

ಕೊನೆಗೊಮ್ಮೆ ನಾವು ಇಂತಹದೊಂದು ಸ್ಟೇಟಸ್ ಹಾಕಿಕೊಂಡಿಲ್ಲವೆಂಬಂತೇ / ಇಂತಹದೊಂದು ಪ್ರಕರಣವೇ ಆಗಿಲ್ಲವೆಂಬಂತೇ, ಎಲ್ಲರೂ ತಮ್ಮ, ತಮ್ಮ ಸ್ಟೇಟಸ್ ಗಳನ್ನೂ, ಕಾಮೆಂಟುಗಳನ್ನು ‘ಡಿಲೀಟ್’ ಮಾಡಿ ಸುಮ್ಮನಾಗಿಬಿಟ್ಟರು.  ಆದರೆ ನನಗೆ ಮಾತ್ರ ಈ ಘಟನೆ, ಮಾಧ್ಯಮದವರ ಅಥವಾ ಸ್ವಘೋಷಿತ ಕವಿ/ಬರಹಗಾರರ ಅಥವಾ ಅವರ ಬೆಂಬಲಿಗರ ಮತ್ತು ಈ ಘಟನೆಯನ್ನು ತಮ್ಮ ಬೇಳೆ ಬೇಯಿಸಿಕೊಳ್ಳುವುದರ ಕಡೆ ತಿರುಚುವ ರಾಜಕೀಯ ವ್ಯಕ್ತಿಗಳ ಮುಖವಾಡವನ್ನು ತೆರೆದಿಟ್ಟಿತು. ನನ್ನವರು ಎಂದೇ ತಿಳಿದಿದ್ದ ಅನೇಕರು ಕೂಡ ‘ಸಾಂಸ್ಕೃತಿಕ ರಂಗದಲ್ಲಿ ಸಿಕ್ಕಾಪಟ್ಟೆ ರಾಜಕೀಯವಿದೆ. ಅವರ ಸುದ್ಧಿಗೆ ಯಾಕೆ ಹೋದೆ?’ ಎಂದು ನನಗೆ ಬುದ್ಧಿ ಹೇಳಿದರು. ಅಂದಿನಿಂದ ನಾನು ಅಕ್ಷರಶಃ ಈ ಫೇಸ್ ಬುಕ್ಕಿನಲ್ಲಿ ಏಕಾಂಗಿಯಾದೆ.  ಯಾರೊಂದಿಗೂ ಚಾಟ್ ಮಾಡುವುದು ಸಲ್ಲ! ಎಂದರ್ಥ ಮಾಡಿಕೊಂಡೆ. ನನಗೆ ಸಹಾಯ ಮಾಡಲೆಂದು ಬರುವವರನ್ನು ದೂರವಿಟ್ಟೆ.  ಇದರ ಹಿಂದೆ ಮತ್ತ್ಯಾವುದೋ ‘ಹುನ್ನಾರ’ವಿರಬಹುದೆಂಬುದನ್ನು ಅರ್ಥ ಮಾಡಿಕೊಂಡೆ.  ಇದು ನಾನು ಕಲಿತ ಪಾಠ.

ಇಷ್ಟೆಲ್ಲಾ ಈಗೇಕೆ?  ಮೊನ್ನೆಯ ‘ಪ್ರಭಾ’ ಮತ್ತು ‘ವಿ.ಆರ್. ಭಟ್’ ಅವರ ಪ್ರಕರಣ.  ಅಲ್ಲಿ ನಾನು ಹಾಕಿದ ಸ್ಟೇಟಸ್ ಉಂಟು ಮಾಡಿದ ಕಿರಿಕಿರಿ! ಈ ಇಬ್ಪರ ಹೆಸರನ್ನು ಅದುವರೆವಿಗೂ ಕೇಳೇ ಇರಲಿಲ್ಲ. ಅವರಿಬ್ಬರ ಬೆಂಬಲಿಗರಂತೂ ಗೊತ್ತೇ ಇರಲಿಲ್ಲ. ಪ್ರಭಾ ಅವರು ಅರ್ಥವಿಲ್ಲದ / ಚರ್ವಿತಚರ್ವಣ / ಹಳಸಲಾದ ಸ್ಟೇಟಸ್ ಒಂದನ್ನು ಹಾಕಿಕೊಂಡಿದ್ದರು. ಅದರ ಬಗ್ಗೆ ನನಗೆ ತರ್ಕ ಮಾಡಲು ಇಷ್ಟವೂ ಇಲ್ಲ ಹಾಗೂ ಜಾತಿಯ ಬಗ್ಗೆ ಮಾತಾಡುವುದೇ ಅಸಹ್ಯ ಎಂಬ ಮನಸ್ಥಿತಿ ನನ್ನದಾದ್ದರಿಂದ ಈ ಬಗ್ಗೆ  ಮಾತಾಡುವುದಿಲ್ಲ.  ವಿಆರ್ ಭಟ್ ಅವರ ವೈಯಕ್ತಿಕ ಪ್ರೊಫೈಲ್ ಎಷ್ಟೇ ಗಟ್ಟಿಯಾಗಿರಲಿ, ಪತ್ರಕರ್ತನಾಗೇ ಇರಲಿ ಆದರೆ ಅವರು ಮಾಡಿದ್ದು ಅಕ್ಷಮ್ಯ ಅಪರಾಧ.  ‘ಹೆಣ್ಣೊಬ್ಬಳ’ ಬಗ್ಗೆ ಅಷ್ಟು ಕೆಟ್ಟದಾಗಿ ಯಾರೂ ಕೂಡ ಮಾತಾಡಬಾರದು. ಗಾಯವಾದ ಭಾಗಕ್ಕೆ ಸೂಜಿಯಿಂದ ತಿವಿದಂತಿತ್ತು ಅವರ ಮಾತುಗಳು.  ಹಾಗಾಗಿ ಅವರಿಗೆ ಶಿಕ್ಷೆಯಾಗಬೇಕು. ಇದರಲ್ಲಿ ಎರಡು ಮಾತಿಲ್ಲ.

ಪ್ರಭಾ ಅವರು ನಾನೊಬ್ಬಳು ನೊಂದಿರುವ ‘ಹೆಣ್ಣು’, ಇಂತಹ ಘಟನೆಗಳು ಪುನರಾವರ್ತನೆಯಾಗಬಾರದು ಎಂದು ಹೋರಾಟಕ್ಕೆ ನಿಂತರು. ವಿ.ಆರ್ ಮೇಲೆ ಕೇಸ್ ಹಾಕಿದರು. ಎಲ್ಲವೂ ಸರಿ. ಆದರೆ ಅದೇ ರೀತಿ ಅವರ ಸ್ಟೇಟಸ್ ಗಳಲ್ಲಿ ಇನ್ನಿತರರು ಪ್ರಭಾ ಅವರನ್ನು ಬೆಂಬಲಿಸುವ ಭರದಲ್ಲಿ ವಿ.ಆರ್ ಅವರ ಮನೆಯ ಹೆಣ್ಣುಮಕ್ಕಳ ಮೇಲೆ ಅಸಭ್ಯವಾಗಿ ಮಾತಾಡಿದರು.  ವಿ.ಆರ್ ಭಟ್ ಅವರನ್ನು ಕಡಿದು, ಕೊಚ್ಚುವ ಮಾತುಗಳನ್ನು ಆಡಿದರು. ಮಚ್ಚು, ಲಾಂಗು ತೆಗೆದುಕೊಂಡು ಕಾನೂನನ್ನು ಕೈಗೆ ತೆಗೆದುಕೊಳ್ಳುವುದಕ್ಕೆ! ನಮ್ಮದು ಕನ್ನಡ ಚಿತ್ರಗಳಲ್ಲ, ಬದುಕು ಎಂದರಿಯದಷ್ಟು ದಡ್ಡರು ಯಾರೂ ಅಲ್ಲಿ ಇರಲಿಲ್ಲ. ಅತ್ಯಾಚಾರ ಪ್ರಚೋದನೆ ತಪ್ಪಾದರೆ, ಕೊಲೆಯ ಪ್ರಚೋದನೆ ಕೂಡ ತಪ್ಪೇ ಅಲ್ಲವೇ?

ಶತಶತಮಾನಗಳಿಂದ ಬಾಯಿ ಮುಚ್ಚಿ ಕುಳಿತಿದ್ದ, ಗ್ಲಾಮರ್ ಗಷ್ಟೇ, ಗಾಸಿಪ್ ಗಷ್ಟೇ ಸೀಮಿತವಾಗಿದ್ದ ನಮ್ಮ ಹೆಣ್ಣುಮಕ್ಕಳು, ಇತ್ತೀಚಿಗಿನ ದಿನಗಳಲ್ಲಿ ಮುಕ್ತವಾಗಿ ಮಾತಾಡಲು ಶುರುಮಾಡಿದ್ದಾರೆ.  ಅವರನ್ನು ಪುರುಷಧೋರಣೆ ನಿಂದಿಸಿದಾಗಲೆಲ್ಲಾ, ನನ್ನಲ್ಲಿನ ‘ಹೆಣ್ಣು’ ಜಾಗೃತಳಾಗಿದ್ದಾಳೆ. ನನ್ನ ಗುಂಪುಗಾರಿಕೆ ಸ್ಟೇಟಸ್ ನ ವಿರುದ್ಧ, ನನ್ನ ವಿರುದ್ಧ ಹೋರಾಡಿದ್ದ ವ್ಯಕ್ತಿಗೆ, ಹಲವರು ಅಸಹ್ಯವಾಗಿ, ಹೊಲಸಾಗಿ ನಿಂದಿಸಿದಾಗಲೂ ನಾನು ಆಕೆಯನ್ನು ಸಪೋರ್ಟ್ ಮಾಡಿದ್ದೇನೆ. ಈಗ ವಿಆರ್ ಭಟ್ ಅವರ ಮೇಲೆ ಕೇಸ್ ಹಾಕಿ ಕೋಮು ಸೌಹಾರ್ದದ ಜೊತೆಗೆ ನೊಂದ ಹೆಣ್ಣುಮಕ್ಕಳ ಪರವಾಗಿ ನಿಂತಿರುವ ಪತ್ರಿಕೆಯ ಮಾಲಕಿ, ತಮ್ಮ ಪತ್ರಿಕೆಯಲ್ಲಿ ಹಲವಾರು ಹೆಣ್ಣುಮಕ್ಕಳ ವೈಯಕ್ತಿಕ ಘನತೆಗೆ ಧಕ್ಕೆ ತಂದಾಗ ಅಸಹ್ಯಿಸಿದ್ದೇನೆ.  ಅದನ್ನು ಖಂಡಿಸಿಯೂ ಇದ್ದೇನೆ.  ಕಾನೂನಿನ ಮೂಲಕ ಹೋರಾಡುತ್ತೇವೆಯೆಂದು ಆ ಹೆಣ್ಣುಮಕ್ಕಳು ಸ್ಟೇಟಸ್ ಹಾಕಿಕೊಂಡಾಗ ಸಂತೋಷಪಟ್ಟಿದ್ದೇನೆ.

ಪುರುಷಧೋರಣೆಯನ್ನು ಖಂಡಿಸಿ ಹೋರಾಟ ನಡೆಸಲು ಮುಂದಾದ  ಪ್ರಭಾ, ತನ್ನಂತೇ ಇನ್ನಿತರ ಹೆಣ್ಣುಮಕ್ಕಳು ಬೈಗಳಕ್ಕೆ ಈಡಾದಾಗ, ಅದು ಕೂಡ ಅವರ ಸ್ಟೇಟಸ್ ನಲ್ಲಿಯೇ, ಒಂದಿಷ್ಟು ಖಂಡಿಸದೇ ಇದ್ದದ್ದು, ನಿಜವಾಗಿಯೂ ನನಗೆ ನೋವಾಯಿತು.  ನಾನವರ ಗಮನಕ್ಕೆ ತಂದ ಮೇಲೂ ಕೂಡ ಅವರದನ್ನು ‘ನೆಗ್ಲೆಕ್ಟ್’ ಮಾಡಿದ್ದು ಯಾವ ಮನಸ್ಥಿತಿ?  ಸಂತ್ರಸ್ಥೆಗಲ್ಲದೆ ಬೇರೆಯವರಿಗೆ ಆ ನೋವು ಅರ್ಥವಾಗುವುದೇ? ಟಿವಿ ಸಂದರ್ಶನದಲ್ಲಿ  ಆಂಕರ್ ಕೇಳಿದ ಈ ಪ್ರಶ್ನೆಗೆ ‘ಕೋಪದ ಭರದಲ್ಲಿ ಮಾತಾಡ್ತಾರೆ! ಏನೂ ಮಾಡಲಾಗುವುದು? ಎಂಬಂತ ಬೇಜವಾಬ್ದಾರಿ ಹೇಳಿಕೆ ನೀಡಿದರೆ, ಪ್ರಭಾ ಅವರು ‘ಹೆಣ್ಣು’ ಎಂದೇ ಸಪೋರ್ಟ್ ಮಾಡಿದ್ದ ನನ್ನಂತವರಿಗೆ ಬೇಸರವಾಗಬಾರದೇ? ಪುರುಷಧೋರಣೆ ವಿರುದ್ಧ ಹೋರಾಡುವ ‘ಹೆಣ್ಣು’ ಪಕ್ಷಾತೀತಳಾಗಿ ಇರಬೇಕಲ್ಲವೇ?  ಶೇಕಡಾವಾರು ಲೆಕ್ಕದಲ್ಲಿ ಹೇಳುವುದಾದರೆ, ವಿಆರ್ ಭಟ್ ಮಾತುಗಳಿಗೆ ಅಸಹ್ಯಿಸಿದವರೇ ಬಹಳ ಮಂದಿ. ಯಾವ ಹೆಣ್ಣು ಕೂಡ ವಿಆರ್ ಭಟ್ ನನ್ನು ಸಪೋರ್ಟ್ ಮಾಡಲಿಲ್ಲ.

ನನ್ನ ಮುಂದಿರುವ ಪ್ರಶ್ನೆ - ಪ್ರಭಾ ಅವರು ಹೋರಾಡುತ್ತಿರುವುದು ಯಾರ ವಿರುದ್ಧ? ಪುರೋಹಿತಶಾಹಿಗಳ ವಿರುದ್ಧವೇ?  ಹೆಣ್ಣನ್ನು ಚೀಪಾಗಿ ನೋಡಿದ ಪುರುಷ ಧೋರಣೆಯ ವಿರುದ್ಧವೇ? ಇದರ ಕ್ಲಾರಿಟಿ ಅವರಿಗಿದ್ದರೆ ನಂತರದ ಹೋರಾಟದ ನಡೆಯನ್ನು ತೀರ್ಮಾನಿಸಬಹುದು.  ಬ್ರಾಹ್ಮಣ್ಯದ ವಿರುದ್ಧದ ಹೋರಾಟವಾದರೆ, ಬ್ರಾಹ್ಮಣರು ಕೂಡ ಕೇಸ್ ಹಾಕುತ್ತಾರೆ ಅವರಿಗಿಷ್ಟವಿದ್ದರೆ. ಅದು ಅವರ ಹಕ್ಕಿನ ಪ್ರಶ್ನೆ ಕೂಡ. ಇವರ ಮಾತುಗಳಿಗೆ ಇವರೇ ಜವಾಬ್ದಾರರು. ಇವರು ಅದನ್ನು ಎದುರಿಸಬೇಕು.  ಪುರುಷಧೋರಣೆಯ ವಿರುದ್ಧವಾದರೆ, ಈಗಾಗಲೇ ಎಲ್ಲಾ ಹೆಣ್ಣುಮಕ್ಕಳು ಪ್ರಭಾರನ್ನು ಈ ವಿಷಯದಲ್ಲಿ ಸಪೋರ್ಟ್ ಮಾಡಿದ್ದಾರೆ.  ಮಾಡುತ್ತಾರೆ.

ಇಷ್ಟಾದರೂ ‘ಪ್ರಭಾ’ ಅವರನ್ನು ಬೆಂಬಲಿಸುತ್ತಿರುವ ಮಂದಿ, ಅದನ್ನು ಮೌನವಾಗಿಯೇ ಒಪ್ಪುತ್ತಿರುವ ‘ಪ್ರಭಾ’ ಹೇಳುತ್ತಿರುವುದಾದರೂ ಏನು?  ಕೆಲವು ‘ಜಾಗೃತ’ ಹೆಣ್ಣುಮಕ್ಕಳು ವಿಆರ್ ಭಟ್ ರನ್ನು ಬೆಂಬಲಿಸುತ್ತಿದ್ದಾರೆ, ಅವಳು RSS ನವಳು, ಅದಕ್ಕೆ ವಿಆರ್ ಭಟ್ ಮನೆಯವರನ್ನು ಸಪೋರ್ಟ್ ಮಾಡುತ್ತಿದ್ದಾಳೆ!  ಇತ್ಯಾದಿ.  ಇಲ್ಲಿ ಪಕ್ಷ ಏನು ಬಂತು?  ನೊಂದ ಹೆಣ್ಣು ಎಂದ ಮೇಲೆ ಇತ್ತ ಕಡೆಯೂ ಅದೇ, ಅತ್ತ ಕಡೆಯೂ ಅದೇ. ಕೇವಲ ‘ಭಟ್’ ಎಂಬುದಕ್ಕಾಗಿ ಇವರ ಹೋರಾಟವಾದರೆ, ‘ನನ್ನ’ ಸಪೋರ್ಟ್ ಇರದು.  ಆದರೆ ನೊಂದ ‘ಹೆಣ್ಣು’ಮಕ್ಕಳ ಪರವಾದರೆ, ಎಲ್ಲಾ ‘ಹೆಂಗಸರು’ ಎದ್ದು ನಿಂತಾರು! ಇಡೀ ಪ್ರಕರಣವನ್ನು ರಾಜ್ಯದ ಅತ್ಯಂತ ಸೆನ್ಸೇಷನಲ್ ನ್ಯೂಸ್ ಎಂಬುದಾಗಿ ಪ್ರಕಟಿಸಿದ ಮಾಧ್ಯಮದವರಾಗಬಹುದು ಅಥವಾ ಪ್ರತಿಭಟಿಸಿದವರಾಗಬಹುದು, ಇವರ ವೈಯಕ್ತಿಕ ಹಿತಾಸಕ್ತಿಗಳೇನಿರಬಹುದು? ಎಂಬುದನ್ನೆಲ್ಲಾ   ನೋಡುತ್ತಾ, ಯೋಚಿಸುತ್ತಾ ಕುಳಿತಿದ್ದ ನನ್ನಂತಹವರಿಗೆ ನಿಜವಾಗಿಯೂ ಸಮಾಜದ ದುರ್ವ್ಯವಸ್ಥೆಗೆ ಬೇಸರವಾಗದಿರದು. 

ಇಷ್ಟೆಲ್ಲಾ ನಡೆಯುತ್ತಿರುವಾಗ, ನಾನು ವಿಆರ್ ಭಟ್ ಅವರನ್ನು ಸಪೋರ್ಟ್ ಮಾಡಿದ್ದೇನೆಂದು ಬಹಳ ಮಂದಿ ನನ್ನನ್ನು ಹೀಯಾಳಿಸಿದರು (ಡಿಪ್ಲೋಮಾಟಿಕ್ ಆಗಿ). ಕೆಲವರು ಇನ್ ಬಾಕ್ಸಿಗೆ ಬಂದು ಈ ಹೋರಾಟ ಯಾವ ಸ್ವರೂಪ ಪಡೆಯುತ್ತದೆ? ಎನ್ನುವುದನ್ನು ವಿವರಿಸಿದರು. ಇನ್ನೊಂದಿಷ್ಟು ಮಂದಿ ಮೊಸಳೆ ಕಣ್ಣೀರು ಸುರಿಸುತ್ತಾ ಬಂದು ‘ನನ್ನ ಜಾತಿ’ ಯ ಬಗ್ಗೆ ವಿವರಣೆ ಪಡೆದರು. ಕಮೆಂಟುಗಳಲ್ಲಿ ಇನ್ಯಾರೋ ‘Read between the lines' ಎಂದು ಪಾಠ ಮಾಡಿದರು.  ಪಾಠ ಕಲಿತ ‘ನಾನು’ ಅವರ ಪೋಸ್ಟ್ ಗಳನ್ನು, ಕಮೆಂಟುಗಳನ್ನು ಕೂಡ ಹಾಗೇಯೇ ಓದುತ್ತೇನೆ ಎಂಬುದನ್ನು ಮರೆತರು. ಪ್ರಭಾ ಅಥವಾ ಇನ್ಯಾರೇ ಇರಬಹುದು ಹೆಣ್ಣು ‘ಅಬಲೆ’ ಎಂದು ಬಿಂಬಿಸುವುದರಲ್ಲಿಯೇ ಎಲ್ಲರ ಮನಸ್ಸು! :( ಒಟ್ಟಿನಲ್ಲಿ ‘ನನ್ನನ್ನು’ ಕೂಡ ಒಂದು ಗುಂಪಿಗೆ ಸೇರಿಸುವ ಹಂಬಲ, ಹುಮ್ಮಸ್ಸು, ಬಯಕೆ ಎಲ್ಲರದೂ. ಅವರಿಗೆಲ್ಲಾ ತಿಳಿಯದ್ದು ವೈಯಕ್ತಿಕ ವಿಷಯಗಳನ್ನು ನಾನೆಂದಿಗೂ ಸಾಮಾಜಿಕ ಜಾಲ ತಾಣಗಳಲ್ಲಿ ಬರೆಯುವಾಗ ಮೂರನೇಯ ವ್ಯಕ್ತಿಯಾಗಿಯೇ ಬರೆಯುತ್ತೇನೆ. ನಾನು ಯಾವುದೇ ಗುಂಪಿನೊಡನೇ ಸೇರಿಕೊಳ್ಳಲು ಇಷ್ಟಪಡುವುದಿಲ್ಲ ಹಾಗೂ ಈಗ ಇಲ್ಲಿ ಬರೆಯುತ್ತಿರುವ ‘ನಾನು’ ನಾನಲ್ಲ ಎಂಬುದು. 

ಹಾಗಾದರೆ ಇಲ್ಲಿ ಬಳಸಿರುವ ‘ನಾನು’ ಯಾರು?  ‘ನಾನು’ ಎಂದರೆ ‘ಅತ್ಯಂತ ಸಾಮಾನ್ಯ ವ್ಯಕ್ತಿ’!. ನಾನು ಯಾರದೋ ರಾಜಕೀಯ ದಾಳಗಳಿಗೆ ಬಲಿಯಾಗುವುದನ್ನು ಒಪ್ಪುವುದಿಲ್ಲ. ನನಗೆ ಯಾವುದೇ ಕಟ್ಟುಪಾಡುಗಳು, ಹುನ್ನಾರಗಳು, ಎಡ, ಬಲ ಎಂಬ ಸಿದ್ದಾಂತಗಳು ಕಾಡುವುದಿಲ್ಲ. ಹೆಸರಿನ ಅಥವಾ ಹಣ ಮಾಡುವ ಬಯಕೆಯಿಲ್ಲ. ನನಗೆ ಮಾಧ್ಯಮಗಳಲ್ಲಿ ಬರುವುದು ಕೂಡ ಬೇಕಿಲ್ಲ. ನನಗೆ ಬೇಕಿರುವುದು ಸಮಾಜದ ಸ್ವಾಸ್ತ್ಯ  ಯಾರದೋ ರಾಜಕೀಯಕ್ಕೆ ಬಲಿಯಾಗುವುದಲ್ಲ. ಅಪ್ಪ ಹಾಕಿದ ಆಲದ ಮರಕ್ಕೆ ಜೋತು ಬೀಳುವ ವ್ಯಕ್ತಿತ್ವದ ಅವಶ್ಯಕತೆಯೂ ಇಲ್ಲಾ.  ತಾತ ಮಾಡಿದ ತಪ್ಪಿಗೆ ಮೊಮ್ಮಕ್ಕಳು ಬಲಿಯಾಗುವ ಆಸೆಯಿಲ್ಲ.  ಸಮಾಜದಲ್ಲಿ ಎಲ್ಲಕ್ಕಿಂತ ಹೆಚ್ಚಾಗಿ ತುಳಿತಕ್ಕೊಳಗಾಗಿರುವವರು ಬಡವರು, ರೈತರು. ಇವರನ್ನು ಮೇಲಕ್ಕೆತ್ತಬೇಕೆಂಬ ಹಪಾಹಪಿ.  ಎಲ್ಲಾ ಜಾತಿ, ಮತ, ಧರ್ಮಗಳಲ್ಲೂ ಕೊಳಕಿದೆ, ಆದರೆ ಬೆಳೆಸಬೇಕಿರುವುದು ಅದರಲ್ಲಿನ ಪಾಸಿಟಿವ್ ಗುಣಗಳನ್ನಷ್ಟೆ ಎಂಬ ಅರಿವು, ಹೆಣ್ಣು ‘ಅಬಲೆ’ ಯಲ್ಲಾ, ಅವಳು ಗಂಡಿನಷ್ಟೇ ಸರಿಸಮಾನಳು ಎಂಬ ಪ್ರಜ್ಞೆ, ಯಾವುದೇ ಸಮಾಜದ ರೀತಿನೀತಿಗಳು ಮಕ್ಕಳಿಗೆ ಆದರ್ಶಪ್ರಾಯವಾಗಿರಬೇಕು. ನಮ್ಮ ಮಕ್ಕಳು ಚಂದವಾಗಿ, ಸುಂದರವಾಗಿ ಬೆಳೆಯಬೇಕೆಂದು ಅಪೇಕ್ಷೆ ಪಡುವಂತಹ ಮನಸ್ಥಿತಿಯಷ್ಟೇ.  ‘ನನಗೆ’ ಬೇಕಿರುವುದು ನಿಜವಾಗಿಯೂ ‘ಗುಂಪುಗಾರಿಕೆ’ಯಲ್ಲ. ಸಮಾಜವನ್ನು ಬೆಳೆಸುವ, ಕಟ್ಟುವ ಒಂದೊಳ್ಳೆಯ ‘ಟೀಮ್’. 





ಬರವಣಿಗೆ

ಯಾವುದೇ ಓದು ಅಥವಾ ಬರವಣಿಗೆ ಆ ಮನುಷ್ಯನನ್ನು ಇನ್ನಷ್ಟು ವಿನಯವಂತನನ್ನಾಗಿಸದಿದ್ದರೆ, ಆತ ಬರೆದದ್ದು / ಓದಿದ್ದು ವ್ಯರ್ಥ.


ಬರವಣಿಗೆಯೋ / ಇನ್ಯಾವುದೋ ಕಲಾಪ್ರಕಾರಗಳು ಮೊದಲು ಅದರ ರಚನಕಾರನಿಗೆ ಖುಷಿ ನೀಡಬೇಕು, ಅವುಗಳಲ್ಲಿ ಪ್ರಾಮಾಣಿಕತೆ ಇರಬೇಕು, ಹೊಗಳುಭಟರೇ ತುಂಬಿರುವ ಈಗಿನ ಕಾಲದಲ್ಲಿ ತನ್ನ ರಚನೆಗಳನ್ನು ತಾನೇ ಪುನರ್ವಿಮರ್ಶೆ ಮಾಡಿಕೊಳ್ಳುವ ಅವಶ್ಯಕತೆ ಬಹಳ ಹೆಚ್ಚು. ಜೊತೆಗೆ ಯಾವುದೇ ಕೃತಿ, ಅದರ ಕೃತಿಕಾರನಿಗೆ ತೃಪ್ತಿ ನೀಡಬಾರದು. 

ತನ್ನ ರಚನೆಗಳನ್ನು ತಲುಪುವವರಿಗೆ ತಲುಪಿಸಿದ ನಂತರ, ನಿರಾಳವಾಗಿಬಿಡಬೇಕು, ಅದಕ್ಕೆ ದೊರೆಯುವ ಎಲ್ಲಾ ರೀತಿಯ ಹೊಗಳಿಕೆ / ತೆಗಳಿಕೆ, ಟೀಕೆ, ಟಿಪ್ಪಣಿಗಳನ್ನು ನಿರ್ಲಿಪ್ತವಾಗಿ ಸ್ವೀಕರಿಸುವ ಮನಸ್ಥಿತಿ ಬೆಳೆಸಿಕೊಳ್ಳಬೇಕು. ಸಾಧ್ಯವಿದ್ದರೆ, ಆ ಟೀಕೆಗಳನ್ನು ಮೀರಿ, ತಪ್ಪುಗಳನ್ನು ಸರಿ ಮಾಡಿಕೊಳ್ಳುವತ್ತ ತನ್ನ ಮುಂದಿನ ಹೆಜ್ಜೆಯನ್ನು ಇಡಬೇಕು.



ಹೆಣ್ಣು ಅಬಲೆ! :(


http://bhoothagannadi.blogspot.in/2014/08/blog-post_4.html?m=1 ಈ ಲೇಖನ ಓದಿದಾಗ ಬೇಡಬೇಡವೆಂದರೂ ನಾನು ೧೦ ನೇ ತರಗತಿಯಲ್ಲಿದ್ದಾಗ ನಡೆದ ಕಾವೇರಿ ಗಲಾಟೆ ನೆನಪಾಯಿತು. 

ನಾವು ಆಗ ರಾಜಾಜಿನಗರದಲ್ಲಿದ್ದೆವು. ಪಕ್ಕದ ರಸ್ತೆ ಪ್ರಕಾಶ ನಗರ. ಇತ್ತ ಕಡೆ ಕನ್ನಡಿಗರು, ಅತ್ತ ಕಡೆ ತಮಿಳರು ಹೆಚ್ಚು. ಅಲ್ಲೆಲ್ಲೋ ನಡೆಯುತ್ತಿದ್ದ ಕಾವೇರಿ ಗಲಭೆಯ ಗಾಳಿ ಇಲ್ಲಿಗೂ ಬೀಸಿತು. ಅದುವರೆವಿಗೂ ಒಟ್ಟಿಗೆ ಟೀ ಕುಡಿಯುತ್ತಿದ್ದ, ಹೆಗಲ ಮೇಲೆ ಕೈ ಹಾಕಿಕೊಂಡು ಓಡಾಡುತ್ತಿದ್ದ ಗೆಳೆಯರ ನಡುವೆ ಎರಡು ಬಣಗಳಾದವು. ಕರ್ನಾಟಕ ತಮಿಳುನಾಡು ಬಾರ್ಡರ್ ನಮ್ಮ ಮನೆಯ ಪಕ್ಕದಲ್ಲೇ ರಚಿತವಾಯಿತು. ಎರಡು ಕಡೆಯವರೂ ಆತ್ಮೀಯ ಸ್ನೇಹಿತರೇ. ಆದರೂ ಸೀಮೆಎಣ್ಣೆ ಬಾಟಲುಗಳಿಂದ ಹಿಡಿದು ಚಾಕು, ಚೂರಿ, ಮಚ್ವು, ಲಾಂಗ್ ಎಲ್ಲವೂ ಹೊರ ಬಂದವು. ಎರಡೂ ಕಡೆಯವರು ಬೈದಾಡುತ್ತಿದ್ದರು. ಬಾಟಲುಗಳನ್ನು ಎಸೆಯುತ್ತಿದ್ದರು. ಎರಡೂ ಕಡೆಯವರೂ ಬೈದಾಡುತ್ತಿದ್ದರು. ನಮ್ಮ ಬೈಗುಳಗಳೆಲ್ಲವೂ ಅಮ್ಮ ಮತ್ತು ಅಕ್ಕಂದಿರಿಗೆ ಅಲ್ಲವೇ?  ಪೋಲೀಸರು ಬಂದು ಅಶ್ರುವಾಯು ಸಿಡಿಸಿದರು. ನಮ್ಮ ಮನೆಯೇ ಕಾರ್ನರ್ ಆದ್ದರಿಂದ ಜೊತೆಗೆ ಅಣ್ಣನ ಸ್ನೇಹಿತರು ಒಂದಷ್ಟು ಜನರಿದ್ದರಿಂದ ನಮ್ಮ ಮನೆಯ ಈರುಳ್ಳಿಯೆಲ್ಲವೂ ಖಾಲಿ. ಕರ್ಫ್ಯೂ ಹಾಕಿದರು. ಈ ಗಲಾಟೆಯ ಸಂದರ್ಭವನ್ನು ಉಪಯೋಗಿಸಿಕೊಂಡು, ನಮ್ಮ ಮನೆಯ ಎದುರು ಬಹುಕಾಲದಿಂದ ಎಬ್ಬಿಸಲಾಗದೇ ವಾಸವಾಗಿದ್ದ ಸ್ಲಮ್ / ಮನೆ (ನೆನಪಿಲ್ಲ) ಒಂದಕ್ಕೆ ಬೆಂಕಿ ಹಚ್ಚಲಾಯಿತು. ಪಾಪ! ಆಮೇಲೆ ಆ ಜನರು ಎಲ್ಲಿ ಹೋದರೋ ತಿಳಿಯಲಿಲ್ಲ. 

ಗಲಭೆಗೆ ಸೇರಿದ್ದ ಜನರು ದೂರವಾಗುವಾಗ ಹೇಳಿ ಹೋದದ್ದು ಮಾತ್ರ "ನಿಮ್ಮ ರಸ್ತೆಯಲ್ಲಿ ಓಡಾಡುವ ಯಾವ ಹೆಣ್ಣುಮಕ್ಕಳು ಕೂಡ ಸುರಕ್ಷಿತವಾಗಿ ಮನೆ ಸೇರಲಾರರು!  

ಒಂದಷ್ಟು ದಿವಸಗಳು ನಾನು ಟೈಪಿಂಗ ಕ್ಲಾಸಿಗೆ ಹೋಗುವಾಗ ನನ್ನೊಟ್ಟಿಗೆ ಯಾರಾದರೂ ಬರುತ್ತಿದ್ದರು. ಹೀಗೆ ಎತ್ತಿಗೆ ಜ್ವರ ಬಂದರೆ, ಎಮ್ಮೆಗೆ ಬರೆ! ಯಾವಾಗಲೂ ಅಂದು, ಇಂದು 

ಇಂತಿ ನಮಸ್ಕಾರಗಳು - ನಟರಾಜ್ ಹುಳಿಯಾರ್ ಅವರ ಪುಸ್ತಕದಲ್ಲಿ ಇಷ್ಟವಾದದ್ದು.

ನಟರಾಜ್ ಹುಳಿಯಾರ್ ಅವರ ‘ಇಂತಿ ನಮಸ್ಕಾರಗಳು’ ಲಂಕೇಶ್ ಮತ್ತು ಡಿ.ಆರ್. ನಾಗರಾಜ್ ಅವರ ಬಗೆಗಿನ, ಅವರ ಆಲೋಚನೆಗಳ ಬಗೆಗಿನ ವಿವರಣೆಯನ್ನು ನೀಡುವ ಪುಸ್ತಕ. ಎಲ್ಲಾ ಹಿರಿ, ಮರಿ, ಕಿರಿ ಸಾಹಿತಿಗಳು ಓದಬೇಕಾದದ್ದು. ಕೆಲವು ವಾಕ್ಯಗಳಂತೂ ಸಿಕ್ಕಾಪಟ್ಟೆ ಇಷ್ಟವಾಗಿಬಿಡುತ್ತವೆ. ಅವುಗಳಲ್ಲಿ ಬಹುಮುಖ್ಯವೆನೆಸಿದ್ದು Especially FB ಭಟ್ಟಂಗಿಗಳಿಗೆ ಅನ್ವಯಿಸುವುದು

೧. ಯಾಜಮಾನ್ಯ ತನ್ನ ಭಟ್ಟಂಗಿಗಳನ್ನು ತಾನೇ ಸೃಷ್ಟಿಸಿಕೊಳ್ಳುತ್ತಿರುತ್ತದೆ. ರಾಜರುಗಳು ತಮ್ಮ ದೌರ್ಬಲ್ಯಗಳನ್ನು ಮುಚ್ಚಿಕೊಳ್ಳಲು, ತಮ್ಮನ್ನು ಜನಪ್ರಿಯಗೊಳಿಸಿಕೊಳ್ಳಲು ಹಾಗೂ ಆತ್ಮವಿಶ್ವಾಸದ ಕೊರತೆಯನ್ನು ತುಂಬಿಕೊಳ್ಳಲು ಕೂಡ ಭಟ್ಟಂಗಿಗಳನ್ನು ಸೃಷ್ಟಿಸಿಕೊಳ್ಳುತ್ತಾರೆ. ಜೊತೆಗೆ ಕೀಳರಿಮೆಯಿಂದಾಗಿ ಕೂಡ ಭಟ್ಟಂಗಿಗಳನ್ನು ನೇಮಿಸಿಕೊಳ್ಳುತ್ತಿರುತ್ತಾರೆ. ಈ ಭಟ್ಟಂಗಿಗಳು ರಾಜನ ಪ್ರತ್ಯೇಕ ಸಂಸ್ಥೆಯಾಗಿಯೂ ಕಾರ್ಯ ನಿರ್ವಹಿಸುತ್ತಿರುತ್ತಾರೆ. ಆತ್ಮವಿಶ್ವಾಸದ ಕೊರತೆಯಿಂದಾಗಿ ಆಳುವವರು ಮತ್ತು ಆಳುಗಳಿಬ್ಬರಿಗೂ ಈ ಭಟ್ಟಂಗಿತನ ಅನಿವಾರ್ಯವಾಗುತ್ತದೆ. ಪ್ರಭುತ್ವಕ್ಕೆ ಹೊಗಳಿಕೆ ಬೇಕಾದ್ದರಿಂದ, ಅದರ ಅಧೀನದಲ್ಲಿರುವವರಿಗೂ ಭಟ್ಟಂಗಿತನ ತಮ್ಮ ಜೀವನ ನಿರ್ವಹಣೆಯ ಸಲೀಸು ಮಾರ್ಗವಾಗಿಬಿಡುತ್ತದೆ.

೨. ಹೊಗಳದಿದ್ದರೆ ಅಭದ್ರತೆ, ಹೊಗಳಿದರೆ ಅನುಮಾನ ... ಈ ಎರಡೂ ಪ್ರವೃತ್ತಿಗಳು ನಮ್ಮಲ್ಲಿರುತ್ತವೆ. ಆದರೆ ನಾವು ಸೂಕ್ಷ್ಮವಾಗಿದ್ದರೆ, ಇನ್ನೊಬ್ಬ ನಮ್ಮನ್ನು ಹೊಗಳಲಾರಂಭಿಸಿದ ತಕ್ಷಣ ನಮ್ಮ ದೌರ್ಬಲ್ಯಗಳೇ ಹೆಚ್ಚು ಗೋಚರಿಸತೊಡಗುತ್ತವೆ. ಅಭದ್ರ ಮನಸ್ಥಿತಿಯಲ್ಲಿರುವ ಒಬ್ಬ ಯಜಮಾನನೇ ಭಟ್ಟಂಗಿಗಳನ್ನು ಸೃಷ್ಟಿಸಿಕೊಳ್ಳಬಹುದು. ಮನುಷ್ಯನ ಕೀಳರಿಮೆಯಿಂದ, ಲಾಭದಾಸೆಯಿಂದ ಅಥವಾ ಇನೊಬ್ಬನನ್ನು ಸಂತೋಷವಾಗಿಡಲು ಬಯಸುವ ಸರಳವಾದ ಒಳ್ಳೆಯತನದಿಂದಲೂ ಹೊಗಳಿಕೆ ಹುಟ್ಟಿರಬಹುದು. ಕೆಲ ಬಗೆಯ ಓದುಗರು ಲೇಖಕನೊಬ್ಬನನ್ನು ಗ್ರಹಿಸಲು ಶ್ರಮಪಡುವುದರ ಬದಲಿಗೆ ಅವನನ್ನು ಸುಮ್ಮನೆ ಹೊಗಳುವ ಸುಲಭ ಮಾರ್ಗ ಹಿಡಿಯುವುದನ್ನು ಕಂಡು ನಾಟಕಕಾರ ಬರ್ಟೋಲ್ಟ್ ಬ್ರೆಕ್ಟ್ ಉರಿದು ಬೀಳುತ್ತಿದ್ದನಂತೆ.
(ಆದರೆ ಐರನಿ ನೋಡಿ, ಇದೇ ಬ್ರೆಕ್ಟ್, ಲಂಕೇಶ್, ಡಿ.ಆರ್ ಅಭಿಮಾನಿಗಳು ಎಂದು ಹೇಳಿಕೊಳ್ಳುವ ಅನೇಕ ಮಂದಿ, ಒಬ್ಬರು ಮತ್ತೊಬ್ಬರ ಭಟ್ಟಂಗಿಗಳಾಗಿರುವುದು!  )

೪.  ಭಟ್ಟಂಗಿಗಳ ಸುಳ್ಳುಗಳಲ್ಲಿ ಲೇಖಕ ಸತ್ಯಕ್ಕಾಗಿ ತಡಕಾಡುವಂತಾಗುತ್ತದೆ. (ಫೇಸ್ ಬುಕ್ಕಿನಲ್ಲಂತೂ ಸಿಕ್ಕಾಪಟ್ಟೆ ತಡಕಬೇಕಾಗುತ್ತದೆ)

೫.  ಬರೆಯುವವನಿಗೆ ಹೊರಗಣ್ಣಿಗಿಂತ ಒಳಗಣ್ಣು ಮುಖ್ಯ

೬.  ಗೊತ್ತಿದ್ದೋ ಗೊತ್ತಿಲ್ಲದೆಯೋ ಸುಳ್ಳು, ಅರೆ ಸುಳ್ಳು ಬರೆಯುವ, ಮಾತನಾಡುವ ಎಲ್ಲರೂ ತಮ್ಮೊಳಗೆ ನರಕ ಸೃಷ್ಟಿಸಿಕೊಳ್ಳುತ್ತಲೇ ಸುತ್ತಲಿನ ನರಕವನ್ನು ಆಳವಾಗಿಸುತ್ತಾ ಹೋಗುತ್ತಾರೆ. 

೭. ವ್ಯಕ್ತಿಯೊಬ್ಬನ ನಿರ್ಗಮನದ ನಾಲ್ಕಾರು ವರ್ಷಗಳಲ್ಲೇ ನಾವು ನೋಡುವ ಕಣ್ಣು ಹೇಗೆ ಬದಲಾಗುತ್ತಿರುತ್ತದೆ! ಅವನ ಬಗೆಗಿನ ಪೂರ್ವಾಗ್ರಹಗಳು, ಅನಗತ್ಯ ಮೆದುತನ, ಇವನು ನಮ್ಮವನೆಂದು ಸುಮ್ಮನೆ ಉಕ್ಕುವ ಪ್ರೀತಿ, ಅತಿ ನಿಕಟತೆಯಿಂದ ಒಸರತೊಡಗುವ ಅಸಹನೆ... ಇವೆಲ್ಲ ಕಡಿಮೆಯಾಗಿ ಒಂದು ಬಗೆಯ ನಿರ್ಲಿಪ್ತ ದೃಷ್ಟಿ ನಿರ್ಮಾಣವಾಗತೊಡಗುತ್ತದೆ. 

೮.  ಲಂಕೇಶ ಬಯ್ದಂತೆ ತಾವೂ ಬಯ್ಯಬಹುದೆಂದು ಹೊರಟ ಪತ್ರಕರ್ತರು ಎಲ್ಲೆಡೆ ಭಂಡ ಪತ್ರಿಕೋದ್ಯಮವನ್ನು ಸೃಷ್ಟಿಸತೊಡಗಿದರು.
ಲಂಕೇಶರನ್ನು ಅನುಕರಿಸುವ ಅನೇಕರು ಅವರ ತಾತ್ವಿಕ ಆಳವಿಲ್ಲದೆ, ನೈತಿಕ ರೋಷವನ್ನು ಆರೋಪಿಸಿಕೊಂಡು ಬರೆಯುವುದರಿಂದಲೇ ಅಂಥವರು ಹುಸಿಯಾಗಿ ಕಾಣುತ್ತಾರೆ ಹಾಗೂ ಅವರ ಬರಹಗಳು ತೆಳುವಾಗಿ ಕಾಣತೊಡಗುತ್ತವೆ. (ಹ್ಮ್, ಈಗಲೂ ಇದು ತಪ್ಪಿಲ್ಲ  ಎಷ್ಟೇ ಕುಣಿದರೂ ಕೆಂಬೂತ ........... ಆಗುತ್ಯೇ? :))

೯.  ದೊಡ್ಡ ಲೇಖಕನೊಬ್ಬ ಗಂಭೀರ ಸಾಹಿತ್ಯ ವಿಮರ್ಶಕನೂ, ಮತ್ತೆ ಮತ್ತೆ ತನ್ನ ಕಲೆಯನ್ನು ಪರೀಕ್ಷಿಸಿಕೊಳ್ಳುವ ವಿದ್ಯಾರ್ಥಿಯೂ ಆಗಿರುತ್ತಾನೆ ಮತ್ತು ಆಗಿರಲೇಬೇಕು

೧೦.  ಸಾಹಿತ್ಯಸಂಸ್ಥೆಗಳ ವಿಮರ್ಶಾ ತೀರ್ಮಾನಗಳ ಬಗ್ಗೆ ಲಂಕೇಶರಿಗೆ ಅಷ್ಟೇನೂ ನಂಬಿಕೆಯಿರಲಿಲ್ಲ. "ಈ ಅಕಾಡೆಮಿ ಥರದ ಸಂಸ್ಥೆಗಳಲ್ಲಿ ಮೂರನೆಯ ದರ್ಜೆಯ ನಾಟಕಕಾರನೊಬ್ಬನಿಗೆ, 'ನಿನ್ನ ನಾಟಕ ಚೆನ್ನಾಗಿಲ್ಲ' ಎಂದು ಹೇಳಿದರೆ, 'ನಿನ್ನ ನಾಟಕ ಚೆನ್ನಾಗಿದೆಯಾ?' ಎಂದು ಕೇಳುತ್ತಾನೆ. ಇಂಥ ಕಡೆ ಅಭಿರುಚಿ, ಆಯ್ಕೆಗಳು ಶ್ರೇಷ್ಠ ಮಟ್ಟದ್ದಾಗುವುದು ಕಷ್ಟ


Evil ಬಗ್ಗೆ ಲಂಕೇಶ್ ಬರೆದದ್ದು!

‘ಮನುಷ್ಯ ಮೂಲತಃ ಈವಿಲ್’ ಎಂದವರು ಲಂಕೇಶ್. 

ಲಂಕೇಶ್ ರ ‘ಸಂಕ್ರಾಂತಿ’ ದಲಿತ, ಬಂಡಾಯ, ಪ್ರಗತಿಪರ ಸಾಹಿತ್ಯದಲ್ಲಿ ವ್ಯಾಪಕವಾಗಿ ಕಂಡ ಪ್ರಭುತ್ವ ಕುರಿತ ಅನೇಕ ಪ್ರಶ್ನೆಗಳನ್ನು ಎಪ್ಪತ್ತರ ದಶಕದ ಆರಂಭದಲ್ಲೇ ಧ್ವನಿಪೂರ್ಣವಾಗಿ ಮಂಡಿಸಿದೆ. ವೈದಿಕ ಧರ್ಮ, ಜೈನ ಧರ್ಮ, ಶರಣ ಧರ್ಮ ಎಲ್ಲವೂ ಇಲ್ಲಿ ಪರೀಕ್ಷೆಗೆ ಒಳಗಾಗುತ್ತವೆ. ಇಲ್ಲಿನ ಬಿಜ್ಜಳ-ಬಸವಣ್ಣರ ಮುಖಾಮುಖಿ ತಾತ್ವಿಕ, ಸಾಮಾಜಿಕ ಹಾಗೂ ವ್ಯಕ್ತಿಗತ ಮುಖಾಮುಖಿಗಳನ್ನು ಒಟ್ಟಿಗೇ ಗ್ರಹಿಸಬಲ್ಲ ಬಹು ಸೂಕ್ಷ್ಮ ಮಾದರಿಯೊಂದನ್ನು ರೂಪಿಸಿದೆ. ಬಸವಣ್ಣ ಬಿಜ್ಝಳನ ಅಧಿಕಾರದ ಶಿಥಿಲತೆ ಹಾಗೂ ಭ್ರಮೆಗಳನ್ನು ಟೀಕಿಸುತ್ತಾನೆ. ಬಿಜ್ಜಳ ‘ನೀನು ಬ್ರಾಹ್ಮಣ, ಒಂದು ಕಾಲದಲ್ಲಿ ಸಂಸ್ಕೃತ ಭಾಷೆಯನ್ನು ಬಳಸಿಕೊಂಡು ಕೆಳಜಾತಿಯವರನ್ನು ಶೋಷಿಸುತ್ತಿದ್ದೆ. ಈಗ ಕನ್ನಡ ಭಾಷೆಯನ್ನು ಬಳಸಿ ಅದೇ ಕೆಲಸ ಮಾಡುತ್ತಿದ್ದೀಯಾ’ ಎಂದು ಬಸವಣ್ಣನನ್ನು ಛೇಡಿಸುತ್ತಾನೆ.

‘ಸಂಕ್ರಾಂತಿ’ಯ ಬಿಜ್ಜಳ ಹೇಳುತ್ತಾನೆ : ‘ಪ್ರೇಮ, ಕಾಮ, ಅತ್ಯಾಚಾರ, ವ್ಯಕ್ತಿಪ್ರೇಮ, ಜಾತಿಪ್ರೇಮ, ನಿಷ್ಕಾಮ ಪ್ರೇಮ - ಯಾವುದನ್ನು ಮಾಡಲು ಹೋಗಿ ಯಾವುದನ್ನು ಮಾಡುತ್ತೇವೋ ದೇವರೇ ಬಲ್ಲ...’

ಕವನವೊಂದನ್ನು ಸಾಲುಗಳ ಮಧ್ಯೆ ಓದಬೇಕೆಂದು ರೂಪನಿಷ್ಠ ವಿಮರ್ಶಕರು ಹೇಳುವ ಹಾಗೆ, ಲಂಕೇಶರಂಥ ಲೇಖಕರು ಮನುಷ್ಯರನ್ನು ಕೂಡ ಹಾಗೇ ಗ್ರಹಿಸಬೇಕೆಂದು ನಮಗೆ ನೆನಪಿಸುತ್ತಿರುತ್ತಾರೆ. ಆದ್ದರಿಂದಲೇ ಎಲ್ಲೆಡೆ ಇರುವ ಕೇಡು ನಾಯಕಪಾತ್ರಗಳಲ್ಲೂ ಇರುತ್ತದೆ ಎಂಬುದನ್ನು ಕಾಣಲು, ಕಾಣಿಸಲು ಈ ಬಗೆಯ ಲೇಖಕರು ಹಿಂಜರಿಯುವುದಿಲ್ಲ.

ಮನುಷ್ಯನ ಕೇಡಿನ ಪ್ರವೃತ್ತಿ ಕತ್ತಿಯ ಮೊನೆಯಲ್ಲಿ ವ್ಯಕ್ತವಾದರೆ ಅದನ್ನು ಗುರುತಿಸುವುದು ಸುಲಭ. ಆದರೆ ಅದು ನಾವು ಸಾಮಾನ್ಯವಾಗಿ ಸಂದೇಹಿಸದಂಥ ಮಾನವವರ್ತನೆಗಳ ಹಿಂದೆಯೂ ಇದ್ದರೆ?

ಈವಿಲ್ ಗೆ ಇನ್ನೊಂದು ಈವಿಲ್ ಅನ್ನು ಕೇವಲ ಸೋಲಿಸಿದ ಮಾತ್ರಕ್ಕೆ ಆನಂದವಿಲ್ಲ. ಬದಲಿಗೆ, ಮುಗ್ಧವಾದದ್ದನ್ನು ಹೊಸಕಿ ಹಾಕಿದಾಗಲೇ ಅದಕ್ಕೆ ತೃಪ್ತಿ’ ಎಂದು ಬಸವರಾಜ ಅರಸು ಹೇಳಿದ್ದರು.

ನಮ್ಮ ಓದು, ತರಬೇತಿಗಳು ನಮ್ಮ ಆಳದ ಕೇಡನ್ನು ಆಗಾಗ ಸ್ಪರ್ಶಿಸಿದರೂ ಅದನ್ನು ಸಂಪೂರ್ಣವಾಗಿ ಕದಲಿಸದೆ ಸೋತುಬಿಡುತ್ತವೆಯೇ? ಹಾಗಾದರೆ ಯಾವ ಮನುಷ್ಯನೂ ಮೂಲಭೂತವಾಗಿ ಬದಲಾಗಲಾರನೆ?

ಇನ್ನೊಬ್ಬ ವ್ಯಕ್ತಿಯ ಆಳಕ್ಕೆ ಹೋಗುವುದು ನಮ್ಮ ಆಳಕ್ಕೆ ಹೋಗುವ ಮೂಲಕ ಮಾತ್ರ ಸಾಧ್ಯ.

ಮನುಷ್ಯನಿಗೆ ಇನ್ನೊಬ್ಬರನ್ನು ಹಿಂಸಿಸುವುದರಲ್ಲಿ, ವಂಚಿಸುವುದರಲ್ಲಿ ಆನಂದವಿದೆ.

ಈವಿಲ್ ಗೆ ಇರುವ ವಿಚಿತ್ರ ಚಾಲಕಶಕ್ತಿ ಹಾಗೂ ಅದರ ಆಕರ್ಷಣೆ ಎಷ್ಟು ಆಳವಾದದ್ದು ಎಂಬುದನ್ನು ಅರಿಯದ ಲೇಖಕ ಭೋಳೆಯಾಗಿಬಿಡಬಲ್ಲ. ಕೇಡು ಅದೆಷ್ಟು ಆಕರ್ಷಕವಾಗಿರಬಲ್ಲದೆಂದರೆ, ಬರೆಯುತ್ತಾ, ಬರೆಯುತ್ತಾ ಲೇಖಕನೇ ಅದರ ಸ್ವರೂಪಕ್ಕೆ ಬೆರಗಾಗಿ ಅದರ ಮೋಹಕ್ಕೆ ಒಳಗಾಗಬಲ್ಲ.

ಈವಿಲ್ ಏಕಮನಸ್ಸಿನಿಂದ ಕೆಲಸ ಮಾಡುತ್ತಿರುತ್ತದೆ. ಅದಕ್ಕೆ ವಿನಾಶ ಮಾಡುವುದು ಹಾಗೂ ಗೆಲ್ಲುವುದು ಬಿಟ್ಟರೆ ಬೇರೆ ಕೆಲಸವೇ ಇಲ್ಲ. ಆದರೆ ಒಳಿತು ಹಾಗಲ್ಲ. ಕೇಡು ಹೆಚ್ಚಿಗೆ ಇರುವ ಜನ ಏನಾದರೂ ಮಾಡಿ ಸುಳ್ಳು, ಮೋಸ ಎಲ್ಲ ಬೆರೆಸಿ ತಮ್ಮ ಕೆಲಸ ಸಾಧಿಸಿಕೊಳ್ಳಲು ಯತ್ನಿಸುತ್ತಾರೆ; ಆದರೆ ಒಳ್ಳೆಯತನ ಹೆಚ್ಚಿಗೆ ಇರುವ ಸಂಕೋಚ ಸ್ವಭಾವದವರು ಹಿಂದೆ ಸರಿದುಬಿಡುತ್ತಾರೆ.

ಮನೋವಿಜ್ಞಾನಿ ರೊಲೋ ಮೇ ಎರಡು ಬಗೆಯ ಮುಗ್ಧತೆಗಳನ್ನು ಗುರುತಿಸುತ್ತಾನೆ. ಒಂದು, ಭೋಳೆ ಮುಗ್ಧತೆ; ಇನ್ನೊಂದು, ಪ್ರಾಮಾಣಿಕ ಮುಗ್ಧತೆ. ಅವನ ಪ್ರಕಾರ ‘ಯಾವುದು ಕೇಡಿನ ಸ್ವರೂಪ ಹಾಗೂ ಶಕ್ತಿಯನ್ನು ಅರಿತಿರುವುದಿಲ್ಲವೋ ಅದು ಭೋಳೆ ಮುಗ್ಧತೆ; ಕೇಡನ್ನು ಅರಿತು ತನ್ನ ಮುಗ್ಧತೆಯನ್ನು ಉಳಿಸಿಕೊಳ್ಳುವುದೇ ಪ್ರಾಮಾಣಿಕ ಮುಗ್ಧತೆ’.

ಎಲ್ಲೆ - ಕಿರುಚಿತ್ರ

ಹೀಗೆ ಸ್ಕೂಲ್ ಗಳ ಬಗ್ಗೆ

ಪ್ರಾಬ್ಲಮ್ ಇರೋದು ನಮ್ಮ ಶಾಲೆಗಳೆಲ್ಲಾ ಕಾರ್ಪೋರೇಟ್ ಸ್ಕೂಲ್ ಗಳಾಗಿರುವುದರಿಂದ. ಹಣ ಮಾಡುವುದಷ್ಟೇ ಇವುಗಳ ಮೂಲ ಉದ್ದೇಶ. ಹಾಗಾಗಿ ಆ ಸ್ಕೂಲಿನಲ್ಲಿ ಜರ್ಮನ್, ಫ್ರೆಂಚ್ ತರಾನೇ "ಕನ್ನಡ" ಕಲಿಸ್ತಾರಂತೆ! ಅನ್ನೋದು ದೊಡ್ಡ ವಿಷಯ, ದುಡ್ಡಿನ ವಿಷಯವಾದರೆ, ತಾನಾಗಿಯೇ ಕನ್ನಡ ಕಲಿಸೋಕೆ ಮುಂದೆ ಬರ್ತಾರೆ ಇವರೆಲ್ಲಾ. ಹಾಗಾಗಿ ಇವರನ್ನು ನಂಬಿ ಪ್ರಯೋಜನವಿಲ್ಲ.
ನಾವು ಮಾಡಬೇಕಿರುವುದು ನಮ್ಮಮಕ್ಕಳಿಗೆ ನಮ್ಮ, ನಮ್ಮ ಭಾಷೆಗಳ ಮೇಲಿನ ಪ್ರೀತಿಯನ್ನು ಹೆಚ್ಚಿಸುವುದು. ಅವರೊಂದಿಗೆ ಅದೇ ಭಾಷೆಯಲ್ಲಿ ಮಾತನಾಡುವುದು, ಅದೇ ಭಾಷೆಯನ್ನು ಕೇಳಿಸುವುದು. ಮೊದಲ 3 ವರ್ಷಗಳು ನಾವು ಯಾವ ಭಾಷೆಯಲ್ಲಿ ಮಕ್ಕಳೊಡನೆ ಮಾತನಾಡುತ್ತೇವೆ, ಅದೇ ಮಕ್ಕಳ ಮಾತೃಭಾಷೆಯಾಗುತ್ತದೆ. ಕನ್ನಡ ಮಾತಾಡಿ, ಕನ್ನಡ ಡಬ್ಬಿಂಗ್ ತನ್ನಿ, ಕನ್ನಡ ಕೇಳಿಸಿ. ಓದೋಕೆ ಒಳ್ಳೆಯ ಪುಸ್ತಕಗಳನ್ನು ನೀಡಿ, ಬರೆಯೋದು ತಾನಾಗಿಯೇ ಕಲಿತಾರೆ. 

ಮಕ್ಕಳನ್ನು ಯಾವ ಭಾಷೆಯಲ್ಲಿ ಓದಿಸಬೇಕು ಅನ್ನುವ ಸಮಸ್ಯೆ ಇವತ್ತು, ನಿನ್ನೆಯದಲ್ಲ! 50 ವರ್ಷಗಳ ಹಿಂದೆ ನಮ್ಮಮ್ಮ ಕೂಡಾ ತಲೆ ಕೆಡಿಸಿಕೊಂಡಿದ್ದರು. ಹೈಸ್ಕೂಲಿನಲ್ಲಿ ಇಂಗ್ಲೀಷ್ ಪ್ರಾಧ್ಯಾಪಕರಾದ ಅವರಣ್ಣ ಹೇಳಿದಂತೆ ನಾವೆಲ್ಲರೂ ಏಳನೇ ತರಗತಿಯ ತನಕ ಕನ್ನಡದಲ್ಲಿ ಓದಿ, ನಂತರ ಇಂಗ್ಲೀಷ್ ತೆಗೆದುಕೊಂಡಿದ್ದೆವು. ನಮ್ಮ ಮಕ್ಕಳ ಕಾಲಕ್ಕೆ ಈಗ 4,5 ಮಾದರಿಯ ಶಿಕ್ಷಣ ವ್ಯವಸ್ಥೆ! - ರಾಜ್ಯದೊಂದು, ಸಿಬಿಎಸ್ ಇ, ಐಸಿಎಸ್ ಇ ಇನ್ನೂ ಇಂತಹ ಹಲವಾರು ಸಿಲಬಸ್ ಗಳು ಮಕ್ಕಳ ನಿದ್ದೆ ಕೆಡಿಸುತ್ತಿವೆ. ಬಡವ, ಬಲ್ಲಿದ, ಪೇಟೆ ಮತ್ತು ಹಳ್ಳಿ ಮಕ್ಕಳನ್ನು ಕೂಡಾ ನಮ್ಮ ಈಗಿರೋ ಶಿಕ್ಷಣ ತಲೆಕೆಡಿಸ್ತಿದೆ. ಜೊತೆಗೆ ಟಿವಿ, ಇಂಟರ್ ನೆಟ್ ಕೂಡಾ. ಹೀಗಿರುವಾಗ ಸುಪ್ರೀಂ ಕೋರ್ಟು ಕನ್ನಡದಲ್ಲೇ ಕಲಿಸಬೇಕು ಅಂತಾ ರೂಲ್ ಮಾಡಿದ್ದರೆ ಏನಾಗ್ತಿತ್ತು? ಒತ್ತಾಯದಿಂದ ನಮ್ಮ ಮಕ್ಕಳು ಕನ್ನಡ ಕಲಿತು ಎಲ್ಲಾ ಕಡೆ ಕನ್ನಡ ಡಿಂಡಿಮ ಬಾರಿಸ್ತಾರೆ? ಅಂತೀರಾ? ಚೀನಾದಲ್ಲಿ ತಮಗೆ ಇಂಗ್ಲೀಷ್ ಬಂದಿದ್ದರೆ ಎಷ್ಟು ಚಂದ ಇರುತಿತ್ತು? ಅದೊಂದೇ ನಮ್ಮ ಕೊರತೆ, ಇಲ್ಲವಾಗಿದ್ದರೆ ಅಮೇರಿಕಾವನ್ನು ಮೀರಿಸುತಿದ್ದೆವು ಅಂತಾ ಗೈಡ್ ಹೇಳ್ತಿದ್ದ! ಅಲ್ಲಿ ಕೂಡಾ ಈಗ ಮಕ್ಕಳಿಗೆ ಇಂಗ್ಲೀಷ್ ಪಾಠ ನಡೆಯುತ್ತಿದೆ! 

ಹಾಗಾದರೆ ಏನು ಮಾಡಬೇಕು? ಏನಿಲ್ಲಾ, ಮಕ್ಕಳಿಗೆ ಯಾವುದೇ ಭಾಷೆಯಾದರೂ ಪ್ರೀತಿಸಲು ಹೇಳಿಕೊಡಬೇಕು. ತಪ್ಪಿಲ್ಲದಂತೆ ಕಲಿಯಲು ಪ್ರೇರೇಪಿಸಬೇಕು. ಮಾತು ಕಲಿಯುವ ಸಮಯದಲ್ಲಿ ನಮ್ಮ ಮಾತೃ ಭಾಷೆಯಲ್ಲಿಯೇ ಮಾತಾಡಬೇಕು. ಅವರಿಗೆ ಭಾಷೆಯ ಮಹತ್ವ ತಿಳಿಸಿಕೊಡಬೇಕು. ಆಗ ಯಾವುದೇ ಭಾಷೆ ಕಲಿತರೂ ಚಂದ ಕಲಿಯುತ್ತಾರೆ. 

ತುಳುವನ್ನೇ ಕೇಳಿಸಿಕೊಂಡು ಬೆಳೆದ ಒಬ್ಬ ಮಗನಿಗೆ ಪಾಠ ಮಾಡುವಾಗ ಅರ್ಥ ಗಳನ್ನು ತುಳುವಿನಲ್ಲಿಯೇ ಹೇಳಬೇಕು, ಮತ್ತೊಬ್ಬ ಮಾತು ಕಲಿಯುವಾಗ ಕನ್ನಡ ಹೆಚ್ಚು ಕೇಳಿಸಿಕೊಂಡದ್ದರಿಂದ, ಕನ್ನಡದಲ್ಲಿಯೇ ವಿವರಿಸಬೇಕು. ಕೈಲಾಸಂ ಆಗ್ಲೇ ಹೇಳಿದ್ದರು - ಮಕ್ಕಳ ಸ್ಕೂಲ್ ಮನೇಲಲ್ವೇ! 



ಅಂಬರೀಷ್ ಅವರು ವಿಕ್ರಮ್ ಆಸ್ಪತ್ರೆಯಲ್ಲಿ ಅಡ್ಮಿಟ್ ಆದಾಗ ಬರೆದದ್ದು.

ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುವುದಕ್ಕಿಂತ, ಆ ರೋಗಿಯ ಅಟೆಂಡರ್ ಗಳನ್ನು, ನೋಡಲು ಬರುವವರನ್ನು ಮ್ಯಾನೇಜ್ ಮಾಡುವುದು ಭಯಂಕರ ಕಷ್ಟ! ಅದರಲ್ಲೂ ಆ ರೋಗಿ ಸೆಲೆಬ್ರಿಟಿಯಾಗಿದ್ದರೆ, ಆಸ್ಪತ್ರೆಯ ಸಿಬ್ಬಂಧಿಗಳ ಕಥೆ ಮುಗಿಯಿತು. ವೈದ್ಯರು ಅವರ ಪಾಡಿಗೆ ಅವರ ಕೆಲಸ ಮಾಡಲು ಬಿಡದೇ ನೂರೆಂಟು ಪ್ರಶ್ನೆಗಳನ್ನು ಕೇಳಿ ತಲೆ ತಿಂದು ಬಿಡುತ್ತಾರೆ. ಬಂದವರೆಲ್ಲರಿಗೂ ಸಮಜಾಯಿಷಿ ನೀಡುವುದೇ ವೈದ್ಯರ ಹಾಗೂ ಸಿಬ್ಬಂಧಿಗಳ ಕೆಲಸವಾಗಿಬಿಡುತ್ತದೆ. ನೂರು ರೋಗಿಗಳನ್ನು ಮ್ಯಾನೇಜ್ ಮಾಡಬಹುದು ಆದರೆ ೧೦ ರೋಗಿಗಳ ೧೦೦ ಅಟೆಂಡರ್ ಗಳನ್ನಲ್ಲ! ಇನ್ನೂ ನೋಡಲು ಬರುವವರ ಕಾಟ ಬೇರೆ. ಹೋಗಿ ನೋಡದಿದ್ದರೆ ಏನಂದುಕೊಳ್ಳುತ್ತಾರೋ? ಎಂದಂದುಕೊಂಡು ಬರುವವರೇ ಹೆಚ್ಚು ಜನ. ಇವರಿಂದಾಗಿ ರೋಗಿಗಳಿಗೂ ರೆಸ್ಟ್ ಇಲ್ಲ, ಅಟೆಂಡರ್ ಗಳಿಗೂ ನೆಮ್ಮದಿಯಿಲ್ಲ! ಎನಾಯಿತೂ? ಎಂಬುದನ್ನು ವಿವರಿಸಿ, ವಿವರಿಸಿ, ಅಟೆಂಡರ್ ಗಳಿಗೂ ಪಕ್ಕದ ಬೆಡ್ ರೆಡಿ ಮಾಡಬೇಕಾಗುತ್ತದೆ! 

(ನಟ ಅಂಬರೀಷ್ ಹಾಗೂ ವಿಕ್ರಮ್ ಆಸ್ಪತ್ರೆಯ ಪರವಾಗಿ) — feeling sick.

ಪ್ರಜಾವಾಣಿ ದೀಪಾವಳಿ ವಿಶೇಷಾಂಕದಲ್ಲಿ ಬಂದಿದ್ದ ಸಂದರ್ಶನ


ಪ್ರಜಾವಾಣಿ ದೀಪಾವಳಿ ವಿಶೇಷಾಂಕದಲ್ಲಿ ವಿವೇಕ್ ಶಾನ್ಭಾಗ್ ಮತ್ತು ಜಯಂತ್ ಕಾಯ್ಕಿಣಿಯವರು ಚಂದ್ರಶೇಖರ ಕಂಬಾರ್, ಕಾರ್ನಾಡ್, ದೇವನೂರು ಮತ್ತು ಅನಂತ ಮೂರ್ತಿಯವರ ಸಂವಾದ ನಡೆಸಿದ್ದರು. ಇತ್ತೀಚಿನ ದಿನಗಳಲ್ಲಿ ನಡೆದ ಅಪರೂಪದ ಹಾಗೂ ಪ್ರಾಮಾಣಿಕತೆಯ ಸಂವಾದವೆಂದೇ ಹೇಳಬಹುದು. ಈ ಸಂವಾದದಲ್ಲಿ ಪರಸ್ಪರರ ನಡುವೆ ಇರುವ ನೆನಪುಗಳಿಂದ ಹಿಡಿದು ಸಂಸ್ಕೃತಿ, ಸಾಹಿತ್ಯ, ರಾಜಕೀಯ,ಜಾತಿ, ಭಾಷೆ, ಶಿಕ್ಷಣ ಈ ಎಲ್ಲವುಗಳ ಬಗ್ಗೆಯೂ ಒಳ್ಳೆಯ ಚರ್ಚೆ ನಡೆದಿದೆ. (ನನಗೆ ಅತ್ಯಂತ ಖುಷಿ ಕೊಟ್ಟ, ಕಳೆದುಹೋಗುತ್ತಿರುವ ಸಾಹಿತಿಗಳ ಮೇಲಿನ ಗೌರವವನ್ನು ಮರಳಿಸಿದ ಯಶಸ್ಸು ಈ ಸಂವಾದದ್ದು!) ಈ ಸಂವಾದದಲ್ಲಿ ದೇವನೂರು ಅವರು ಒಂದು ಮಾತು ಹೇಳಿದ್ದಾರೆ ‘ಇಂಡಿಯಾದಂಥ ದೇಶಗಳಲ್ಲಿ ಒಬ್ಬ ಲೇಖಕನನ್ನು ಕತೆ-ಗಿತೆ ಬರೆಯುವವನು ಎಂದು ಪರಿಗಣಿಸುವುದಿಲ್ಲ. ಅವನೊಬ್ಬ ಪ್ರವಾದಿ ಅಂತಲೋ, ಆಲ್ ರೌಂಡರ್ ಅಂತಲೋ ಅಂದುಕೊಂಡುಬಿಡ್ತಾರೆ!’ 

ಕಾರ್ನಾಡ್ ಹೇಳಿರುವುದು - ಕನ್ನಡ ಸಾಹಿತ್ಯಕ್ಕೆ ದೊಡ್ಡ ಡ್ಯಾಮೇಜ್ ಆಗಿರುವುದು ಜ್ಞಾನಪೀಠ ಅವಾರ್ಡ್ನಿಂದ! ಇವರನ್ನು ದೇವಾಂಶ ಸಂಭೂತರು ಅನ್ನುವಂಥ ಟ್ರೀಟ್ ಮೆಂಟ್ ಶುರುವಾಗಿಬಿಟ್ಟಿದೆ. ಯಶವಂತ ಚಿತ್ತಾಲರಂಥ ಲೇಖಕರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ’. ಗ್ರಂಥಾಲಯಕ್ಕೆ ಸಂಬಂಧಿಸಿದವರೊಬ್ಬರು ಜ್ಞಾನಪೀಠ ಪ್ರಶಸ್ತಿ ಪಡೆದ ನನಗೆ ಮತ್ತು ಅನಂತಮೂರ್ತಿ ಅವರಿಗೆ ಎರಡು ಟ್ರೋಫಿ ಅಂತಾ ಘೋಷಿಸಿಬಿಟ್ಟರು. ಜ್ಞಾನ ಪೀಠ ಪ್ರಶಸ್ತಿ ಪಡೆದಿದ್ದಕ್ಕೆ ನನಗ್ಯಾಕೆ ಟ್ರೋಫಿ? ನಾನು ತೊಗೊಳ್ಳೋದಿಲ್ಲ ಅಂದೆ. ಕಡೆಗೆ ಅನಂತಮೂರ್ತಿ ಅವರ ಬಳಿಗೆ ಹೋಗಿ ನೀವಾದರೂ ತೊಗೊಳ್ಳಿ ಅಂದರು. ಆಮೇಲೆ ಅವರಿಗೆ ಸನ್ಮಾನ ಆಯಿತು. ಆಮೇಲೆ ಗೊತ್ತಾಯಿತು. ಸನ್ಮಾನ ಮಾಡುತ್ತಿದ್ದ ವ್ಯಕ್ತಿ ನಿವೃತ್ತರಾಗುತ್ತಿದ್ದಾರೆ. ಅವರು ಪೇಪರ್ ನಲ್ಲಿ ಬರುವ ಕಾರಣಕ್ಕೆ ನಮ್ಮನ್ನು ಸನ್ಮಾನಿಸುತ್ತಿದ್ದಾರೆ ಅಂತಾ!

ಇದಕ್ಕೆ ಉತ್ತರವಾಗಿ ಅನಂತ ಮೂರ್ತಿ ಅವರು - ಬೇರೆ ದೇಶಗಳಲ್ಲಿ ಲೇಖಕರಿಗೂ ಸಾಮಾನ್ಯರಿಗೂ ಇಲ್ಲಿರುವಂಥ ಸಂಬಂಧಗಳಿಲ್ಲ. ಎಲ್ಲಾ ಪ್ರಶಸ್ತಿಗಳು ಬಂದಾಗಲೂ ಒಂದು ರೀತಿಯ ಉತ್ಸವದ ಸಂಭ್ರಮಗಳು ಇಂಡಿಯಾದಲ್ಲಿ ಇವೆ. ಇದನ್ನು ನಿರಾಕರಿಸುವುದು ಅಷ್ಟು ಸರಿಯಲ್ಲ ಅಂತ ನನಗೆ ಅನ್ನಿಸುತ್ತದೆ. ಅದನ್ನು ತಲೆಗೆ ಹಚ್ಚಿಕೊಳ್ಳಲು ಬಾರದು, ಹಾಗಂತ ನಿರಾಕರಿಸಲೂ ಬಾರದು. ಸಾಹಿತ್ಯ ಸಮ್ಮೇಳನ ಅನ್ನುವ ಉತ್ಸವ ಮಾಡ್ತಾರೆ. ಸಾವಿರಾರು ಜನ ಸೇರ್ತಾರೆ. ಕನ್ನಡದಂಥ ಒಂದು ಭಾಷೆ ಜಗತ್ತಿನ ಭಾಷೆಯೂ ಅಲ್ಲ. ಅಂಥ ಹೊತ್ತಿನಲ್ಲಿ ಈ ರೀತಿಯ ಪ್ರೋತ್ಸಾಹ ಕನ್ನಡಕ್ಕೆ ಬರುವುದನ್ನು ಲೇಖಕರು ತಿರಸ್ಕರಿಸಬಾರದು ಅಥವಾ ಅದನ್ನು ತಲೆಗೆ ಹಚ್ಚಿಕೊಂಡು ನಾನು ಬಹಳ ದೊಡ್ಡ ಲೇಖಕ ಆಗ್ತೀನಿ ಅಂತಾ ತಿಳಿಯೋದು ಅಲ್ಲ.

ಮಾತುಗಳಿಗೆ ಬದ್ಧತೆ ಬೇಕು (ಫೇಸ್ ಬುಕ್ ನಲ್ಲಿ ಬರೆದದ್ದು)

ಮಾತುಗಳಿಗೆ ತೂಕವಿದೆ, ಮಾತುಗಳನ್ನಾಡುವಾಗ ಬದ್ಧತೆ ಬೇಕು ಎಂಬುದು ಚಿಕ್ಕಂದಿನಿಂದ ನಾನು ಅರ್ಥ ಮಾಡಿಕೊಂಡಿರುವುದು. ಹೀಗೆ ಒಂದಷ್ಟು ವರ್ಷಗಳ ಹಿಂದೆ, ಯಾವುದೋ ಕೆಲಸವನ್ನು ನಾವೊಂದಿಷ್ಟು ಜನ ಮಾಡುತ್ತೇವೆ ಎಂದು ಒಪ್ಪಿಕೊಂಡಿದ್ದೆವು. ಆದರೆ ಮಾಡಲಾಗಿರಲಿಲ್ಲ. ನಾನದಕ್ಕೆ ಒಪ್ಪಿಕೊಂಡಿರುವ ಕೆಲಸ ಮಾಡದಿರುವುದಕ್ಕೆ, ಅವರ ಬಳಿ ಹೋಗಿ ಮಾಡಲಾಗುತ್ತಿಲ್ಲ ಎಂದು ವಿವರಿಸಿ, ಕ್ಷಮೆ ಕೇಳಿ ಬರಬೇಕು ಎಂಬುದು ನನ್ನ ಅನಿಸಿಕೆಯಾಗಿತ್ತು. ಉಹೂಂ, ಉಳಿದವರು ಇದಕ್ಕೆ ತಯಾರಿರಲಿಲ್ಲ. ನಮಗೆ ಕೆಲಸ ಕೊಟ್ಟಿರುವವರು, ನಾವು ಕೆಲಸ ಮಾಡುತ್ತೇವೆ ಎಂದೇನೂ ನಂಬಿರಲಿಲ್ಲ. ಹಾಗಾಗಿ ಹೋಗಿ ಹೇಳುವ ಅವಶ್ಯಕತೆಯಿಲ್ಲ ಎಂಬುದು ಉಳಿದವರ ತರ್ಕವಾಗಿತ್ತು. ಅವರು ನಂಬಿರುತ್ತಾರೋ, ಇಲ್ಲವೋ, ಮಾಡುತ್ತೇವೆ ಎಂದ ನಾವು, ಈಗ ಆಗುತ್ತಿಲ್ಲ ಎಂದು ಹೇಳಬೇಕು ಎಂಬುದು ನನ್ನ ತರ್ಕವಾಗಿತ್ತು. ಆ ಬೇರೆಯವರನ್ನು ಕನ್ ವಿನ್ಸ್ ಮಾಡಲಲ್ಲ, ನಮ್ಮ ಮಾತುಗಳನ್ನು ನಾವು ಆಡೇ ಇಲ್ಲ ಎನ್ನುವಂತೆ ಹೇಗಿರುವುದು? ಎನ್ನುವುದು ನನ್ನ ಕಿತ್ತಾಟವಾಗಿತ್ತು. ಈ ವಿಷಯಕ್ಕೆ ಸುದೀರ್ಘವಾಗಿ ಚರ್ಚೆಯಾಗಿ, ಕೊನೆಗೆ ನಾನು ಮಾತ್ರ ಅವರಿಗೆ ನನ್ನ ಅಸಹಾಯಕತೆಯನ್ನು ಹೇಳಿ, ಈ ಕೆಲಸ ಮಾಡುತ್ತಿಲ್ಲ ಎಂದಿದ್ದೆ. ಉಳಿದವರು ಯಾವುದೇ ರೀತಿಯ ತಪ್ಪೊಪ್ಪಿಗೆ ಕೊಟ್ಟಿರಲಿಲ್ಲ.

ಈಗ ಫೇಸ್ಬುಕ್ಕಿನಲ್ಲಿ ಗಳಿಗೆಗೊಂದು ಸ್ಟೇಟಸ್ ಅಪ್ಡೇಟ್ ಆಗುವುದು, ಕಮೆಂಟ್ ಗಳು, ಕೊನೆಗೆ ಎಲ್ಲವೂ ಇದ್ದಕಿದ್ದಂತೆ ಮಾಯವಾಗಿಬಿಡುವುದನ್ನು ನೋಡಿದಾಗ, ಮತ್ತೊಂದಿಷ್ಟು ಮನಸ್ಸಿಗೆ ಕಿರಿಕಿರಿ, ಹೌದು, ಮಾತುಗಳಿಗೆ ಬದ್ಧತೆ ಬೇಕು, ಫೇಸ್ ಬುಕ್ ಸ್ಟೇಟಸ್ ಆಗಬಹುದು ಅಥವಾ ಇನ್ ಬಾಕ್ಸ್ ಮೆಸೇಜ್ ಆಗಬಹುದು! ಬೇರೆಯವರನ್ನು ಒಪ್ಪಿಸಲಲ್ಲ, ನಮ್ಮ ಮುಂದೆಯೇ ನಾವು ಬೀಳದಿರಲು! ಅಲ್ಲವೇ?